ಸೃಷ್ಟಿಯ ವಿಶೇಷವೇ ಹೊಸತನ, ಹೊಸತನದ ಬೆರಗು. ಯಾವುದೇ ಹೊಸತು ಸೂಜಿಗಲ್ಲಿನಂತೆ ನಮ್ಮನ್ನು ಸೆಳೆಯುವುದು. ಸೃಷ್ಟಿಯಲಿನ ನವೀನತೆಯ ಅನುಭವವೇ ಅಮೋಘ. ಅದರಲ್ಲೂ ಮಗುವಿನ ಹುಟ್ಟಿನ ಆ ದಿವ್ಯತೆಯ ನವ್ಯವಂತು ಅನುಭಾವವೇ ನಮಗೆ. ಹುಟ್ಟಿನಿಂದ ಇಲ್ಲಿಯವರೆಗೆ, ಹುಟ್ಟಿದ ದಿನವೇ ಯಾವುದೇ ಮಗುವನ್ನು ನೋಡದಿದ್ದ ನನಗೆ ನನ್ನ ಅಕ್ಕನ ಹುಟ್ಟಿದ ಮಗುವನ್ನು ಕಂಡ ಕ್ಷಣವೇ ನನಗನಿಸಿದ್ದು 'ನಾನು ಸಹ ಹೀಗೆ ಇದ್ದೇನೆ'. ಒಂಭತ್ತು ತಿಂಗಳು ತಾಯ ಗರ್ಭದಲ್ಲಿ ಕಲೆತು,ಜಗಕೆ ಬಂದ ದಿನದಿಂದಲ್ಲೇ ಶೂನ್ಯ ನೋಟವ ಬೀರುತ ಎಲ್ಲವ ಕಂಡು ಬೆರಗಾಗುತ್ತಿದ್ದೇನ. ನಾವೆಲ್ಲ ಆ ಹಂತದಿಂದಲೇ ಬೆಳೆದು ಹೀಗೆ ಆಗಿದ್ದೆವೆಯೇ ಎಂದು ತುಲನಾತ್ಮಕವಾಗಿ ಕಲ್ಪಿಸಿಕೊಳ್ಳಲು ಆಗುವುದೇ ಇಲ್ಲ. ಅದೇನೇ ಇದ್ದರು ಹುಟ್ಟಿನ ಆ ದಿವ್ಯತೆ, ಹಾಲುಗೆನ್ನೆ, ಹೂ ಮೈಯ ಬೆತ್ತಲೆ ಸೌಂದರ್ಯ, ಭಾವದ ಲೇಪವಿರದ ಕಂದನ ಆ ನಗು-ಅಳು ಎಲ್ಲವು ನನ್ನಲ್ಲಿ ಸೃಷ್ಟಿಸಿದ ಬೆರಗಿನ ಅನುಭವದ ಭಾವಹಂದರವೇ ಈ ಕವನ.
ಸೃಷ್ಟಿಯೇ!!
ಆ ನಗುವಿನಲ್ಲೊಂದು ಚೈತ್ರಧಾರೆ
ಹೊಸ ಬಗೆಯ ನವನೀತ ಚೆಲುವಿನಂದದ
ಸೊಬಗ ಬುಗ್ಗೆ ಚಿಮ್ಮಲು ಪ್ರತಿ ನಗೆಯಲು,
ಕಂಡ ಕಂಗಳಿಗಿನ್ನಾವ ಹರ್ಷಧಾರೆಯ
ಹೊನಲು ಸುರಿಯಬೇಕು ಸೃಷ್ಟಿಯೇ!
ಯಾವ ನಗುವದು? ಚೆಲುವು-ನಲಿವಿನ,
ಸಂತಸ-ಸಂಭ್ರಮದ ಆನಂದದ ಚಿಲುಮೆಯೆ
ರಾಗ-ದ್ವೇಷ,ಭಾವಗಳ ಗೊಜಲಿಲ್ಲದ,
ಆ ನಗೆಗಾವ ಹೆಸರಿಲ್ಲದ, ಮುಗ್ದವೆನಲು
ಜಗವೇ ಅರಿವಿಗೆ ಬಾರದ ಆ ಮೊದಮೊದಲ
ನಗು ಬರಿಯ ನಗುವಷ್ಟೇ ಸೃಷ್ಟಿಯೇ!
ನಿನ್ನಂತೆ ಭವಭಾರದ ಅಂಟಿಲ್ಲ
ಮೊಗಮೊಗದಲು ನಗೆ ಹೊಮ್ಮಿಸುವ ಆ ನಗೆಗೆ.
ಜೀವ-ಜೀವಗಳ ಸಂಭಂದ ಬೆಸೆದ
ಭಾವ-ಭಾವಗಳೋಲುಮೆಯ ಬಿಸಿಯುಸಿರ
ಬಸಿರು ನವಪಲ್ಲವ ಕಲೆತು ತಾಯ ಒಡಲಲಿ
ಹೂಮೈಯ ರೂಪ ತಾಳಿ,ಹಸಿಮೈಯ
ಚೆಲುವಲೇ ಧರೆಗೆ ಜಾರಿ ನಲಿವ
ನಗೆಯ ಹೊಂಬಣ್ಣಕೆ ನೀ ಮಾತ್ರ
ಸಾಟಿಯು ಸೃಷ್ಟಿಯೇ!
