ಸತ್ತ ದಿನಗಳ ಜಪಿಸಿ ಜಡವಾಗದಿರು
ಮನವೇ,ಮತ್ತೆ ಹೊಸ ಚೇತನವ
ತಂದುಕೋ ಮನವೇ...'
ಸವಿ ನೆನಪುಗಳು ನೂರು ಸವಿಯಲು ಬದುಕು: ನಿಜ ನೆನಪುಗಳೇ ಹಾಗೇ ನಮ್ಮ ಮನಸನ್ನು ಮತ್ತೆ ಮತ್ತೆ ಆದ್ರ ಗೊಳಿಸುವುದು, ಮತ್ತೆ ಮತ್ತೆ ಹಸಿರಾಗಿಸುತ, ಚಿಗರಿಸುತ,ಸಂತೈಸುತ ಜೀವಕಣವಾಗಿ ಇಂದಿನ ಕ್ಷಣಗಳನು ಸಂತುಷ್ಟವಾಗಿ ಸವಿಯುವಂತೆ ಮಾಡುತ್ತವೆ. "ನೆನಪು ಅಂದರೆ ಹಾಗೇ ಎಂದಿನ ಅಡವಿಯಲಿ ಇಂದು ಅರಳಿದ ಹೂವು". ನಮ್ಮ ಮನಸಿನ ಮಹಾ ಅಡವಿಯಲಿ ಚಿಗುರುತ್ತ,ಅರಳುತ್ತ,ಮಾಗುತ್ತ,ಬಾಡು
ಮಗುವಾಗಿದ್ದಾಗ ಯಾವುದೋ ಆಟಿಕೆಗೆ ಹಠವಿಡಿದ ನೆನಪು, ಯಾವುದೋ ಕ್ಷಣದಲಿ ದಾರಿ ತಪ್ಪಿ ಅಳುತ್ತ ಮತ್ತೆ ತಂದೆ-ತಾಯಿಯರನು ಕೂಡಿದ ನೆನಪು, ಯಾರದೋ ಮನೆಗೆ ಮೊದಲಬಾರಿಗೆ ಹೋದ ನೆನಪು, ಮೊದಲ ತರಗತಿಯಲಿ ಕಲಿತ ನೆನಪು, ಸ್ಕೂಲಿನಲ್ಲಿ ಸ್ನೇಹಿತರೊಂದಿಗೆ ಆಡಿದ ಗುದ್ದಾಟ, ಮಣ್ಣಿನಲಿ ಬಿಳಿಯ ಯುನಿಫಾಂ ಕೊಳೆಯಾಗುವಷ್ಟು ಕುಣಿದಾಡಿದ್ದು, ಗಣಿತ ಪರಿಕ್ಷೆಯಲಿ ಫೇಲಾದದ್ದು ಅಣ್ಣನಲ್ಲಿ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದ್ದು, ಗೆಳೆಯರೊಂದಿಗೆ ಪ್ರವಾಸಕ್ಕೆ ಹೋದದ್ದು, ಮೊದಲ ಬಾರಿಗೆ ಸೈಕಲ್ ಸವಾರಿ ಮಾಡಿ ಕ್ರಿಕೆಟ್ ಆಡಲು ಹೋದದ್ದು, ಬಿ.ಎ, ಎಂ.ಎ ಗಳ ಸಮಯದಲಿ ಸಿಕ್ಕ ಕೆಲವು ಸ್ಮರಣಿಯ ಚೆಲುವಿನ ಮುಖಗಳ ಮಾಸದ ನೆನಪು. ಹೀಗೆ ನೆನಪುಗಳ ಸರಮಾಲೆಗಳು ವಾಸ್ತವದ ಕ್ಷಣಗಳೊಂದಿಗೆ ತಳಕು ಹಾಕಿಕೊಂಡು ಭವಿಷ್ಯದ ಭರವಸೆಗಳೊಂದಿಗೆ ಸಾಗುತ್ತಿದೆ ನೆನಪ ಜೀವನ...
' ಆ ಕಾಲ ಒಂದಿತ್ತು...ಬಾಲ್ಯ ತಾನಾಗಿತ್ತು...
