ಹರಿವ ನದಿಗೆ ತನ್ನದೇ ದಿಕ್ಕು; ತನ್ನದೇ ದಾರಿ.
ಯಾವ ತತ್ವ-ಚಿಂತನೆಯ ಸಾಲುಗಳು ನಿಲುಕದು, ನದಿಯ ನಿರಂತರತೆಯ ಚಲನಶೀಲ ಕಾಯಕ ತತ್ವದ ಎದುರು. ಅನುಗಾಲವೂ ತನ್ನ ಪಾಡಿಗೆ ತಾನು ತನ್ನ ಅರಿವಿನ ಕಾಯಕವನು ಮುಗಿಸಿ ಅನಂತತೆಯ, ಅಪಾರತೆಯಲಿ ಲೀನವಾಗುವ ನದಿಯ ಮೌನಯಾನವೇ ಅಭೂತ ವೆನಿಸುವುದು. ತನ್ನ ಹುಟ್ಟಿನಿಂದ ಚಲನೆಯನೆ ಕಾಯಕವಾಗಿಸಿಕೊಂಡು, ತನ್ನ ಮಾರ್ಗವನು ಸೃಷ್ಟಿಸಿಕೊಳ್ಳುತ ಅನಂತ ನೆಲೆಯನು ಅರಸುತ ಸಾಗುವ ನದಿಯ ಅನವರತ ಸಾಗಾಟದಲಿ ಯಾವ ನವ ಅನ್ವೇಷಣೆ ಅಡಗಿದೆಯೋ. ಅದರ ಅಖಂಡ ಮೌನವನೊಮ್ಮೆ ಹೊಕ್ಕು ಉತ್ತರ ಹುಡುಕುವಾಸೆ ಮನಕೆ. ಆದರೂ ಆ ಮೌನದಲೇ ಅಡಗಿರುವ ಅಮೂರ್ತ ಪರಿಭಾಷೆಯನು ಅರಿವ ಪ್ರಯತ್ನದಲಿ ಮೂಡಿಬಂದ ಕವನ 'ಮೌನ ನದಿ' ಅದರ ಮೌನ ಭಾಷೆಯಲಿನ ಅರಿವು ನಮ್ಮದಾಗಲಿ...
ಮೌನ ನದಿ
ನದಿಯ ಮೌನ
ಇರುಳ ನೀರವತೆಗೂ
ಧೃತಿಗೆಡದ ಮೌನ!
ಹೊಳೆವ ಅಪರಿಮಿತ
ನಕ್ಷತ್ರಗಳ ಬಿಂಬಗಳಲಿ
ಮಿರುಗುವ ನದಿಯಲೆಗಳು.
ಬೀಗುವ ಚಂಚಲ ಮೋಡದೊಡಲ
ಕಂಡು ಮೋಹಕ ಮರುಗುವ,
ಚದುರಿ ಉದುರುವ ಹನಿಗೆ
ಮಡಿಲೋಡ್ಡುವ ನದಿ ಮೌನ!
ಇರುಳ ನೀರವತೆಗೂ
ಧೃತಿಗೆಡದ ಮೌನ!
ಹೊಳೆವ ಅಪರಿಮಿತ
ನಕ್ಷತ್ರಗಳ ಬಿಂಬಗಳಲಿ
ಮಿರುಗುವ ನದಿಯಲೆಗಳು.
ಬೀಗುವ ಚಂಚಲ ಮೋಡದೊಡಲ
ಕಂಡು ಮೋಹಕ ಮರುಗುವ,
ಚದುರಿ ಉದುರುವ ಹನಿಗೆ
ಮಡಿಲೋಡ್ಡುವ ನದಿ ಮೌನ!
ಹನಿನೀರು ಜಲವಾಗಿ
ನದಿಯಾಗಿ ಹೊರಳಿ,
ಮಿರುಗಿ,ನಲುಗಿ,
ನೆಲೆಗೊಳ್ಳದೆ ಹರಿವನೆ
ಹರಸುವ ನದಿ ಮೌನ!
ಎಚ್.ಎನ್.ಈಶಕುಮಾರ್
ನದಿಯಾಗಿ ಹೊರಳಿ,
ಮಿರುಗಿ,ನಲುಗಿ,
ನೆಲೆಗೊಳ್ಳದೆ ಹರಿವನೆ
ಹರಸುವ ನದಿ ಮೌನ!
