ಸಾರ್ವಭೌಮ...ಗಣತಂತ್ರ
ಸಾರ್ವಭೌಮ ಸ್ವತಂತ್ರ ಗಣರಾಜ್ಯ
'ಭಾರತ'ದಲಿಂದು ಪ್ರಜೆಯ ಅಳಲು
ಕೇಳಲು ಕಿವಿಯಲಿ ಡಮ ಡಮ ಡಂಗುರ.
ಸರ್ವ ಸ್ವತಂತ್ರ ಬರಿಯ ಕನಸು,
ಆಲಿಸಲಷ್ಟೆ 'ಸ್ವತಂತ್ರ'ವೆನುವ ಮಾತು
ಕಲ್ಪನೆಗೂ ಸಿಗದು, ಕನಸಿಗೂ ಬಾರದೂ
ಸ್ವತಂತ್ರದ ಸವಿಯ ಮುಕ್ತ ಭಾವವೂ.
ಕೋಟಿ ಕೋಟಿ ಮಾತುಗಳ ಸುರಿಮಳೆಯು
ಕೆಂಪು ಕೋಟೆಯ ಮೇಲೆ,ಸ್ವಚ್ಛಂದ ಚಂದದ
ತಿರಂಗದ ಬುಡದಲಿ 'ಗುಂಡಿನ ಭಯಕೆ'
ಗಾಜಿನ ತಡೆಗೋಡೆ ಯೊಳಗೆ ಮೊರೆವುದು
ಸರ್ವ ಸ್ವಂತಂತ್ರ ರಾಷ್ಟ್ರದ ಅಧಿಪತಿಯ
ಭಾಷಣವು, ಮತ್ತೆ ಮತ್ತದೇ ಘನ ಸರ್ಕಾರದ
ಒಣ ಮಾತಿನ ಪಲ್ಲವಿ ಮೊಳಗುವುದು
ಉದ್ದಕೂ, ಗತ -ವಾಸ್ತವಗಳು ಮೇಳೈಸಿದ
ವೈಭವೊತ್ಪ್ರೆಕ್ಷೆಗಳ ಕೇಳುವ ಸೋಜಿಗ
ಹರಸಿ ಬರುವುದು ವರುಷ ವರುಷಗಳ
ಲೆಕ್ಕವನಿಡುತ ದೇಶದ ಹರುಷ.
ಆ ಕಿಚ್ಚಲಿ ಮರೆವೆನು
ಕೋಟೆ-ಕೊತ್ತಲೆಗಳ
ಎಲ್ಲೆಯ ಮೀರಿ ಹಾರುವ
ಹಕ್ಕಿಯ ಸ್ವಚ್ಛಂದ ಸ್ವಾತಂತ್ರವ...
6 comments:
ನೈಜ್ಯತೆಗೆ ವ್ಯಂಗ್ಯದ ಮುಖವಾಡ ಹಾಕುವ ಪ್ರಯತ್ನ ಮಾಡಿರುವಿರಿ ಅಬಿನಂದನೆಗಳು. ಒಳ್ಳೆಯ ಪ್ರಯತ್ನ ಹಾಗೆ, ಹಾಗೆ ಅದು ಸಂಪೂರ್ಣವಾಗಿ ಸಾಧ್ಯವಾಅಗಿಲ್ಲ ಎಂಬುದು ನನ್ನ ಅನಿಸಿಕೆ. ಪ್ರಯತ್ನ ಸಾಲದು... ಇನ್ನೂ ಹೆಚ್ಚು ವಿದಂಬನಾತ್ಮಕವಾಗಿ ನಿಮ್ಮ ಭಾವಗಳನ್ನು ಅನಿಸಿಕೆಗಳನ್ನು ತೆರೆದಿಡುವ ಶಕ್ತಿ ನಿಮ್ಮಲ್ಲಿದೆ ನೀವು ಅದನ್ನು ದರ್ಶನಮಾಡಿ
ನೂರಕ್ಕೆ ನೂರರಷ್ಟು ಸತ್ಯವಾದ ಮಾತು
ಕೋಟಿ ಕೋಟಿ ಮಾತು ಕೆಂಪುಕೋಟೆಯ ಮೇಲೆ...........ಶತ ಪ್ರತಿಶತ ಸತ್ಯಮಾತು...ಏನೆಲ್ಲ ಆಶ್ವಾಸನೆಗಳು..ಎಷ್ಟೆಲ್ಲ ಪೊಳ್ಳು ವಾಗ್ದಾನ...?? ಚನ್ನಾಗಿದೆ..ಸಮಯೋಚಿತ ಕವನ ಈಶ್.
ಹಾಯ್ ಈಶ!
ವಿಭಿನ್ನವಾಗಿದೆ. ಎಡೆಬಿಡದೆ ಹರಿದು ಬ್ರುವ್ ನಿನ್ನ ಬರವಣಿಗೆಗೆ ಸಲಾಮ್!
hi EEsha,
long time, i visited ur blog... too many good posts ri, tumbaa chennagive,,, heege bareyuttiri :-)
ಈಶ,
ತುಂಬ ಚೆನ್ನಾಗಿ ಬರೆದಿದೀರ.
ಚಿತ್ರ
Post a Comment