ಬೇಸರವಾಗಿದೆ ಬಯಲು! ಹೋಗುವೆನು ನಾ
ಹೋಗುವೆನು ನಾ, ನನ್ನ ಒಲುಮೆಯ ಗೂಡಿಗೆ..
ಸದಾ ಸವಿಯಬೇಕೆನುವ ಸವಿ ನೆನಪುಗಳ ಹಾಗೆಯೇ ನಮ್ಮ ಕಹಿ ನೆನಪುಗಳು ಕೊನೆ ಕ್ಷಣದವರೆಗೂ ನಮ್ಮ ಬಿಟ್ಟು ಬಿಡದೆ ಕಾಡುತ್ತವೆ. ಕಹಿ ನೆನಪುಗಳ ವೇದನೆ ಮನವ ಸುಡುವುದು. ಸವಿ ನೆನಪುಗಳ ಹಾಗೇ ಕಹಿ ನೆನಪುಗಳ ಸಾಂಗತ್ಯ ಸಾಧ್ಯವಿಲ್ಲ. ಏಕಾದರೂ ಉಳಿಯುತ್ತವೋ ಈ ನೆನಪುಗಳು ಎಂದು ನಮ್ಮನ್ನು ನಾವೇ ಶಪಿಸುವಂತಾಗುತ್ತದೆ. ಮಾನವನ ಮನಸೇ ಹಾಗೇ ನೆನಪುಗಳಿಂದ ಸುಖಿಸುವಷ್ಟೇ ದುಃಖಿಸುತ್ತದೆ. ನೆನಪುಗಳಿಲ್ಲದ ಸ್ಮೃತಿಯಂತೂ ಇಲ್ಲ. ನಮ್ಮ ಮನದ ಗುಣವೇ ವಿಶಿಷ್ಟ ಒಳ್ಳೆಯದು ಕೆಟ್ಟದ್ದು ಎಂದು ಭೇದ-ಭಾವ ತೋರದೆ ಎಲ್ಲ ನೆನಪುಗಳನು ತನ್ನಲ್ಲಿ ಬಂಧಿಸಿಡುತ್ತದೆ. ಈ ಸ್ಮೃತಿಯು ಮಹಾಸಾಗರವೇ ಏನೋ? ನಿನ್ನೆಯದು, ಇಂದಿನದು, ಎಂದೆಂದಿನದೋ ನಮ್ಮ ಸ್ಮೃತಿಯ ಸಾಗರದಲಿ ಇಂದು ಅಲೆ ಅಲೆಯಾಗಿ ತೊಯ್ದಾಡುತ್ತಿದೆ. ವಾಸ್ತವವು ಅಷ್ಟೆ ಕೆಲವೊಮ್ಮೆ ಬೇಸರವೆನಿಸುವುದು.
'ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕ್ಕೆ ಹಾಕದಿರು ನೆನಪೇ'
ಬದಲಾಗುತ್ತಿರುವ ಕಾಲದೊಂದಿಗೆ ಎಲ್ಲವು ಬದಲಾಗಿ, ಹಳತು ಹೋಗಿ, ಹೊಸದು ಸೃಷ್ಟಿಯಾಗುವುದು ಸ್ವಾಭಾವಿಕ. ಪುರಾತನದ ಅಮಲಿನಲಿ ಮುಳುಗಿದವರೆಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯ. ವರ್ತಮಾನದ ಬದಲಾವಣೆಗಳೊಂದಿಗೆ ಎಷ್ಟೇ ಮುನ್ನಡೆದರು ಮನಸಿನ ಯಾವುದೋ ಮೂಲೆಯಲ್ಲಿ ಸ್ಪಷ್ಟ ಚಿತ್ರವಾಗಿ ಮೂಡಿರುತ್ತದೆ ನಮ್ಮ ಸುತ್ತ ಮುತ್ತಲಿನ ಕೆಲವು ವಸ್ತುಗಳ ನೆನಪು, ಜನರ ನೆನಪು, ನಾವಿದ್ದ ವಾತಾವರಣದ, ಹಳ್ಳಿಯ ಮನೆಯ ನೆನಪುಗಳು, ಇಂದಿನ ಸ್ಪಷ್ಟತೆ ಅವುಗಳ ಇಲ್ಲದಿರುವಿಕೆಯನು ತಿಳಿಸುತ್ತಿದ್ದರು, ಅವುಗಳ ನೆನಪೇ ಭೂತಕಾಲದ ಚಿತ್ರಗಳು ನಮ್ಮಿಂದ ಎಂದಿಗೂ ಮಾಸದಂತೆ ಮನಸಿನಲಿ ಉಳಿಸುತ್ತವೆ.