ಎಚ್.ಎನ್.ಈಶಕುಮಾರ್
15 comments:
ನಿರ೦ತರತೆಯ/ಚಲನಶೀಲತೆಯ ಸ೦ಕೇತ ನದಿ. ಹರಿವ ನದಿ ಹೇಗೆ ಮೌನವಾಗಿರಲು ಸಾಧ್ಯ? ಭೊರ್ಗರೆವ, ಧುಮ್ಮಿಕ್ಕುವ, ಬಳುಕುವ, ಕುಲುಕುವ, ನೆರೆದ೦ಡೆಗಳಿಗೆ ಕಚಗುಳಿ ಇಡುವ, ಪಶು ಪಕ್ಷಿಗಳ ದಾಹ ನೀಗುವ ಹಾಗೂ ಆಶ್ರಯ ತಾಣ- ನದಿ. ನದಿಯ ಮೌನವನ್ನು ಮನವೇಕೋ ಒಪ್ಪುತ್ತಿಲ್ಲ. ಹಾಗ೦ತ ತಮ್ಮ ಕವನದ ವಿಚಾರವನ್ನು ತಳ್ಳಿ ಹಾಕುವ೦ತಿಲ್ಲ. ತಾವು ಸಾದರಿಸಿದ ವಿಚಾರವು ಅದ್ಭುತ. ಆದರೆ ಮೌನ ಶಬ್ದಕ್ಕೆ ಪರ್ಯಾಯವಾಗಿ "ನದಿಯ ನಿರ೦ತರತೆ" ಅಥವಾ "ನದಿಯ ಸ್ಥಿರ ಕಾರ್ಯ ತತ್ಪರತೆ" ಅಥವಾ ಬೆರಾವುದೊ ಪರ್ಯಾಯ ಶಬ್ದ ಬೇಕೆನಿಸಿತು.
ನಂಗೆ ನಿಮ್ಮ ಕವನದ ಧಾಟಿ ಹಿಡಿಸಿತು, ಪದ ಪ್ರಯೋಗ ಅದ್ಭುತ, ಇನ್ನಷ್ಟು ಕವನಗಳ ನಿರೀಕ್ಷೆಯಲ್ಲಿ
kavanada padapuncjagaLu tumba chennagive, nadiya movnadabagge chennagi barediruviri.
vandanegaLu...
ಪ್ರಿಯ ಈಶಕುಮಾರ್,
ನಿಮ್ಮ ಕವಿ ಮನಸ್ಸಿನ ಆಲೋಚನೆಗಳಿಗೆ ಮೂರ್ತ ರೂಪ ನೀಡಿದ್ದೀರಿ ಜೊತೆಗೆ ನೀರವ ರಾತ್ರಿಯ ಮೌನದಲಿ ನದಿಯ ಅಲೆಗಳ ಪುಳಕಗಳನ್ನು ಸಾದರ ಪಡಿಸಿದ್ದೀರಿ. ಆಂಗ್ಲ ಉಪನ್ಯಾಸಕರಾಗಿದ್ದು ಕೊಂಡು ಕನ್ನಡ ಪ್ರೀತಿ ಇರಿಸಿಕೊಂಡಿರುವುದು ಸಂತಸವೇ, ಈ ಬ್ಲಾಗಿನಲ್ಲಿರುವ ನಿಮ್ಮ ಕವನಗಳನ್ನು ಆಂಗ್ಲಭಾಷೆಗೂ ಭಾಷಾಂತರಿಸಿ ಕನ್ನಡದ ಕಂಪನ್ನು ಬೇರೆಯವರೂ ಆಂಗ್ಲ ಭಾವನುವಾದದಲ್ಲಿ ಅನುಭವಿಸಲಿ. ಕವನ ರಿಲ್ಯಾಕ್ಸ್ ನೀಡಿತು, ಅದಕ್ಕಾಗಿ ಧನ್ಯವಾದಗಳು..
kavana tumbaa chennaagide, nadiya prashaantate nillade oDuva adara kaarya kalaapa.... odi manasige ullaasa needide.
ನದಿಯ ಮೌನದ ತೀವ್ರತೆ ಚೆನ್ನಾಗಿದೆ... Nice one
nadiyu tanna maundalli mareyaagirisiruva bhaavagalannu balu sogasaagi varnisiruviri
ಈಶ್, ನದಿ-ದಿನ ಎರಡೂ ಹರಿಯುತ್ತವೆ
ನದಿ ಹರಿವುದು, ಹರಿದಂತೆ ಕಾಣುವುದು..ಆದ್ರೆ ಮೌನ ಎಂಬುದರ ಪರಿಭಾಷೆಗೆ ಒಂದು ದಿಶೆ ನೀಡಿದೆ ನಿಮ್ಮ ಕವನ.
