
ಭಾಷೆ ಅರಿವವರು
ನೂರಾರು ಮಂದಿ
ನನ್ನ ಭಾವವ ಅರಿವವಳು
ನೀ ಒಬ್ಬಳೇ
ಸಹೃದಯಿ...
ಬರೆದ ಸಾಲು ಸಾಲು
ಪುಟವು ಅನುಭವದ
ಸರಮಾಲೆ.
ನಾ ಬರೆಯಲಾಗದೆ
ಮನದಲಿ ಹಾಗೇ
ಉಳಿಸಿದ ತಿಳಿ
ಭಾವವು ನಿನ್ನ
ಪ್ರೇಮ ಅನುಭಾವದ
ನವಿರುತನ ಇದೆ
ಹಾಗೇ ಮಡಿಸಿಟ್ಟ
ಖಾಲಿ ಹಾಳೆಯಂತೆ.








ತನ್ನ ಧರ್ಮ,ತನ್ನ ಜಾತಿ, ಭಾಷೆ, ಜನಾಂಗಕ್ಕೆ ಸೇರದವನು 'ಉತ್ತಮನಲ್ಲ, ಶ್ರೇಷ್ಠ ನಲ್ಲ' ಎನುವ ಸಂಕುಚಿತ ಭಾವ ನಮ್ಮದಾಗಿದೆ ಇಂದು. ಮಾನವ ಯಾವುದೇ ಜಾತಿಗೆ,ಕೋಮಿಗೆ ಸೇರಿದ್ದರು 'ಮಾನವೀಯತೆಯ ಶ್ರೇಷ್ಠ ಗುಣ" ಆ ಜಾತಿ-ಧರ್ಮ,ಪ್ರಾಂತ್ಯಕ್ಕೆ ಸೋಗು ಹಾಕಿಕೊಂಡು ಅಂಟಿಕೊಂಡಾಗ ಮಾನವನ ವರ್ತನೆ ತೀರ ಅರ್ಥಹೀನವಾಗಿಬಿಡುವುದು. ಮಾನವೀಯ ಮೌಲ್ಯಗಳನೆಲ್ಲ ದೂರ ಸರಿಸಿ,ಸಮಷ್ಠಿಯ ಒಳಿತನ್ನು ಮರೆತು, ಸ್ವಾರ್ಥ ಸಾಧನೆಗಾಗಿ ತನ್ನ, ತನ್ನ(ಕೋಮಿನ)ವರ ಏಳಿಗೆಯನಷ್ಟೇ ದೃಷ್ಟಿಯಲಿಟ್ಟುಕೊಂಡು ಕೆಲಸ ಮಾಡುವ ಇಂದಿನ ರಾಜಕಾರಣಿಗಳು ತಮ್ಮ ಅಜ್ಞಾನ, ಅನಾಚಾರಗಳಿಂದ ತಮ್ಮ 
ಕಣ್ಣ ಆಳದಲಿ...


ಕತ್ತಲ ಕೂಪವೇ ಮೈದಾಳಿ ನಿಂತ
ಗುಡಿಸಲು ಒಳಗೆ ಮಿಸುಕಾಡುವ
ಬುಡ್ಡಿ ದೀಪದ ಸಾವಿನಂಚಿನ ಬೆಳಕು;
ಹಸಿದು ಹಾಲಿಗಾಗಿ ಅಳುತ ಚೀರಾಡಿ
ಸೋತು ಮಲಗಿದ ಕಂದನ ದಿಟ್ಟಿಸುವ
ತಾಯಿಯೋಡಲು ಎಣ್ಣೆ ಬರಿದಾದ
ಹಣತೆಯ ಹಾಗೆ, ಕರುಳ ಬಳ್ಳಿಯ
ಕಳ್ಳು ತುಂಬಿಸದ ಜೋತುಬಿದ್ದ
ತಾಯ ಮೊಲೆಗಳು ತನ್ನ ಕುಡಿಯ
ದಾರುಣ ಬದುಕಿನ ಕರಾಳ
ಮುನ್ನುಡಿಯ ಸಂಕೇತಗಳು.ಜೋಪಡಿಯ ಅಂ
ಗುಲಂಗುಲ ಆವರಿಸಿದ
ಕತ್ತಲು ಕಂಗಳಲಿ ಶಾಶ್ವತವಾಗಿ
ಸಮಾಧಿಯಾಗಲು ದಾರಿದ್ರ್ಯದ ಬೇಗೆಯಲಿ
ಬಳಲಿದ ಜೀವಗಳ ಹಸಿವ ನೀಗದ
ಬಡತನದ ಕಾರ್ಮೊಡವ ಸೀಳಿ
ಬಾಳಿಗೆ ಬೆಳಕಾಗದ ಬೆಳಕು ನಮಗಾಗಿ
ಈ ಜಗದೀ ಹರಿಯದೇ ದೂರಾದರೇ
ಪ್ರತಿದಿನದ ಬೈಗೂ ಅಣಕಿಸಿ ಅಸಹ್ಯವಾಗಿಹ
ಜೀತದ ಜೀಕಾಟದಿಂದ ತುಸುವಾದರೂ
ಬಿಡುವು.ಭರವಸೆ ಮೂಡ
ದ ಬಾಡಿದ ಕಂಗಳ
ಎದುರಿನ ಜಾಲಿಮರದ ತುಂಬೆಲ್ಲ
ಹರಡಿದ ಸಾವಿರ ಸಾವಿರ ಮುಳ್ಳುಗಳ
ವಾಸ್ತವ ಬೆತ್ತಲೆ ದರುಶನದ ನಡುವೆ
ಚಿಗುರೊಡೆಯುತಿಹ ಎರಡು ಹಸಿರೆಲೆ,
ಹಸಿದು ನಿದ್ದೆಯಲಿ ಜಗವ ಮರೆತ
ಕಂದನ ಮೊಗದಲಿ ಬಿಮ್ಮಗೆ
ಅರಳಿದ ಮಂದಹಾಸ, ನಿದ್ದೆಗೆ
ಜಾರುತಿಹ ತಾಯ ಕಂಗಳಲು
ಮಿರುಗುತಿಹ ಕನಸಿನ ನಕ್ಷತ್ರ ಲೋಕ.ಎಚ್.ಎನ್.ಈಶಕುಮಾರ್.

ಯ ಮೇಲೆ ಹಸಿದ ಮೈಗಳು
