ನನ್ನನ್ನೆ ಮರೆತು ಉಸಿರಾಟದ ನೆಪದಲಿ ಜೀವವ ಜೀಕುವ ಪರಿ ನನ್ನದು. ನಿನ್ನ ನೆನೆದು ನೆನೆದು ನನ್ನ ವಿರಹವ ಮರೆಯುವ ನೆಪದಲ್ಲೆ ಲೋಕವನು ಸಹ ಮರೆತು ನನ್ನಲ್ಲೂ ನಿನ್ನಲ್ಲೂ ಇದ್ದು ಇಲ್ಲದಾಗಿರುವೆ ನಾ ಜೀವಿಸುತ ತ್ರಿಶಂಕುವಾಗಿ...
(ಅವನು / ಅವಳು) ತನ್ನನ್ನೇ ಮರೆತು ಅವರು ಉಸಿರಾಡುವ ಗಾಳಿಯಲ್ಲೂ ಅವರನ್ನೇ ನೆನೆದು ಈ ಜೀವನವನ್ನು ಸಾಗುವ ರೀತಿ ಅವರದು. ಅವನನ್ನು / ಅವಳನ್ನು ನೆನೆದು ಏಕಾಂಗಿಯಾಗಿ ಈ ಲೋಕವನ್ನು ಸಹ ಮರೆತು ಅವನಲ್ಲೂ / ಅವಳಲ್ಲೂ ಇದ್ದೂ ಇಲ್ಲದಂತಾಗಿರುವೆ ಸ್ತಿತಪ್ರಜ್ಞ ನ ರೀತಿ ಅವನು / ಅವಳು ಬಾಳುತ. ಪ್ರೀತಿಯನ್ನು ಪಡೆದು, ಆ ಪ್ರೀತಿ ಇನ್ನೇನು ಸಿಕ್ಕೆ ಬಿಟ್ಟಿತು ಅನ್ನೋ ಕ್ಷಣದಲ್ಲಿ ಮತ್ತೆ ದೂರವಾದಂತೆ ಭಾಸವಾಗುವಂತೆ ಮನ ನೊಂದು ಒಬ್ಬ ಏಕಾಂಗಿಯು ತನ್ನ ವಿರಹವನ್ನ ನಿವೆದಿಸುತ್ತಿರುವಂತೆ ಅರ್ಥಪೂರ್ಣವಾಗಿದೆ. ಪ್ರೀತಿಯನ್ನು (ಅವಳು / ಅವನು ) ಪಡೆದು ನಂತರ ಅದರಿಂದ ಅನುಭವಿಸುವ ನೋವಿನ ಪರಿ ಇದರಲ್ಲಿದೆ.
6 comments:
nice
ಚೆನ್ನಾಗಿದೆ... ಏನು ಈಶ್... ವಿರಹ ಗೀತೆ ಆರಂಭಿಸಿಬಿಟ್ಟಿದ್ದೀರಿ...? :-)
ವಿರಹವನ್ನು ವ್ಯಕ್ತಪಡಿಸುವ ಪದ್ಯ ಇಷ್ಟವಾಯಿತು.
yake isht kashta padtidira? :)enjoy...
(ಅವನು / ಅವಳು) ತನ್ನನ್ನೇ ಮರೆತು ಅವರು ಉಸಿರಾಡುವ ಗಾಳಿಯಲ್ಲೂ ಅವರನ್ನೇ ನೆನೆದು ಈ ಜೀವನವನ್ನು ಸಾಗುವ ರೀತಿ ಅವರದು. ಅವನನ್ನು / ಅವಳನ್ನು ನೆನೆದು ಏಕಾಂಗಿಯಾಗಿ ಈ ಲೋಕವನ್ನು ಸಹ ಮರೆತು ಅವನಲ್ಲೂ / ಅವಳಲ್ಲೂ ಇದ್ದೂ ಇಲ್ಲದಂತಾಗಿರುವೆ ಸ್ತಿತಪ್ರಜ್ಞ ನ ರೀತಿ ಅವನು / ಅವಳು ಬಾಳುತ. ಪ್ರೀತಿಯನ್ನು ಪಡೆದು, ಆ ಪ್ರೀತಿ ಇನ್ನೇನು ಸಿಕ್ಕೆ ಬಿಟ್ಟಿತು ಅನ್ನೋ ಕ್ಷಣದಲ್ಲಿ ಮತ್ತೆ ದೂರವಾದಂತೆ ಭಾಸವಾಗುವಂತೆ ಮನ ನೊಂದು ಒಬ್ಬ ಏಕಾಂಗಿಯು ತನ್ನ ವಿರಹವನ್ನ ನಿವೆದಿಸುತ್ತಿರುವಂತೆ ಅರ್ಥಪೂರ್ಣವಾಗಿದೆ. ಪ್ರೀತಿಯನ್ನು (ಅವಳು / ಅವನು ) ಪಡೆದು ನಂತರ ಅದರಿಂದ ಅನುಭವಿಸುವ ನೋವಿನ ಪರಿ ಇದರಲ್ಲಿದೆ.
ಇಷ್ಟ ಆಯ್ತು.
ಪ್ರೀತಿ ಅನ್ನೋದೆ ಹಾಗೆ..ನಮ್ಮನ್ನೆ ನಾವು ಮರೆತು, ಭ್ರಮಿತರಾಗುವುದಕ್ಕೆ ನಾವಾಗಿಯೇ ಸಿದ್ಧರಾಗಿಬಿಡುವ ಅಮೋಘ ಮೌಢ್ಯ..!
ಇದನ್ನು ಜಾಣ ಕುರುಡು ಅನ್ನಬೇಕೋ,ನಾವಾಗಿಯೇ ಬರಮಾಡಿಕೊಳ್ಳುವ ಅಮೂಲ್ಯ ಯಾತನೆ ಅನ್ನಬೇಕೋ ನನಗೂ ತೋಚುತ್ತಿಲ್ಲ..!!
Post a Comment