ಬದುಕೇ ವಿಹಿತವು...
ಬದುಕೇ ವಿಹಿತವು...
ನಿಂತು ನೋಡುವ ಬಯಕೆ
ಬಯಲ ಬಯಲಾಟವನೆಲ್ಲ
ಸುತ್ತಲಿನ ಬದುಕನೊಮ್ಮೆ
ಬಯಸಿ, ದಿಟ್ಟಿಸಿ ದೀನನಾಗಿ ಬಿಡಬೇಕು
ಬದುಕ ಬದುಕುವ ಬೆರಗಿಗೆ.
ಎಲ್ಲೋ ನನ್ನ ಬದುಕು
ಕಳೆದು ಹೋಗುವ ಮುನ್ನ
ನಿನ್ನ ಹುಡುಕಾಟದಲೇ ನನ್ನ
ಕಂಡುಕೊಂಡು ಬಿಡಬೇಕು.
ಜೀವವೇ ಏಕಾಂತದುರಿಯಲಿ
ಬಳಲಿ ಬಾಳುವ ನೋವ ಮರೆತು
ಅರಳಿದ ಹೂವ ಮಧುವೀರಿ
ದುಂಬಿ ನಗಲು, ಆ ಸಾನಿಧ್ಯದ ಸವಿ
ನಿನ್ನ ಕೂಡೆ ಸವಿಯಲು ಜೀವ ಜೀವಕೆಯಾವ ಹಂಗು
ಹರೆಯ ಉಕ್ಕಿ ಮೋಹ ಬಳುಕಿ
ಬಾಗಿ ಹರಿಯಲು ಯಾವುದೋ
ಬಂಧ ಕಳಚಿ ಹಾರಲು ಮರಿಹಕ್ಕಿ,ಬೆಚ್ಚಗಿನ ಗೂಡ ಸೆಳವು
ಮನದಲಿ ಆದ್ರವಾಗಿರಲು ಬದುಕೇ
ವಿಹಿತವು ಸಾಗುತ ಮರೆಯಾಗಲು....
ಎಚ್.ಎನ್.ಈಶಕುಮಾರ್
10 comments:
ಅದ್ಭುತ ರಸಾನುಭವ ತಮ್ಮ ಈ ಕವನ. ಈ ಸಾಲುಗಳ೦ತೂ ಆಪ್ತವಾದವು- "ಸುತ್ತಲಿನ ಬದುಕನೊಮ್ಮೆಬಯಸಿ, ದಿಟ್ಟಿಸಿ ದೀನನಾಗಿ ಬಿಡಬೇಕು ಬದುಕ ಬದುಕುವ ಬೆರಗಿಗೆ". ಧನ್ಯವಾದಗಳು.
ಬದುಕು ಕಳೆದುಹೋಗುವ ಮುನ್ನ ಬದುಕಿಬಿಡಬೇಕನ್ನುವ ನಿಮ್ಮ ಭಾವನೆಗಳ ಕವನ ತುಂಬಾ ಚೆನ್ನಾಗಿದೆ...
bahala chennagide.badukina bagge nimma thuditha ishtavaithu:)
ಸುಂದರ ಕವನದ ಸಾಲುಗಳು
ಅದ್ಭುತವಾಗಿವೆ
'ಎಚ್.ಎನ್. ಈಶಕುಮಾರ್ ' ಅವ್ರೆ..,
ಸೊಗಸಾದ ಸಾಲುಗಳು...
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/
ಬದುಕಿನ ನೈಜ ಚಿತ್ರಣ ಇಲ್ಲಿದೆ
ಬದುಕೇ ವಿಹಿತವು - ಸುಪ್ತ ಮನಸ್ಸಿನ ಭಾವನೆಗಳ ಒಲಾಂತರ್ಯದ ತಿರುಳು. ಎಲ್ಲೋ ಕಳೆದು ಹೋಗುವ ಮುನ್ನ ನನ್ನ ಬದುಕು ಕಂಡು ಕೋ ಬೇಕು. ನಿನ್ನ ಹುಡುಕಾಟದಲ್ಲಿ ನಾನು ನನ್ನ ಕಾಣಬೇಕು. ನಾನು, ನೀನೆ ಆಗಿ ಬಾಳಬೇಕು ಎನ್ನುವ ಮನಸ್ಸಿನ ಹಂಬಲ.
ಜೀವವೇ ಏಕಾಂತದುರಿಯಲಿ ನೊಂದು ಬೆಂದು ಬಾಳುವುದನ್ನು ಮರೆತು
ಅರಳಿದ ಹೂವಿನ ಸವಿಯನ್ನು ಸವಿಯೋ ದುಂಬಿ ಆ ಸವಿಯಲ್ಲಿ ಮೈ ಮರೆಯುವಂತೆ ನಿನ್ನ ಜೊತೆ ಸೇರಿ ಕಳೆಯುವ ಕ್ಷಣಗಳು ಮಧುರ. ಒಂದು ಮರಿ ಹಕ್ಕಿ ತಾನು ಒಂದು ತನ್ನ ನಿಲುವನ್ನು ರೂಪಿಸಿಕೊಳ್ಳುವ ಸಮಯಕ್ಕೆ ಸರಿಯಾಗಿ ತನ್ನ ತಾಯಿಯ ಬೆಚ್ಚಗಿನ ಮಡಿಲನ್ನು ಬಿಟ್ಟು ಹೋದಹಾಗೆ ನನ್ನ ಮನಸ್ಸಿನಲ್ಲಿ ನೀನು ಮೂಡಿಸಿ ಮರೆಯಾಗಿ ಹೋದ ನೋವು ಸಹಿಸಲಾರದ್ದು ಅಂತ ಬದುಕು ಬೇಡವಾದದ್ದು. ಭಾವ ಪೂರ್ಣವಾಗಿದೆ ಕವನ ಈಶ.
ಚೆನ್ನಾಗಿದೆ ತಮ್ಮ ಕವನ, ನವ್ಯದ ಪ್ರಮಾಣೀಕೃತ ಭಾವ!
ಈ ನಿಮ್ಮ ಕವನ ತುಂಬಾ ಚೆನ್ನಾಗಿದೆ. "ಎಲ್ಲೋ ನನ್ನ ಬದುಕು ಕಳೆದು ಹೋಗುವ ಮುನ್ನ ನಿನ್ನ ಹುಡುಕುವುಕೆಯಲ್ಲೇ ನನ್ನ ಕಂಡುಕೊಳ್ಳಬೇಕು" ..ಈ ಸಾಲು ತುಂಬಾ ಇಷ್ಟವಾಯ್ತು.
ಎಲ್ಲಾ ಕವನಗಳೂ ತುಂಬಾ ಚೆನ್ನಾಗಿವೆ..
ಎಲ್ಲೋ ನನ್ನ ಬದುಕು
ಕಳೆದು ಹೋಗುವ ಮುನ್ನ
ನಿನ್ನ ಹುಡುಕಾಟದಲೇ ನನ್ನ
ಕಂಡುಕೊಂಡು ಬಿಡಬೇಕು.
tumbaaa chennaagive saalugalu!
Post a Comment