ಎಚ್.ಎನ್.ಈಶಕುಮಾರ್
12 comments:
maguvinashte muddagide kavana:)
ಬರಹವನ್ನು ಓದಿ ಮನಸ್ಸು ಮಗುವಾಯಿತು...
ಮಗುವಿನ ಹುಟ್ಟು ಎಷ್ಟು ವಿಸ್ಮಯವೋ.. ಮಗುವಿನ ಆವಾ-ಭಾವಾಗಳು ಅಷ್ಟೇ ವಿಸ್ಮಯ...
ನನ್ನ ಅಕ್ಕನ ಮಗುವನ್ನ ನೋಡಿದಾಗಲೆಲ್ಲ ಅನ್ನಿಸುವುದೇ ಏನೋ ಒಂದು ಆಶ್ಚರ್ಯ... ಅದು ಏಕೆ ಅಳುತ್ತದೆ.. ಅದು ಸುಮ್ಮನೆ ಇದ್ದಾಗ ನೋಡುವ ನೋಟ.. ಕಲ್ಮಶವಿಲ್ಲದ ಮನಸ್ಸು... ನಿದ್ರಿಸುವ ಚೆಂದ ನೋಡಲು ಏನೋ ಆನಂದ....
ಒಳ್ಳೆಯ ಕವನ....
nice
ಈಶುಕುಮಾರ್...
ಜೀವ ಸೃಷ್ಟಿಯ ವಿಸ್ಮಯ ತುಂಬಾ ಸೊಗಸಾಗಿದೆ...
ಶಬ್ಧಗಳ ಭಾವ ಇಷ್ಟವಾಯಿತು...
ಮಗುವಿನ ಮುಗ್ಧತೆ..
ಸ್ವಾರ್ಥವಿಲ್ಲ ಆ ನೋಟ ಎಲ್ಲರಿಗೂ ಇಷ್ಟ..
ಸೊಗಸಾದ ಕವನಕ್ಕೆ ಅಭಿನಂದನೆಗಳು...
ಈಶ ಅವರೇ,
ಈ ಕವನದ ಜೊತೆಗೆ ಮಗುವಿನ ಭಾವಚಿತ್ರ ಇದ್ದಿದ್ದರೆ ಇನ್ನು ಅದ್ಭುತವಾಗಿರುತ್ತಿತ್ತು. ಆಗ ಹುಟ್ಟಿರುವ ಮಗುವನ್ನು ನೋಡಲು ಹೇಳಲಾರದಷ್ಟು ಚೆನ್ನಾಗಿರುತ್ತದೆ. ದಿನ ಕಳೆದಂತೆ ಆ ಮಗು ಬೆಳೆಯುವುದನ್ನು ಅದರಲ್ಲೂ ದಿನಕ್ಕೊಂದು ಬೆಳವಣಿಗೆಯನ್ನು ನೋಡಲು ಮನ ತುಂಬಿ ಬರುತ್ತದೆ. ನಿಮ್ಮ ಅಕ್ಕನ ಮಗುವಿನ ದಿನಕ್ಕೊಂದು ಬೆಳವಣಿಗೆಯನ್ನು ಗಮನಿಸುತ್ತ ಹೋಗಿ. ನಿಮಗೆ ಆಶ್ಚರ್ಯವಾಗುತ್ತದೆ.
ಚಿತ್ರ
kavanada bhavanegalu madhuravaagive. Especially, koneya salugalu mana muttuttave.
heege bareyuttiri
ಈಶ,
ಕವನ ತುಂಬಾ ಮುದ್ದಾಗಿದೆ. :)
ಹೀಗೇ ಬರೆಯುತ್ತಿರಿ..
-ಅನಿಲ್
ಪ್ರಿಯ ಈಶ ಕುಮಾರ್,
"ಸೃಷ್ಟಿ"ಯ ಭಾವ ತುಂಬಿದ ಪರಿ ತುಂಬ ಹಿಡಿಸಿದೆ...
ಉತ್ತಮ ಕವನ ನೀಡಿದ್ದಕ್ಕೆ ಧನ್ಯವಾದಗಳು.
ಮಗುವಿನ ಮುಗ್ಧತೆಯ ಮುದ್ದು ನಿಮ್ಮ ಕವನದಲ್ಲಿದೆ..
ಧನ್ಯವಾದಗಳು.
aa mugda maguvina nagu nimma aksharagalli bimbisuthide.... naavellaru haageye beledu bandavaru aa mugdathe nammalliyu ethhu allave.... annuva bhaavane nannaliyuu kenakuthide.....very nice kavana
Putta kandana naguvinaste sagasaagide nimma kavana!!
Post a Comment