ಸಾಹಿತ್ಯದ ಸೆಳೆವೆ ಅಂತದ್ದು. ಅರಿತವರೆ ಬಲ್ಲರು ಅದರ ಸಾಂಗತ್ಯದ ಪರಿವನ್ನ. ಮಳೆಯಲಿ ನೆಂದು ಬಂದ ಹಳ್ಳಿಯ ಹುಡುಗ,ಸ್ನಾನದ ಒಲೆಯ ಮುಂದೆ ಕೂತು ಬೆಂಕಿಯ ಕಾಯಿಸುವಾಗಿನ ಬೆಚ್ಚನೆ ಭಾವವ ಅನುಭವಿಸುವಷ್ಟೇ ಸೊಗಸು ಕಥೆ,ಕವನಗಳ ಸಾಂಗತ್ಯ. ಬಿಟ್ಟು ಬಿಡದ ನಂಟು ಅದು. ವೃತ್ತಿಯಲ್ಲಿ ವೈದ್ಯರಾಗಿರುವ ಹಿರಿಯರು, ಸ್ನೇಹಿತರು ಆಗಿರುವ ದೀಪಕ್ ರವರ ಸಾಹಿತ್ಯದ ಬಗೆಗಿನ ಗೀಳನ್ನು ನೋಡಿದರೆ ನನಗೆ ಹೀಗೆ ಅನಿಸುವುದು. ಅವರೊಟ್ಟಿಗೆ ಹರಟುವಾಗಲೆಲ್ಲ ಜೀವನದ ಬಗೆಗೆ, ಸಮಾಜದ ಆಗು-ಹೋಗುಗಳ ಬಗ್ಗೆ,ಅನುಭವಗಳ ಬಗೆಗಿನ ಅವರ ಒಳನೋಟಗಳು ನನಗೆ ವಿಶಿಷ್ಟ ಅನಿಸುತ್ತವೆ. ಅವರೊಂದಿಗೆ ಮಾತನಾಡುವಾಗಲೆಲ್ಲಾ ಇವರು ಅಪ್ಪಿ ತಪ್ಪಿ ವೈದ್ಯರಾಗಿಬಿಟ್ಟಿದ್ದಾರೆ,ಇಲ್ಲವೇ ನಮ್ಮ ಹಾಗೇ ಪಾಠ ಮಾಡಿಕೊಂಡು ಅದು ಇದು ಮನಸಿಗೆ ತೋಚಿದ್ದ ಗೀಚಿಕೊಂಡು ಇರುತ್ತಿದ್ದರೆನೋ? ಎಂದೆನಿಸುವುದು.
ಅವರು ವೈದ್ಯರಾಗಿ ರೋಗಿಗಳಿಗೆ ಗುಳಿಗೆ ನೀಡಿ,ಯಾವ ಯಾವ ರೋಗಗಳ ಗುಣಮುಖ ಮಾಡುತ್ತಾರೋ ನನಗಂತು ತಿಳಿಯದು. ಅವರೊಳಗಿನ ಕವಿ ಮನಸ್ಸು ಮತ್ತೆ ಮತ್ತೆ ನನ್ನ ಚಕಿತ ಗೊಳಿಸುವುದು. ವೃತ್ತಿ ಯಾವುದಾದರೇನು ಪ್ರವೃತ್ತಿಯಲ್ಲಿ ಅವರು ನನ್ನ ಒರಗೆಯವರೇ ಅನ್ನಿಸುವುದೇ ನನಗೆ ತೃಪ್ತಿ. ಅವರು ಬರೆದ ಒಂದು ಪುಟ್ಟ ಕವನವನ್ನು ನಿಮ್ಮ ಓದಿಗೆ ಬಿಡುತ್ತಿದ್ದೇನೆ,ಓದಿ ನಿಮ್ಮ ಅನಿಸಿಕೆಗಳ ತಿಳಿಸಿ....
ನಿನ್ನ ಹುಡುಕಿದೆಅವರು ವೈದ್ಯರಾಗಿ ರೋಗಿಗಳಿಗೆ ಗುಳಿಗೆ ನೀಡಿ,ಯಾವ ಯಾವ ರೋಗಗಳ ಗುಣಮುಖ ಮಾಡುತ್ತಾರೋ ನನಗಂತು ತಿಳಿಯದು. ಅವರೊಳಗಿನ ಕವಿ ಮನಸ್ಸು ಮತ್ತೆ ಮತ್ತೆ ನನ್ನ ಚಕಿತ ಗೊಳಿಸುವುದು. ವೃತ್ತಿ ಯಾವುದಾದರೇನು ಪ್ರವೃತ್ತಿಯಲ್ಲಿ ಅವರು ನನ್ನ ಒರಗೆಯವರೇ ಅನ್ನಿಸುವುದೇ ನನಗೆ ತೃಪ್ತಿ. ಅವರು ಬರೆದ ಒಂದು ಪುಟ್ಟ ಕವನವನ್ನು ನಿಮ್ಮ ಓದಿಗೆ ಬಿಡುತ್ತಿದ್ದೇನೆ,ಓದಿ ನಿಮ್ಮ ಅನಿಸಿಕೆಗಳ ತಿಳಿಸಿ....