ನದಿಯ ಮೌನ ..ಭೋರ್ಗರೆದಾಗಲೂ ಇರುತ್ತೆ..ಅಲ್ಲವೇ..? ನಿಶ್ಚಲವೆನಿಸುವ ಚಲನೆಯಲ್ಲೂ ಇರುತ್ತೆ, ದಿನ-ರಾತ್ರಿ ಇರುತ್ತೆ..ಚನ್ನಾಗಿ ಉಲ್ಲೇಖಿಸಿದ್ದೀರಿ
thumba chennaagide... innu erdu saalu serisbhudittenooo noodu.
ಈಶ ರವರೇ,
ಹನಿನೀರು ಜಲವಾಗಿ
ನದಿಯಾಗಿ ಹೊರಳಿ,
ಮಿರುಗಿ,ನಲುಗಿ,
ನೆಲೆಗೊಳ್ಳದೆ ಹರಿವನೆ
ಹರಸುವ ನದಿ ಮೌನ!
ಕವನದ ಎಲ್ಲ ಸಾಲುಗಳು ಚೆನ್ನಾಗಿವೆ. ಅದರಲ್ಲೂ ಈ ಮೇಲಿನ ಸಾಲುಗಳನ್ನು ಓದಿದಾಗ, "ಮನುಷ್ಯರಾದ ನಾವು ಗುರಿಯನ್ನು ಮುಟ್ಟಬೇಕಾದರೆ ನದಿಯಂತೆ ನಿಲ್ಲದೆ, ಅಡೆತಡೆಗಳ ಜೊತೆ, ಸಾಗುತ್ತ ಸಾಧಿಸಬೇಕೆಂಬುದು" ತಿಳಿದುಕೊಳ್ಳಬೇಕೆಂದೆನಿಸಿತು.
ಚಿತ್ರ
kavana chennagide, gurimuttuvavaregu nillada adara ota nanagista. kelavomme mouna, kelavomme bhorgaretha, kelavomme madhura julu julu ninaada. nammalli kelavomme novu,kelavomme nalivu, munisu,hata heege. aha!! ottare nadi ondu adbhutha.
ಬಾಲ್ಯದಲ್ಲಿ ಪಾಠಲ್ಲಿದ್ದ ನದಿ ಬಗ್ಗೆಯ ಕವನವೊ೦ದು ನೆನಪಾಗುತ್ತಿದೆ. ಬಹುಶಃ ಪುತಿನ-ರ ಕವನವಿರಬೇಕು.
ಅದರ ಕೆಲವು ಸಾಲುಗಳು ಹೀಗಿವೆ.
ಸ್ಥವಿರಗಿರಿಯ ಚಲನದಾಸೆ
ಮೂಕವನದ ಗೀತೆದಾಸೆ
ಸೃಷ್ಠಿಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ
ಬಾಳ್ವೆಗೆಲ್ಲಾ ನಾನೇ ನಚ್ಚು
ಲೋಕಕೆಲ್ಲಾ ಅಚ್ಚುಮೆಚ್ಚು
ನಾನೇ ನಾನೇ ವಿಧಿಯ ಹುಚ್ಚು
ಹೊನಲರಾಣಿ ನಾ
ಈ ಮೇಲಿನ ಸಾಲುಗಳಲ್ಲಿ ಸ್ಥಬ್ಧಥೆಯ- ಚಲನಶೀಲತೆ, ಮೌನದ -ಮಾತು, ನದಿ ಎನ್ನುತ್ತಾನೆ ಕವಿ. ನಿರ೦ತರವಾಗಿ ತನ್ನ ಹರಿವ ಕೆಲಸ ಮೌನದಿ೦ ಮು೦ದುವರೆಸುವ ನದಿ ವೈಚಿತ್ರವೆ೦ದು ತಾವು ಹೇಳುವಿರಿ- ಎರಡು ಸರಿಯೇ. ಕವಿಗಳ ಮನ, ವಿಚಾರ, ಒ೦ದು ಅದ್ಭುತಲೋಕವೆ೦ಬುದು ಮಾತ್ರ ಸತ್ಯ.
kavana tumbaa ishtavaaytu... :-)
Post a Comment