'ಆತ್ಮ'ಹತವಾಗಿ..
'ಆತ್ಮ'ಹತವಾಗಿ..ಹುಟ್ಟುತ್ತೆನೆಂದು ಎಣಿಸಿರಲಿಲ್ಲ
ಜೀವನವೇ 'ವಿಪರ್ಯಾಸ'
ಸೋಲಿನಲಿ ಗೆಲವು,ಗೆಲುವಿನಲಿ
ಸೋಲುಗಳ ಸರಮಾಲೆಯ
ಗೊಜಲಿನ ಎಳೆ ಎಳೆಯನು ಬಿಡಿಸುತ್ತ
ಅರಿವಿರದೆ ಸಾಗುವ ಬದುಕ
ಅರಿವ ಭ್ರಮೆಯ ಓಟವೇ ಕೊನೆತನಕ.
ಬದುಕಿಗೊಂದು ಅಂತ್ಯ 'ಸಾವು'
ದಿನ ದಿನವೂ ನಮ್ಮೊಳಗೇ ಉಸಿರುಕಟ್ಟಿ
ಸಾಯುತಿಹ ಕನಸ ಭ್ರೂಣಗಳೇ
ಕೇಕೆಯ ಹಾಕುತಿಹವು
ಬದುಕಲಾರದ ಬದುಕಿನ
ಕ್ರೂರ ಬರ್ಭರತೆಯ ಕಮಟು
ಪ್ರತಿ ಗರ್ಭಕೂ ತಾಕಿ ನಿಸ್ತೇಜ
ಜೀವಕೆ ಬದುಕಿನ ನಶ್ವರತೆಯ
ತಿಳಿಹಾಲ ಬಡಿಸುತಿಹವು.
ಎದೆಹಾಲ ಸವಿಯ ಸವಿವ ಮುನ್ನವೇ
ಭ್ರೂಣಗಳ 'ಆತ್ಮ'ಹತವಾಗಿ,ಜೀವ
ಜೀವಮಂಡಲದ ಹೊಸ್ತಿಲಲಿ
ಹಸಿಯ ಹುಸಿನಗೆಯಲಿ
ಹತಾಶೆಯ ಕಣ್ಣ ಅರಳಿಸುತಿಹವು..
ಎಚ್.ಎನ್.ಈಶಕುಮಾರ್
5 comments:
ಜೀವನವೆಂದರೇನೆಂದು ಮೊದಲ ಪ್ಯಾರಾದಾ ಸಾಲುಗಳಲ್ಲಿ ತುಂಬಾ ಚೆನ್ನಾಗಿ ಹೇಳಿದ್ದೀರಿ... ನಿಜ ನಮ್ಮೆಲ್ಲರ ಬದುಕೂ ಗೋಜಲುಗಳ ಎಳೆಯನ್ನು ಬಿಡಿಸುವ ವಿಪರ್ಯಾಸವೇ... !!!
ಶ್ಯಾಮಲ
It hurts to comment too Esh
ಪ್ರಿಯ ಈಶ,
ಈ ನಿರಾಶೆ, ಹತಾಶೆಗಳ ಕತ್ತಲಲ್ಲೆ ಕನಸೆಂಬ ಹಣತೆ ಹಚ್ಚುತ್ತಾ, ಅದನ್ನು ಕಾಪಿಡುವ ಆತ್ಮಸ್ಥೈರ್ಯ ನಮಗಿರಲಿ. ಜೀವನವೆಂಬ ವಿಸ್ಮಯ ಬಂಧನ ನಮಗೆ ಏನೆಲ್ಲ ಕಲಿಸುತ್ತಾ ಸಾಗಿದೆಯಲ್ಲ..?
ಜೀವನದ ಬಗ್ಗೆ ಬರೆದ ಕವನ ಇಷ್ಟವಾಯಿತು..
chendada kavana
Post a Comment