ನಿನ್ನ ಹುಡುಕಿದೆ.... ಪ್ರಿಯಾ
ಹುದುಗಿದ ನೆನಪಿನೊಳಗೆ
ಜೀವನದ ಪುಟದಲಿ,
ಕಳೆದ ಸಮಯದಲಿ,
ನಿಸ್ತಂತು ಪಿಸುಮಾತಲಿ,
ಖಾಲಿ ವಿಸ್ಕಿ ಸೀಸೆಯಲಿ,
ಕಳೆದ ಸಿಗರೇಟು ಧೂಮದಲಿ,
ನನ್ನಬದುಕನ್ನೇ
ಅಂತರ್ಮುಖಿಯಾಗಿಸುತ್ತಿರುವುದ
ನಾನೇಕೆ ತಿಳಿಯಲಿಲ್ಲವೇ,
ದ್ವಂದ್ವಗಳ ಗೂಡಾಗಿಸಿ ನೀ ಹೋದುದಾರು
ಎಲ್ಲಿಗೆ ಅರುಹೆ ಗೆಳತಿ?
13 comments:
Chennaagide tamma kavana
nice kavana.
bahala chennagide maga, namagu parichya madisamma.
ಸ್ನೇಹೋಪಾಸನೆ
ಗೆಳೆಯನ ಅಂಗಳದಲಿ
ನಲಿಯುತಿಹ ಲತೆನೋಡಿ
ಸರಿದಿಹುದು ಕವಿದಿದ್ದ ಮೋಡ
ಅಂಗಳದಿ ಹರಡಿ ಬರಕೇ
ಬರ ಎಳೆದಿಹನು ನೋಡ
ಮದ್ದಿಗೇಮದ್ದಿಡುತ
ಜಡತೆಯನು ಝಾಡಿಸುತ
ಜೊತೆಗೆ : ಪ್ರೀತಿಯಾ ಮುಚ್ಚಳಿಕೆ,
ಹಕ್ಕಿ ಮರಿಗಾಗಿ ಕಾವು ನೀಡಿದಂತೆ...
Nice one.. We can just read and enjoy..
chennaagide
ದ್ವಂದ್ವಗಳ ಗೂಡಾಗಿಸಿ ನೀ ಹೋದುದಾರು
ಎಲ್ಲಿಗೆ ಅರುಹೆ ಗೆಳತಿ?
ಕವನ ಚೆನ್ನಾಗಿದೆ ತಾನು ಪ್ರೀತಿಸಿದ ಗೆಳತಿಯನ್ನು, ಭಗ್ನ ಪ್ರೇಮಿ ಹುಡುಕುವಂತೆ ಅವನು ಅವಳನ್ನು - ಅವನು, ಅವಳು ಜೊತೆಗೂಡಿ ಕಳೆದ ಸಂತಸದ ಕ್ಷಣಗಳನ್ನು ನೆನೆಯುತ್ತಾನೆ, ಅವಳ ನೆನಪಿನಲ್ಲೇ ಅವನು ಕುಡಿಯುವದನ್ನು ಕಲೆತು ಅಲ್ಲಿಯೂ ಆ ಖಾಲಿ ವಿಸ್ಕಿ ಬಾಟಲಿಯಲ್ಲಿ ಅವಳನ್ನು ಹುಡುಕುತ್ತಾನೆ, ತಾನು ಧೂಮಪಾನ ಮಾಡುವಾಗ ಹೊರಹೊಮ್ಮುವ ಧೂಮದಲ್ಲೂ ಅವಳ ನೆನಪೇ, ಅವಳ ನೆನಪು ಅವನನ್ನು ಎಷ್ಟು ಕಾಡುತ್ತದೆ ಅಂದ್ರೆ ಅವನ್ನು ಅವನೇ ಇರಿದು ಕೊಯ್ದುಕೊಲ್ಲುವಷ್ಟು, ಅವಳ ನೆನಪು ಅವನ ಬದುಕನ್ನು ಅತಿ ಹೆಚ್ಚು (ಅಂತರ್ಮುಖಿ - ತನ್ನೊಳಗೆ ಹುದುಗಿದುವಷ್ಟು) ಇಷ್ಟೆಲ್ಲಾ ಸಮಸ್ಯೆಗಳ ಆಗರವನ್ನ್ನಾಗಿಸಿ ಅವಳು ಹೂದುದಾದರೂ ಎಲ್ಲಿಗೆ ಹೇಳೇ ಗೆಳತಿ ಇದು ಅನುಭವಿಸಿದವರಿಗೆ ಮಾತ್ರ ತಿಳಿಯುವ ನೋವು, ಸ್ಪಂದಿಸುವವರಿಗೆ ಮಾತ್ರ, ಪ್ರೀತಿ ಅಂಥಾದ್ದು ಅಂತ ಈ ಕವನ ಮನದಟ್ಟು ಮಾಡುತ್ತದೆ
