Thursday, April 22, 2010
ಬಿಂದು-ಅನಂತ.
ಅಪರಿಚಿತ ಜೀವಾತ್ಮಗಳೆರಡು
ಅನುರಗಾದಿ ಬೆರೆತು ಅವರೊಲವ
ಕುರುಹು ತಾಯಗರ್ಭದಲಿ ಮೂಡಿದ
ಜೀವದ ಆಶಾಕಿರಣದ ಉಸಿರ
ಪ್ರತಿ ಎಳೆತದಲು
ಬಸಿರ ಜೀವದ ಅಂತಃಕರಣ.
ಜೀವ ಚೇತನದ ಚಿಗುರೊಡನೆ
ಗರ್ಭದೊಡಲು ತುಂಬಲು
ಪ್ರತಿದಿನವೂ ತನುವ ಚೈತನ್ಯವು
ಹಿಮ್ಮಡಿಯಾಗಿ ಪ್ರಸವವೇದನೆಯ
ಆ ದಿವ್ಯಘಳಿಗೆಯಲಿ ದೈದಿಪ್ಯಮಾನವು
ಮೂಡಲು ತಾಯಿಯ ಮನದೊಡಲ
ಸಂತುಷ್ಟವು ಆ ಕಂಗಳಲಿ
ಪನ್ನೀರ ಬಿಂದುವಾದವು.
ಪ್ರಕೃತಿಯ ಜಗದಲಿ ಹಸಿರ
ಅಭೂತಪೂರ್ವ ಸಿರಿಯಾ ಹೊಮ್ಮಿಸಿ
ಚಿಮ್ಮಿಸಲು ತಂಗಾಳಿಯ ತಂಪನ್ನ ಹೀರಿ
ಘನಿಗೊಳ್ಳುತ ಮೋಡ ತನ್ನ ಒಡಲನು
ಅಗಾಧವಾಗಿಸುತ ಭುವಿಯ
ಪ್ರೇಮ ಮಂತ್ರಕೆ ಮಾಗಿ ಕಪ್ಪಾಗಿ ಬೀಗಿ
ತನ್ನೊಲವು ಹನಿ ಹನಿಯಾಗಿ
ಭುವಿಯ ಮುತ್ತಲು ಕೂಡಿದ
ಪ್ರತಿ ಹನಿಯ ಹರಿವು ನದಿಯಾಗಿ
ಜೀವಹೊಮ್ಮಲು ತಾಯಗರ್ಭದಂತ
ಸಾಗರದೊಡಲ ಮೋಹದ ಮುರಳಿ
ರಾಗವು ಕರೆಯಲು ಗುರಿಯ ಚಿತ್ತದಿ
ನದಿ ತನ್ನ ಮರೆಯಲು
ಲೀನವು
ಸಾಗರನ ಅನಂತ ಗರ್ಭದೊಳು.
ಎಚ್.ಎನ್.ಈಶಕುಮಾರ
Subscribe to:
Post Comments (Atom)
7 comments:
tumbaa chennagide,
kavanada artha bahala hidisitu
ಅರ್ಥಗರ್ಭಿತ ವಿಸ್ತಾರದ ಹರವಿನ ಕವನ. ಬದುಕ ಮುರ್ತಾಮುರ್ತದ ತೋಟಿಯ ಪ್ರಕ್ರಿಯೆ ಸು೦ದರವಾಗಿ ಸಾ೦ಕೇತಿಕ ಪದಗಳಲ್ಲಿ ವ್ಯಕ್ತವಾಗಿದೆ.
ಸರ್ ಚೆನ್ನಾಗಿದೆ..
ಕವನದ ಅರ್ಥ...
ಶಬ್ಧ ಬಳಕೆ ಎಲ್ಲವೂ ಚೆನ್ನಾಗಿದೆ...
ನಿಮಗೆ ಕವನ ಬರೆಯುವದು ಸಿದ್ಧಿಸಿದೆ...
ಚಂದದ ಕವಿತೆಗಾಗಿ ಅಭಿನಂದನೆಗಳು...
"ಅಪರಿಚಿತ ಜೀವಾತ್ಮಗಳೆರಡು ಅನುರಾಗದಿ ಬೆರೆತು.." ಆರಂಭದ ಪದಗಳೇ ನಮ್ಮನ್ನು ಕಟ್ಟಿಹಾಕಿ, ಒಂದೇ ಉಸಿರಿಗೆ ಪೂರ್ತಿ ಓದಿಸಿಕೊಳ್ಳತ್ತೆ..... "ಸಾಗರದೊಡಲ ಮೋಹದ ಮುರಳಿ ರಾಗವು ಕರೆಯಲು... ನದಿ ತನ್ನ ಮರೆಯಲು ಲೀನವು ಸಾಗರನ ಅನಂತ ಗರ್ಭದೊಳು...." ಅತ್ಯಂತ ಸುಂದರ ಸಾಲುಗಳು... ಜೀವನ, ದಾಂಪತ್ಯದ ಒಳ ಅರ್ಥ.... ನದಿಯ ಲೀನ ಸಾಗರದಲ್ಲಿ... ಈಶ್.... ತುಂಬಾ ಸುಂದರವಾಗಿದೆ...
I dont know what to say... will speak to u in person. Its not multidimensional but plenty dimensional
ಮಳೆಗೆ ತನ್ನ ಪ್ರೀತಿಯು ಹನಿ ಹನಿಯಾಗಿ ಭೂಮಿಗೆ ಮುತ್ತಿಡಲು ಹೋದಾಗ ಹನಿಗಳೆಲ್ಲಾ ನದಿಯಾದವು. ಅಮ್ಮನ ಮಡಿಲಿನಂತ ಸಾಗರವು ಕರೆಯಲು ನದಿಯು ತನ್ನ ಗುರಿ ಮುಟ್ಟಲು ತನ್ನ ಮರೆಯುತ ಸಾಗರದೊಳಗೆ ಐಕ್ಯವಾಯಿತು.
Post a Comment