ಕೂತು ತಲೆ ತೂಕಡಿಸುವ
ಕಾಲ ಸ್ತಂಭಿಸುವ ಹೊತ್ತಲಿ
ಸಂಶೋಧಿಸಿ ಮನದ ಮಂಥನದಿಂದ
ಹೊರತೆಗೆದು ಹೇಳಿದ
ವಿಶ್ವವಿದ್ಯಾನಿಲಯದ ವಿದ್ವಾಂಸನ
ಮಾತು ಕಳೆದು ಹೋಗಿತ್ತು
ಅವನೇ ಹುಡುಕಿ ಹುಡುಕೀ
ಆರಿಸಿದ ತನ್ನ ಕಪಾಟಿನ
ದಶಕಗಳ ಜೀವಿತಾವಧಿಯ
ಪುಸ್ತಕದ ಸಾಲು ಸಾಲುಗಳಲಿ.
ಆ ಪಂಡಿತನ ಬಾಯಿಯಿಂದ
ಚಿಮ್ಮಿ ಬಂದ ಉಸಿರುಗಟ್ಟಿದ ಪದಗಳು
ಕದ ಮುಚ್ಚಿದ ಕೊಠಡಿಯ
ಫ್ಯಾನ್ ನ ಗಾಳಿಯಲಿ ತೇಲಾಡುತ
ಸಭಿಕರನು ಕಂಡು ಜೀವ ಬಂದಂತೆ
ಪುಳಕಗೊಂಡು ಬಳಿ ಧಾವಿಸಲು
ಅರ್ಪಣ ಭಾವದಲಿ, ಕಂಡದ್ದು
ಮುಖ ಮುಖದಲೂ ಕಂಗೊಳಿಸುತಿಹ
ಕಂಗೆಟ್ಟ ಭಾವ.
ಪುನರ್ಮನನಿಸಿದ ಪದಗಳು ಒಮ್ಮೆಗೆ
ಹಿಂತಿರುಗಿ ನಡೆದವು ಪ್ರೊಫೆಸರನ
ಬಳಿಗೆ ಶರಣಾಗಿ ಬೇಡಿದವು
ಉಸಿರುಗಟ್ಟಿ ಉಳಿಯುವೆವು ನಾವು
ಕಂಗೆಟ್ಟು ಕೊಳೆಯಲಾರೆವು
'ನೀವು ನಿರ್ಮಿಸಿ ಮುಚ್ಚಿಹ
ಕೊಠಡಿ ವಿನ್ಯಾಸದಲಿ...
8 comments:
Superb Sir..........
houda priya..!
uttamavada kavite
ಈಶ್, ಉಸಿಗಟ್ಟಿಸೋ ಅನುಭವದ ಬಂಧದಿಂದ ಬಿಡುಗಡೆಯ ಬಯಸೋ ಮಾನಸ... ಚನಾಗಿವೆ ಸಾಲುಗಳು...
ತುಂಬಾ ಚೆನ್ನಾಗಿದೆ..
ತುಂಬಾ ಚೆನ್ನಾಗಿ ಬರೀತೀರಿ..
ಬಹುಶಃ
ಕನ್ನಡ ಸಾಹಿತ್ಯದ ಒಳಹೊರಗು
ಚೆನ್ನಾಗಿ ಅನುಭವಕ್ಕೆ ಬರುತ್ತಿರಬೇಕು.
ನಿಮ್ಮ ಹಳೆಯ ಗುಂಗಿನಿಂದ ಹೊರಬಂದ ಹೊಸ ಕವಿತೆ! :-) ಇಷ್ಟ ಆಯ್ತು.
ನೆನಪುಗಳು ಸದಾ ಹಸಿರು
ಆಗಿಹುದು ಎನ್ನುಸಿರು
ನೆನಪಿನಾ ತೋಟದಲಿ ಆಯ್ದ ಸುಮ
ಕುಸುಮಗಳುನಾವು,
ಮುಂಚೂಣಿಯಲಿ ಶೋಭಿತ ದೀಪವು ನೀನು
ನಗುವಿನ ಚಿಲುಮೆಯೊ ಸ್ನೇಹದಸೆಲೆಯೊ
ಆತ್ಮೀಯತೆಯ ಆಗರವೊ
ಅಂತೂ ಮನದಾಳದಿ ಹೊಕ್ಕು
ಆಂತರ್ಯವನು ಫಟಫಟನೆ ಉಲಿದ ಗಿಳಿನೀನು
ನಿನ್ನಹೆಸರಿಗಿಲ್ಲ ತಿಲಾಂಜಲಿ
ನೀ ಸದಾಬೆಳಗುವ ದೀಪಾಂಜಲಿ
Post a Comment