Saturday, July 31, 2010

ನೆನಪ ಗಿಡ...


ಕಾಲ ಸರಿಯುವ ಮುನ್ನ
ಮಾತು ಮುಗಿಯುವ ಮುನ್ನ
ನೆನಪ ಗಿಡವಾಗಿಬಿಡು
ಮನದ ಅಂಗಳದಿ
ಪೊರೆದು ತೊರೆವೆನು ನಿನ್ನ
ನಾ ಸರಿಯುವ ಮುನ್ನ.....





ನಿನ್ನ ಮರೆವ ಹೊತ್ತಿಗೆ
ನೆಪವಾಗಿ ನೆನಪಾತು
ನೀ ನಿಟ್ಟ ಆಣೆಯ ಮಾತು
'ನೀ ಮಡಿದರು ನೀನೆ
ನನ್ನ ಮೊದಲ ಪ್ರೀತಿಯು,
ನಾ ಮರೆತರು ಮನ
ಮರೆಯದ ಮೊದಲ
ಪ್ರಿಯತಮನು'.
ಮೋಡದ ಮರೆಯಲಿ
ನೇಸರ ಮರೆಯಾಗುವ
ಹೊತ್ತಲಿ ನಿನ್ನ ನೆನಪು
ಮನದಂಗಳದಲಿ
ದೀಪದಂತೆ ಬೆಳಗುತಿದೆ.

14 comments:

V.R.BHAT said...

Nice!

AntharangadaMaathugalu said...

ಚೆನ್ನಾಗಿದೆ ಈಶ್.... ಮೊದಲ ಪ್ಯಾರದ ಮಾತುಗಳ ಜೊತೆಯ ಚಿತ್ರ ತುಂಬಾ ಹೊಂದಿಕೆಯಾಗಿದೆ...

ಶ್ಯಾಮಲ

ಜಲನಯನ said...

ಈಶ್ ಚಿಕ್ಕ ಚಿಕ್ಕ - ಆದರೂ ಚೊಕ್ಕ ಸಾಲುಗಳು
ಮೋಡದ ಮರೆಯಲಿ ನೇಸರ ಮರೆಯಾಗಿವ ಹೊತ್ತಲಿ..ಮನದಂಗಳದಲಿ ದೀಪದಂತೆ ಬೆಳಗುತಿದೆ....
ಇಷ್ಟವಾದ ಸಾಲುಗಳಿವು.

udaya said...

Nice one...

Unknown said...

NenapugaLa Maatu Madhuraa...haageyee.. nivu nenapina bagge barediro kavitegaLu saha.. aste Madhuravaagide.. eshu..

ಚರಿತಾ said...

ಈಶ, ನಿನ್ನ ನೆನಪ ಗಿಡ ಬಾಡದಿರಲಿ

kavya H S said...

kavanagalu thumba chennagive

Unknown said...

ಕಾಲ ಕಳೆದು ಹೋಗುವ ಮೊದಲು, ಮಾತು ಮುಗಿದು ಹೋಗುವ ಮೊದಲು, (ಅವನ / ಅವಳ) ನೆನಪಿನ ಗಿಡವಾಗಿ ನನ್ನ ಮನದಂಗಳದಿ ಬೆಳೆದು ಬಿಡು ನಾನು ನಿನ್ನಿಂದ ದೂರವಾಗುವ ಮುನ್ನ ..........

ನಾನು ನಿನ್ನನ್ನು ಮರೆಯುವ ಕಾಲಕ್ಕೆ ನನಗೆ ನೆನಪಾದದ್ದು ನೀನು ಇಟ್ಟ ಆಣೆಯ ಮಾತು. ನೀನು ಈ ಲೋಕವನ್ನು ತೊರೆದು ಹೋದರು ನೀನೆ ನನ್ನ ಮೊದಲ ಪ್ರೀತಿ. ನಾನು ಮರೆತರೂ ನನ್ನ ಮನಸ್ಸು ಮರೆಯದೆ ನನಗೆ ನೆನಪಿಸುತ್ತದೆ ನಾನೇ ನಿನ್ನ ಮೊದಲ ಪ್ರಿಯತಮನೆಂದು.

ಕವಿತೆಯ ಸಾಲುಗಳು ಚನ್ನಾಗಿ ಸರಿ ಹೊಂದಿದೆ.

ALL IN THE GAME said...
This comment has been removed by the author.
ALL IN THE GAME said...

pl check ur inbox I have given a photo comment to this poem

shivu.k said...

ಈಶಕುಮಾರ್,

ಕವನ ಚಿಕ್ಕದಾದರೂ ಸೊಗಸಾಗಿವೆ..

ಸೀತಾರಾಮ. ಕೆ. / SITARAM.K said...

modala pyaara tumbaa ishtavaayitu. chendada kavana.

ಸಾಗರದಾಚೆಯ ಇಂಚರ said...

sundara kavite

chikkadaagi chokkavaagi ide

*ಚುಕ್ಕಿ* said...

ನೆನಪ ಗಿಡ ಬಾಡದಿರಲಿ ಈಶ ಜಿ. ನೆನಪೆಂಬ ಸ್ಟ್ರಾಂಗ್ ಗುಳಿಗೆ ನೀಡೀದ್ದೀರ, ನಿಮ್ಮ ಪುಟ್ಟದಾದ ಚುಟುಕಗಳ ಮೂಲಕ. ಬಹಳ ಸೊಗಸಾಗಿದೆ ಕವಿತೆ.