Wednesday, March 24, 2010

ಕತ್ತಲ ಕೋಣೆಯ ಜೀವಧಾತು..















ನನ್ನ
ನಿನ್ನ ಏಕಾಂತದ ಕ್ಷಣಗಳ
ಕುರುಹು, ಕಣ್ಣ ಮುಂದಿಂದು ನಲಿದಾಡುತಿರಲು
ಮನದಲಿ ಹೂತಿದ್ದ ಯಾವುದೋ ದುಗುಡ
ಮರೆಯಾದ ನಿರಾಳ. ನನ್ನ
ನಿನ್ನಲ್ಲಿ
ಭಾವ-ಭಾವಗಳು ಮಿಂದು, ಉಸಿರು
ಬೆರೆತ ಪ್ರೇಮಾಂಕುರದ ಕೂಸೇನು ಅಲ್ಲ
ನನ್ನ ಕಂದ! ಬದುಕಿನ ನಿಷ್ಕರುಣ
ವಾಸ್ತವಕೆ ಸಾಕ್ಷಿ ನನ್ನ ಕಂದ!
ಜೀವದ ಹುಟ್ಟು 'ಕ್ರಿಯೆ'. ಕ್ರಿಯೆಗೂ
ಭಾವಕೂ ಸಂಬಂಧವೀಹಿನ ಪ್ರತಿರೂಪ
ನನ್ನ ಕಂದ!


ನೀರವ ಕತ್ತಲ ಕೋಣೆಯಲಿ ಹರವಿದ
ಹಾಸಿಗೆ
ಯ ಮೇಲೆ ಹಸಿದ ಮೈಗಳು
ಬೆವೆ
ತು, ನಾಳೆಗಳ ಮರೆತು ದಾಹವ
ಇಂಗಿಸುತಲೇ, ಬಂಜೆಯ ಬಯಲಲಿ
ಬಿತ್ತಿದೊಂದು ಬೀಜವ ಪೊರೆದ ತಾಯ ಗರ್ಭ
ನೋವ ನುಂಗಿ ಪೋಷಿಸಲೇ ಅವಳ
ಸಹಜ ಪ್ರಕೃತಿ, ನೀ ಅವಳ ಕಣ್ಣಲ್ಲಿ ಮಗುವಾಗೆ,
ಎದೆಹಾಲ ಬಸಿದೆಳೆದ ಬಾಯಲಿ
ನೀ ಒಮ್ಮೊಮ್ಮೆಯು ಅಮ್ಮ ಎನಲು
ಮರೆತಳವಳು ನಿನಗಾಗಿ ಕತ್ತಲ ಕೋಣೆಯಲಿ
ತಾನುಂಡ ನೋವುಗಳ!

Wednesday, March 10, 2010

ನೆನೆಯುತ ಮತ್ತೆ ಮತ್ತೆ...


ನೀ ಹಾಗೇ ಸುಮ್ಮನೆ
ನಡೆದು ಹೋಗಬಹುದಿತ್ತು
ಮೌನವೇ ನನ್ನ ಉತ್ತರವ
ಹುಡುಕುತಿತ್ತು, ಆದರೇ ನನ್ನ
ಪ್ರೀತಿಯ ಅನುಮಾನಿಸಿ ನೀ
ಆಡಿದ ಮಾತುಗಳು ಉಳಿದಿವೆ

ಎದೆಯಲಿ ನಿನ್ನ ನೆನೆಸುತ ಮತ್ತೆ ಮತ್ತೆ..

ಬಾನಲಿ ಸಂಜೆಯ ಸೂರ್ಯ

ಕವನ ಬರೆವ ಹೊತ್ತಿಗೆ,
ನೀ ಬಂದು ಹಾಗೇ ಕುಳಿತೆ

ನನ್ನ ಮುಂದೆ...


ನಾ ಕೇಳುತ್ತಿರಲಿಲ್ಲ,
ನೀ ಕಾರಣ ಹೇಳಬೇಕಲ್ಲ
ಇವನಿಗೆ ಎಂಬ ಕುಂಟು
ನೆಪವ ನೀನೆ ಹುಡುಕಿ
ನೆನಪಿನಾಳಕೆ ಇಳಿದೆ
ನೀ ಬಯಸಿ ಬಯಸಿ ದೂರಾದೆ...