Thursday, December 31, 2009

ಹೊಸ ವರುಷದ ಹಾದಿ..






















ಹಳೆಯ ಕ್ಯಾಲೆಂಡರ್ ಬದಲಿಸಿದಂತೆ,
ನನ್ನ ಹಳೆಯ ಕಹಿ ನೆನಪುಗಳೆಲ್ಲ
ನನ್ನಿಂದ ದೂರಾಗಿ, ಬದುಕಿನ
ಕಷ್ಟಗಳೆಲ್ಲ ಒಮ್ಮೆಗೆ ಮರೆಯಾಗಿ,
ನೋವಿನ ಬವಣೆಗಳೆಲ್ಲ ಅಂದಿನ
ದಿನಕೆ ಕೊನೆಯಾಗಿ,
ಜೀವನದ ಜಂಜಡ ಜಡತೆಗಳೆಲ್ಲ
ಆ ವರುಷದ ಹೊಳೆಯಲಿ
ಕೊಚ್ಚಿ ಹೋಗಿ, ನನ್ನೆಲ್ಲ ಗತ
ಸೋಲುಗಳು ಹೊಸ ಕನಸುಗಳ
ಹುರುಪಿನಲಿ ಸಮಾಧಿಯಾಗಿ
ಹೊಸ ವರುಷದ ದಿನ ರವಿತೇಜ

ನನ್ನ ಬಾಳಲ್ಲಿ ಹಳೆಯ

ದುಗುಡವನೆಲ್ಲ ದೂಡಿ
ಹೊಸ ಕ್ಯಾಲೆಂಡರ್ ನಂತೆ
ನವ್ಯತೆಯ ಅರುಹಿದರಷ್ಟೇ

ಹೊಸವರುಷಕೆ ಸ್ವಾಗತವು,ಸಂಭ್ರಮವು
ಈ ಜೀವಮಾನದಲಿ..ಎಂದಿಗೂ ಎಂದೆಂದಿಗೂ.


ಆದರೂ ಸಹಯಾತ್ರಿಗಳೇ ನಿಮಗೆಲ್ಲ ಹೊಸ ವರುಷ ಸಂತಸ, ಸಂಭ್ರಮ,ನಲುಮೆಯ ತುಂಬಿ ತರಲಿ ವರುಷವೆಲ್ಲ.
ಎಚ್.ಎನ್.ಈಶಕುಮಾರ್.

10 comments:

ಸೀತಾರಾಮ. ಕೆ. / SITARAM.K said...

nice poem for welcoming new year & nice sankalpa for new year Esha.

shivu.k said...

ಈಶಕುಮಾರ್,

ಕವನದಲ್ಲಿ ನೀವು ಬರೆದಂತೆ ಹಳೆಯದೆಲ್ಲಾ ಮರೆತು ಹೊಸತು ಬರಮಾಡಿಕೊಳ್ಳಿ.
ಹೊಸ ವರ್ಷದ ಶುಭಾಶಯಗಳು.

lakshmi said...

ಬದುಕಿನ ಬಗೆಗಿನ ನಿಮ್ಮ ಬರವಸೆಗೆ, ನಿಮ್ಮ ಜೀವನೋತ್ಸಾಹಕ್ಕೆ ಹೊಸ ವರುಷ ಮತ್ತಷ್ಟು ಹರುಷವ ತರಲಿ ಸ್ಪೂರ್ತಿದಾಯಕವಾಗಿರಲಿ ಎಂದು ಹಾರೈಸುತ್ತಾ .....ನಿಮ್ಮ ಕವನಗಳು ಹೀಗೆ ಮೂಡಿಬರಲಿ

ಚುಕ್ಕಿಚಿತ್ತಾರ said...

ಹೊಸ ವರುಷ ಹರುಷ ತರಲಿ......
nice poem...

ಸೀತಾರಾಮ. ಕೆ. / SITARAM.K said...

ಹೊಸ ವರ್ಷದ ಶುಭಾಶಯಗಳು.
ಕವನಗಳು ಹೀಗೆ ಮೂಡಿಬರಲಿ.

jagadeesh Balehadda said...

ನಿಮಗೆ ಶುಭವಾಗಲಿ. ಹೊಸ ವರ್ಷದ ಶುಭಾಷಯಗಳು.

ಜಲನಯನ said...

Wish you a very Happy and Prosperous new Year 2010.

Anonymous said...

ಹೊಸ ಕ್ರಿಸ್ತ ವರ್ಷದ ಶುಭಾಶಯಗಳು. ಹೀಗೆ ಮುಂದುವರೆಯಲಿ ನಿಮ್ಮ ಕವನಗಳ ಸಾಲುಗಳು.

AntharangadaMaathugalu said...

ಈಶ ಕುಮಾರ್ ಅವರೆ...
ಹೊಸ ವರುಷ ನಿಮ್ಮ ಎಲ್ಲಾ ಹಳೆಯ ಕಹಿ ನೆನಪುಗಳನ್ನೂ ಅಳಿಸಿ... ಸಿಹಿ ಸಿಹಿ ಅನುಭವಗಳನ್ನು ಹಂಚಿ ಕೊಡಲೆಂದು ಹಾರೈಸುವೆ........

ಶ್ಯಾಮಲ

Unknown said...

ಸುಧೀರ್. ಎ., ಹುಣಸೂರು

ಕಳೆದು ಹೋದ ವರುಷದಲ್ಲಿ,
ಕಹಿಯನ್ನು ಮರೆತು ಬಿಡಿ,
ಬರುವ ಹೊಸ ಮಾಸದಲ್ಲಿ,
ಸಿಹಿಯನ್ನೇ ಸವಿಯುತ್ತಾ ಇರಿ ಎಂದಿಗೂ ಎಂದೆಂದಿಗೂ...........