Wednesday, March 24, 2010

ಕತ್ತಲ ಕೋಣೆಯ ಜೀವಧಾತು..ನನ್ನ
ನಿನ್ನ ಏಕಾಂತದ ಕ್ಷಣಗಳ
ಕುರುಹು, ಕಣ್ಣ ಮುಂದಿಂದು ನಲಿದಾಡುತಿರಲು
ಮನದಲಿ ಹೂತಿದ್ದ ಯಾವುದೋ ದುಗುಡ
ಮರೆಯಾದ ನಿರಾಳ. ನನ್ನ
ನಿನ್ನಲ್ಲಿ
ಭಾವ-ಭಾವಗಳು ಮಿಂದು, ಉಸಿರು
ಬೆರೆತ ಪ್ರೇಮಾಂಕುರದ ಕೂಸೇನು ಅಲ್ಲ
ನನ್ನ ಕಂದ! ಬದುಕಿನ ನಿಷ್ಕರುಣ
ವಾಸ್ತವಕೆ ಸಾಕ್ಷಿ ನನ್ನ ಕಂದ!
ಜೀವದ ಹುಟ್ಟು 'ಕ್ರಿಯೆ'. ಕ್ರಿಯೆಗೂ
ಭಾವಕೂ ಸಂಬಂಧವೀಹಿನ ಪ್ರತಿರೂಪ
ನನ್ನ ಕಂದ!


ನೀರವ ಕತ್ತಲ ಕೋಣೆಯಲಿ ಹರವಿದ
ಹಾಸಿಗೆ
ಯ ಮೇಲೆ ಹಸಿದ ಮೈಗಳು
ಬೆವೆ
ತು, ನಾಳೆಗಳ ಮರೆತು ದಾಹವ
ಇಂಗಿಸುತಲೇ, ಬಂಜೆಯ ಬಯಲಲಿ
ಬಿತ್ತಿದೊಂದು ಬೀಜವ ಪೊರೆದ ತಾಯ ಗರ್ಭ
ನೋವ ನುಂಗಿ ಪೋಷಿಸಲೇ ಅವಳ
ಸಹಜ ಪ್ರಕೃತಿ, ನೀ ಅವಳ ಕಣ್ಣಲ್ಲಿ ಮಗುವಾಗೆ,
ಎದೆಹಾಲ ಬಸಿದೆಳೆದ ಬಾಯಲಿ
ನೀ ಒಮ್ಮೊಮ್ಮೆಯು ಅಮ್ಮ ಎನಲು
ಮರೆತಳವಳು ನಿನಗಾಗಿ ಕತ್ತಲ ಕೋಣೆಯಲಿ
ತಾನುಂಡ ನೋವುಗಳ!

11 comments:

sarithacv27 said...

ತುಂಬಾ ಚೆನ್ನಾಗಿದೆ.. ಪ್ರತಿಯೊಬ್ಬರ ಜೀವನದಲ್ಲು ನಡೆಯುವಂತದ್ದು... ತುಂಬಾ ಚೆನ್ನಾಗಿ ವಿಷ್ಲೇಸಿದ್ದೀರಿ......

ಸೀತಾರಾಮ. ಕೆ. / SITARAM.K said...

Super!!!
ತು೦ಬಾ ಚೆನ್ನಾಗಿದೆ

ಸವಿಗನಸು said...

ಚೆಂದದ ಸಾಲುಗಳು....

Anonymous said...

kade 3 saalugalu fully loaded agi ide. nimma reality pattedaari kelasa munduvareyali.

V.R.BHAT said...

ಚೆನ್ನಾಗಿದೆ ಕವಿತೆ ಮತ್ತು ಭಾವನೆ!

ಕಡಲ ತೀರದ ಕಾಡು ಮಲ್ಲಿಗೆ!! said...

ಜೀವ ಜೀವ ದ ಅಂತರಾಳದ ಭಾವನೆ, ವಾಸ್ತವದ ಕನ್ನಡಿ, ನಿಮ್ಮ ಪದ್ಯ ನನಗೆ ಬಹಳ ಕಾಡಿತು. ಮೊದಲ ಬಾರಿಗೆ ಬೇಂದ್ರೆ ಅಥವಾ ಅಡಿಗರು ಬರೆದಿರುವುದೇನೋ ಅಂದು ಕೊಂಡೆ, ಆದರೆ ಈಶ ಸರ್ ಬರೆದಿದು ಎಂದ ತಕ್ಷಣ ಬಹಳ ಖುಷಿ ಆಯಿತು . ನಿಮ್ಮ ಅರಿವಿನ ವಿಸ್ತಾರ ಜೀವನ ಗ್ರಹಿಕೆ ಬಹಳ ಅರ್ಥಪೂರ್ಣವಾಗಿದೆ. ಕಂದನ ಎಡೆಗಿನ ತುಡಿತದ ಕ್ರಿಯೆ ವಾಸ್ತವದ ಮತ್ತು ಭಾವನೆಗಳ ತರ್ಕಕ್ಕೆ ಸಿಲುಕಿರುವುದು ನಮ್ಮ ಯೋಚನೆಗಳ ಉದ್ಭವಕ್ಕು ಕಾರಣವಾಗಿದೆ .ಅಮ್ಮ ಎನ್ನುವುವ ಕಂದನ ಜೊತೆಗಿನ ಬಂದವ್ಯ ಪ್ರಕೃತಿ ದತ್ತವಾಗಿ ಬಂದದ್ದೆ ? , ಮಗುವಿನಿನೊಂದಿಗೆ ಜೊತೆ ಜೊತೆ ಯಾಗಿ ಬೆಳೆದು ಬಂದದ್ದ ?ಅಥವಾ ಭೂಮಿಗೆ ಅದರ ಅಸ್ಥಿಥ್ವಕ್ಕ್ಕೆ ಬಂದಿದ್ದ? ಈ ಪ್ರಶ್ನೆಗಳು ನನ್ನ್ನಲಿ ಉದ್ಬವಿಸಿದವು. ಇಂಥ ಭಾವನೆಗಳು ತಾಯಿಯಲ್ಲಿ ಬರಲು ಕಾರಣ ಅರ್ಥಿಕ ತೊಂದರೆ, ಸಾಮಾಜಿಕ ಅಸಮಾನತೆ ಇರಬಹುದ ? ಏಕೆಂದರೆ ಬಹಳಷ್ಟು ಅಸಂಭವ ಘಟನೆಗಳನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ, ಅದಕ್ಕಾಗಿ ಈ ಕೆಲವು ಪ್ರಶ್ನೆಗಳು ನಿಮ್ಮ ಪದ್ಯದ ಮೂಲಕ ನನ್ನ ಕಾಡಿದವು :)

