Thursday, October 1, 2009
ಬಯಲಲಿ ಬಯಲಾಗುತ...
ಬಯಲಲಿ ಬಯಲಾಗುತ...
ನಮ್ಮ ಹಮ್ಮು-ಬಿಮ್ಮುಗಳ ವಸ್ತ್ರ ಕಳಚಿ, ಸರಳತೆಯ,ನಿರಂಹಕಾರದ ಬಟ್ಟೆತೊಟ್ಟು,ಎಲ್ಲರಲ್ಲೋಬ್ಬರಾಗುತ ಬಯಲಲಿ ಬಯಲಾಗುವ ಸವಿಯ ರಸಧಾರೆಯ ಪಡೆಯುವ ನಾವೆಲ್ಲ.....
ಹನಿ ಹನಿಯಾಗಿ ಬಿದ್ದ ಮಳೆಯ
ಮೋಹಕ ಚುಂಬನಕೆ ಬಯಲಾಗುತ
ಧರೆ, ತನ್ನೊಡಲ ಹಸಿವನೊಮ್ಮೆಗೆ
ನೀಗಿಕೊಳ್ಳುತ್ತ ಉಸಿರಾಡುವ ಕಣ ಕಣಕೂ
ತಾಯ ಗರ್ಭವ ಧಾರೆ ಎರೆದು
ಹಸಿ ಹಸಿರ ಚೆಲುವ ರಾಶಿ ನಳ ನಳಿಸೆ
ಬಯಲಾಂತ ಬಯಲ ತುಂಬೆಲ್ಲ
ಹನಿ ಹನಿಯಲು ಅಡಗಿ ಪ್ರೀತಿ
ಚಿಗುರಾಗಿ,ಎಲೆಯಾಗಿ, ಹೂವಾಗಿ ಹಬ್ಬಲು,
ಆ ಜಗದ ಸಿರಿಗೆ ಸೋಲುವ ಪ್ರತಿ ಎದೆಯಲು
ಲವಲೇಶ ಪ್ರೀತಿ ಅಂಕುರಿಸಿ ಬೆಳಗಲೋ!
ಬಯಲು ಅವರೆದೆಯ ಪ್ರೀತಿ ಬಯಲು.
ತನ್ನ ಒಡಲಲಿ ಕನಸ ಬುತ್ತಿಯ ಹೊತ್ತು
ಬರಡಾದ ಬಯಲಲಿ ಬಿತ್ತು, ಒಲವ
ರಸಧಾರೆಯ ಹರಿಸಿ ಹರಿವ ನದಿಯ
ಉನ್ಮಾದ ಕಲರವ, ಹಳವಳಿಸಿ ನಲಿವ
ಪೈರಿನ ಪಚ್ಹ ಹಸಿರಲಿ ಚಿಮ್ಮುತಿಹ
ಪ್ರೀತಿ, ಕುಡಿಯೊಡೆದು ಅರಳಿ ನಗಲಿ
ನಲಿವು ಬಯಲು ಬಯಲಲಿ
ಎಲ್ಲರೆದೆಯಲಿ ಬಚ್ಚಿಟ್ಟ ಕನಸು
ಬಯಲು ಬಯಲಲಿ ಬಯಲಾಗಲಿ....
..............ಎಚ್.ಎನ್.ಈಶಕುಮಾರ್
Subscribe to:
Post Comments (Atom)
6 comments:
ಮಳೆ ಧರೆಗೆ, ಬೆಳೆಗೆ, ಹಾ-ತೊರೆವ ಬಾಯ್ಬಿಟ್ಟ ಹೊಲಕ್ಕೆ, ಗೂಡುಕಟ್ಟಿದ ಜೀವಕ್ಕೆ, ತೇವವಿಲ್ಲದ ನೀರಡಿಕೆಬಾಯಿಗೆ..ಹೀಗೆ..ಹತ್ತು ಹಲವು ಅವಶ್ಯಕತೆಗಳನ್ನು ಮಳೆಯಹನಿ ನೀಗುವುದನ್ನು ಅಥಗರ್ಭಿತ ಶಬ್ದಬಳಕೆಯಲ್ಲಿ ತೇಲಿಬಿಟ್ಟಿದ್ದೀರಿ..ಕವನವಾಗಿ ಹರಿಯಲು....ಅದರಲ್ಲೂ ಕೆಳಗಿನ ಸಾಲುಗಳು....ಗಮನ ಸೆಳೆದವು
ನಲಿವು ಬಯಲು ಬಯಲಲಿ ಎಲ್ಲರೆದೆಯಲಿ ಬಚ್ಚಿಟ್ಟ ಕನಸು
ಬಯಲು ಬಯಲಲಿ ಬಯಲಾಗಲಿ....
ಎಲ್ಲರೆದೆಯಲಿ ಬಚ್ಚಿಟ್ಟ ಕನಸು
ಬಯಲು ಬಯಲಲಿ ಬಯಲಾಗಲಿ....
haagu nanasaagali.
nice one!
ಪ್ರೀತಿ, ಕುಡಿಯೊಡೆದು ಅರಳಿ ನಗಲಿ
ಸೊಗಸಾದ ಸಾಲು.. ಇಗೆ ತುಂಬ ಸಾಲುಗಳು ನಿನ್ನ ಬರವಣಿಗೆಯಿಂದ ಬರುತಿರಲಿ...
ಚೆನ್ನಾಗಿದೆ..ಬಯಲು ಬಯಲಲಿ...
me: male bachchitta kanasugala bayaligeleyuva kalpaneye chendaddu....male kevala bhuviya chendakkalla manasina kole toledu kanasu srujisuvaudakke emba kalpane adbhuta...
superbbbb.... bayalu bayalalali bayalaagali... tumbaa chennaagide
siply superb:):)
Post a Comment