ಮಳೆಯ ಮಾತು..
ಬಿದ್ದ ಬಿರುಮಳೆಯ
ಹನಿ ಹನಿಯೂ ಕೂಡಿ
ಸಿಕ್ಕ ಜಾಡ ಹಿಡಿದು ಓಡುವ ಪರಿ
ಬೋರ್ಗರೆದ ಮಳೆಯ ಮಿಳಿತಕೆ
ಹಸಿಯಾದ ನೆಲದಮೆತ್ತನೆ ಸ್ಪರ್ಶ
ತೊಟ್ಟಿದ್ದ ಪಾದಕಷ್ಟೆ,
ಪಚ ಪಚನೆ ತುಳಿದ
ಮೆದುನೆಲದಲಿ
ಕೆಂಪನೆ ನೀರ ಬುಗ್ಗೆ
ಕ್ಷಣಕೆ ಒಡೆಯಲು
ಕಿತ್ತ ಹೆಜ್ಜೆಗುರುತಲಿ
ಮೂಡುವ ಚಿತ್ತಾರ
ಕಣ್ಣಳತೆಗೆ ಸಿಗದೆ ಜಾರಲು
ಹಸಿರೆಲೆಯ ಮೈ ಸೊಕಿಸಿ
ಜೋತು ಬಿದ್ದು ನೆಲಕೆ ಜಾರುವಹನಿಯಲುಳಿವ ನವಿರು
ಮುತ್ತಿಕ್ಕಿ ಮಣ್ಣ ಸುಳಿದಾಡುವ
ಕಂಪು, ಬೆಟ್ಟದ ಒಡಲಲಿಳಿದಮರವೆಲ್ಲ ತೊಳೆದ ಮೈಯ
ಗಾಳಿಗೊಡ್ಡಿ ತೊನೆಯಲು
ಹಸಿರ ಬೆಟ್ಟವೇ ಅತ್ತಿತ್ತಸುಯ್ಯುವ ಹಾಗೇ
ಕಣ್ತುಂಬಿ ಬಂದ ಹೊತ್ತಲಿ
ಉಸಿರ ಎಳೆದು ಬಿಡುವನಿಟ್ಟುಸಿರ ನಡುವಲಿ ಸಾಗುತಲಿತ್ತುಭಾರದ ಹೆಜ್ಜೆಯ ಲೆಕ್ಕಾಚಾರ
ಮನದಿ...
7 comments:
ಸರ್ ಸ್ಪರ್ಶ ಚೆನ್ನಾಗಿದೆ,
ಭೋರ್ಗರೆವ ಎನ್ನುವ ಬದಲು ಬೊರ್ಗರೆವ ಎಂದಾಗಿದೆ
ಸರಿಪಡಿಸಿ
chennagide kavana isha....
ತುಂಬಾ ಚೆನ್ನಾಗಿದೆ ಮಳೆಯ ಕವನ.
though correlation of rain, rain drops and human perception appears in the first line of poem, its not maintained throughout. It does create confusion in few lines.There is no any clear message in this poem. Keep on writing then only those finer aspects would get introduced in writings.
ninna nudi chitra chennagide.
nice write up...
sir,nimma male kuritaada kavana tumba chennaagide.abhinandanegalu.
Post a Comment