charitha said...

ಮೊದಲ ಚಿತ್ರ ಮತ್ತು ಕೊನೆಯ ಸಾಲುಗಳು ಆಪ್ತವಾಗಿವೆ ಈಶ... :-)

ಜಲನಯನ said...

ಈಶ್, ಚಿತ್ರಗಳೆರಡೂ ಒಂದಕ್ಕೊಂದು ಪೂರಕ..ಆದ್ರೂ ಮೊದಲನೆಯದು ಅತಿ ಸೂಚ್ಯ ಸಾರಾಂಶದಂತಿದೆ ನಿಮ್ಮ ಕವನಕ್ಕೆ...
ತಾಯಿ-ತಾಯಾಗುವ ಮುಂಚೆ ಮತ್ತು ತಾಯಿಯಾದ ಮೇಲೆ...ಪೂರ್ಣ ಬದಲಾಗುತ್ತಾಲೆ ಎಂದೇ ನನ್ನ ಭಾವನೆ...ಎರಡರಲ್ಲೂ ಸೇವಾ ಸಮರ್ಪಣ ಭಾವ...ತಂದೆ ತಾಯಿಯ ಸೇವೆ, ಗಂಡನ ಸೇವೆ ಮತ್ತೆ ಮಕ್ಕಳ ಪುರೋಭಿವೃದ್ಧಿ...ಅದಕ್ಕೇ ತಾಯಿ ಪ್ರತ್ಯಕ್ಷ ದೈವ.

Empathy said...

ಒಳ್ಳೆಯ ಬರಹ. ಕತ್ತಲ ಕೋಣೆಯಲಿ ಹರವಿದ ಹಾಸಿಗೆಯ ಮೇಲೆ ಎನ್ನುವುದು ಸೀಮಿತಾರ್ಥಕ್ಕೆನಾಂದಿ. ಕೋಣೆಯಲಿ ಹಾಸಿಗೆ ಹರವಿದೆ, ಕ್ರಿಯಾತ್ಮಕ ಕಾರ್ಯದಲಿ ಕತ್ತಲೆತೂರಿರುವುದು ಋಣಾತ್ಮಕ. ಉಳಿದದ್ದು ಸಹಜ ಪ್ರಕ್ರಿಯೆಯ ಸಮ್ಮೋಹ.

ವಾಣಿಶ್ರೀ said...

ಎಲ್ಲಾ ತಾಯಂದಿರ ಒಡಲಾಳದ ಮಾತುಗಳನ್ನು ಅರ್ಥಪೂರ್ಣವಾಗಿ ವ್ಯಕ್ತ ಪಡಿಸಿದ್ದೀರಿ . ನನ್ನ ತುಂಬು ಹೃದಯದ ಅಭಿನಂದನೆಗಳು .

AntharangadaMaathugalu said...

ಕವನ ಚೆನ್ನಾಗಿದೆ ಈಶ್...
ಬೆಳಿಗ್ಗೆ ಇನ್ನೂ ’ಆಕಾಶದ ನೀಲಿಯಲ್ಲಿ....ಸ್ತ್ರೀ ಎಂದರೆ ಅಷ್ಟೇ ಸಾಕೆ..’ ಹಾಡು ಕೇಳಿದೆ... ಕೊನೆಯ ಸಾಲುಗಳು ತುಂಬಾ ಭಾವುಕವಾಗಿವೆ. ಎಷ್ಟು ಸತ್ಯವಾದ ಮಾತು. ಮಗು ಒಮ್ಮೊಮ್ಮೆ ಅಮ್ಮಾ ಎಂದಾಗಲೂ ತಾಯಿ ತನ್ನೆಲ್ಲಾ ನೋವುಗಳನ್ನೂ ಮರೆವಳು.... ಅದೇ ತಾಯ್ತನದ ವಿಶೇಷತೆ ಅಲ್ಲವೇ...?