ಚೈತ್ರದಲಿ ಚಿಗುರೊಡೆವ ಹಸಿರೆಲೆಯಂತೆ ಕಟು ವಾಸ್ತವಕೆ ತಂಪನೆರೆಯುತ್ತವೆ. ಹಸಿದ ಶಿಶುವಿಗೆ ಹಾಲುಣಿಸುವ ವಾತ್ಸಲ್ಯಮಯಿ ತಾಯಿಯಂತೆ ನೆನಪುಗಳು ನಮ್ಮ ಮನಸನ್ನು ಆಗಿಂದ್ದಾಹ್ಗೆ ಪುಳಕ ಗೊಳಿಸಿ ಇಂದಿನ ಜೀವನ ಅಂದಿನ ಜೀವಂತ ನೆನಪಿನೊಂದಿಗೆ ಬೆಸುಗೆಯೊಂದಿ ಮುಂಬರುವ ಅನುಭವಗಳನು ಹರಸುತ ಜೀವನದ ನಿರಂತರ ಯಾನ ಸಾಗುತ್ತಿರುತ್ತದೆ. ನೆನಪಿಲ್ಲದ ಜೀವನ ಫಲಕೊಡದ ಸಮೃದ್ಧ ಮರದಂತೆ. ಸವಿಯಾದ ನೆನಪುಗಳು ಜೀವನವನ್ನು ರಸಮಯವಾಗಿಸುತ್ತವೆ.
13 comments:
ನೆನಪುಗಳೇ ಹಾಗೆ
ಮರೆತಷ್ಟು ನೆನಪಿಸುತ್ತವೆ
ಬೈದಷ್ಟು ಹಿಂದೆಯೇ ಇರುತ್ತವೆ
si bareda reeti ishta aaytu...
ಸಿಹಿಕಹಿಗಳ ಬಗ್ಗೆ ಉಲ್ಲೇಖಿಸಿರುವುದು ಅದೂ ಯುಗಾದಿಗೂಮುನ್ನ ಸಮಯೋಚಿತವಾಗಿದೆ.ನೆನಪೊಂದು ವರ ಹಾಗು ಶಾಪ. ನಿಮ್ಮಲೆಖನದಲ್ಲಿ ಅದು ಮೂಡಿದೆ
houdu.. Yavudo haleya[kahi] nenapinalli.. vastavada jeevana Jada madikolluvudu beda..
prakrutiye kala kallakke.. tanna tanavanna.. badalayisutiruttade.. nenne monneyaste.. mai koreva chali ettu eegagale.. ranabisilu.. shuru agide..matte hasirele.chigiru,
vasantagamanakkagi..kayuttide..haageye
navu.. kooda namma jeevanadalli.. hosa chetana.. baramadikollabeku... its a fantastic topic eshu.. thanks
ನಿಮ್ಮ ಈ ಕವನ ಚನ್ನಾಗಿದೆ. ನನ್ನ ಪ್ರಕಾರ ಹೇಳೋದಾದ್ರೆ ಕಹಿ ನೆನಪುಗಳು ಇರಲೇಬೇಕು ಪ್ರತಿಯೊಬ್ಬರ ಜೀವನದಲ್ಲಿ , ನಾವು ಸಿಹಿಯನ್ನು ಎಷ್ಟು ಬಯಸುತ್ತೇವೋ ಅಷ್ಟೇ ಕಹಿಯನ್ನು ಸ್ವೀಕರಿಸಲೇಬೇಕು ಅದು ಪ್ರಕೃತಿ ಧರ್ಮ. ಕಹಿ ಇಂದ ನಾವು ಒಂದು ಪಾಟವನ್ನು ಸಹ ಕಲಿಯಬಹುದು, ಹೀಗೆ ಆದ್ರೆ ಹೀಗೆ ನೋವಾಗುತ್ತೆ ಅಂತ ಮನಗಾಣಬಹುದು. ಎಲ್ಲರ ಜೀವನದಲ್ಲಿ ಕಹಿ ನೆನಪುಗಳು ಒಂದು ಎಚ್ಚರಿಕೆ ಗಂಟೆಯಂತೆ. ಕಹಿ ಇದ್ದರೇನೆ ಸಿಹಿಗೆ ಒಂದು ಬೆಲೆ ಅಲ್ವೇ.