ಈಶ್, ಕಥೆ, ಕವನ, ಅಷ್ಟೆಲ್ಲಾ ಯಾಕೆ ಯಾವುದೇ ಕಲೆಗೆ ಸೀಮಾರೇಖೆಗಳಿರುವುದಿಲ್ಲ ಡಾ. ಅನುಪಮಾ ನಿರಂಜನ ಉದಾಹರಣೆ, ನನಗೆ ತಿಳಿದ ಹಿರಿಯ ವೈದ್ಯ್ರೊಬ್ಬರು ಬಹಳ ಹೆಸರಾಂತ ಹೃದಯ ತಜ್ಜ್ನರು ಮಾತು-ಹಾಡುಗಾರರು...ಅಂದರೆ. ನನ್ನ ಎದುರು ಒಬ್ಬ ೪೦-೪೫ ವಯಸ್ಸಿನವರು ತಮ್ಮ ರಿಪೋರ್ಟ್ ತೋರಿಸಿ ತಮಗೆ ತೋದರೆ ಇದೆ ಎಂದೆಲ್ಲ ಹೇಳಿದಾಗ...ಅವ್ರು ಹಾಡತೊಡಗಿದ್ದು ರಂಗ ಬಾರೋ..ಶ್ರೀ ರಂಗ ಬಾರೋ...ಎನ್ನುವ ಪುರಂದರರ ಕೀರ್ತನೆ...ಎದೇನಿದು ಇವರು ತಮ್ಮ ಹೃದಯದ ಸಮಸ್ಯೆ ಬಗ್ಗೆ ಗಂಭೀರವಾಗಿ ಹೇಳಿದಾಗ ಇವರು ಹಾಡ್ತಾರಲ್ಲ..??!! ಸರಿ ನಂತರ ಕೆಲವು ಸಮಜಾಯಿಷಿ ಹೇಳಿ..ಏನ್ರಿ ನೀವು ಇಷ್ಟು ಸಣ್ಣ ವಿಷಯಕ್ಕೆ ಟೆಂಶನ್ ಮಾಡ್ಕೊಂಡಿದ್ದೀರಿ..ಅಂತ ಹೇಳಿ ..ಅವರು ತೆಗೆದುಕೊಳ್ಳಬೇಕಿದ್ದ ಔಷಧಿ ಬಗ್ಗೆ ಹೇಳೀ ನಗುತ್ತಾ ಬೀಳ್ಕೊಡುವಾಗ ಕೀರ್ತನೆಯನ್ನು ಮುಂದುವರೆಸಿದ್ದರು....ಇದು..ವೈದ್ಯ ಹೇಗೆ ..ಕಲೆ ಮತ್ತು ವೃತ್ತಿಯನ್ನು ಮೇಳೈಸಿ ರೋಗಿಗಳ ಮನೋಸ್ಥೈರ್ಯವನ್ನು ವೃದ್ಧಿಸುತ್ತಾರೆ ಎನ್ನುವುದಕ್ಕೆ ಉದಾಹರಣೆ...ನಿಮ್ಮ ಮಿತ್ರರು ಇದರ ವಿಸ್ತರಣೆ ಅಷ್ಟೆ...
ನಿಮ್ಮ ಕವನ ಲೇಖನಕ್ಕೆ ಪೂರಕ ವಾಗಿ ಚನ್ನಾಗಿದೆ..ಭಾವನೆ ಮಿಲನಕ್ಕೆ
ವೃತ್ತಿಗೆ ವಿದ್ಯಾರ್ಹತೆ, ಪ್ರವೃತ್ತಿಗೆ ಮನಸ್ಸು.
ಚೆನ್ನಾಗಿದೆ ಅವರ ಕವನ
saahitya andarene kushi,adarallu barahagaararu, avara olleya barahagalanna odidaadega avaru parichayavalladiddaru thumba hattiradavaru enisuttade
ಬಹಳ ದಿನಗಳಾಗಿದ್ದವು ನಿಮ್ಮ ಕವಿತೆ ಓದಿ...
hie esha.. may I know to whom you are asking.. this... -:) if you could..
tumba channgide sir..
ಅವಳನು ಹುಡುಕಿ ಸಮಯ ಹಾಳು ಮಾಡುವ ಬದಲು ಬೇರೆ ಹುಡುಗಿಯನ್ನು ನೋಡಿ ಸರ್ ..ಹಹಹ
Post a Comment