ನೆನಪುಗಳ ಜಾತ್ರೆಯಲ್ಲಿ ಎಂಥಾ ಗದ್ದಲ! ಎಷ್ಟು ಜೀವಗಳು...ಮತ್ತು ಎಷ್ಟೊಂದು ಜೀವಂತ ಕತೆಗಳು...!!
ಈಶ್, ಬಹಳ ದಿನಗಳಿಂದ ಬರಲಾಗಲಿಲ್ಲ...ಕ್ಷಮಿಸಿ...
ಕಹಿ ಇದ್ದರಲ್ಲವೇ ಬೆಲ್ಲದ ರಿಚಿ ತಿಳಿಯುವುದು ಈಶ್,
ಕಹಿ ಗೆದ್ದವನಿಗೆ ಮತ್ತೆ ಕಹಿಯಾಗಿವ ಭಯವಿರುವುದಿಲ್ಲ...ಚನ್ನಾಗಿದೆ ಕವನ...
Eshakumar,
'ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕ್ಕೆ ಹಾಕದಿರು ನೆನಪೇ'
Nice lines.. :)
ಈಶ್ ರವರೇ..
ನೆನಪುಳ ಬಗ್ಗೆ ನಿಮ್ಮ ವಿಶ್ಲೇಷಣೆ ಆಪ್ತತೆಯಿಂದಿದೆ ಅನ್ಸತ್ತೆ. ನಮ್ಮೆಲ್ಲರಿಗೂ ಸಿಹಿ-ಕಹಿ ನೆನಪುಗಳು ಕಾಡುತ್ತಲೇ ಇರುತ್ತವೆ, ಅದಿಕ್ಕೇ ನಿಮ್ಮ ಬರಹ ನನಗೆ ಆಪ್ತವೆನಿಸಿದ್ದು..."ಸವಿ ನೆನಪುಗಳು ಬೇಕು ಸವಿಯಲೀ ಬದುಕು.. ಕಹಿ ನೆನಪು ಸಾಕೊಂದು ಬಾಡಲೀ ಬದುಕು..". ಆದರೆ ಕಾಲ ಕಹಿಯನ್ನೂ ಮರೆಸುತ್ತದೆ ಮತ್ತು ಅದರ ಛಾಯೆ ಮಾತ್ರ ಉಳಿಯುತ್ತದೆ ಅಷ್ಟೇ ಅಲ್ಲವೇ? ಚೆನ್ನಾಗಿ ಬರೆದಿದ್ದೀರಿ..
adbhut rachane
ಈಶ್,
ತುಂಬಾ ಚೆನ್ನಾಗಿ ವಿಶ್ಲೇಷಿಸಿದ್ದೀರ. ಎಲ್ಲ ಮರೆತಿರುವಾಗ ಇಲ್ಲಸಲ್ಲದನೆನೆವವ ಅನ್ನೋ ಹಾಗೆ, ಕಹಿ ನೆನಪುಗಳು ಬೇಡ ಬೇಡವೆಂದರೂ ನಮ್ಮನ್ನ ಹಿಂಡಿ ಹಿಂಡಿ ಜೀವ ಕೊಲ್ಲುತ್ತದೆ. ಆ ಕಹಿ ನೆನಪುಗಳಿರುವಾಗ ಎಷ್ಟೇ ಸಿಹಿ ನೆನಪುಗಳನ್ನು ನೆನೆದುಕೊಂಡರೂ ಕಹಿ ನೆನಪು ಮಾಯವಾಗದು.
ಚಿತ್ರ
Nice one..sir
sihi-kahi nenapugalu namma badukina ondu bhagaballave!!!!!!!!
ninna abhivyakti chennagide
Post a Comment