ಸಲ್ಲಾಪದ ನಡುವೆ ನಿನ್ನ ಏಕಾಂತ!
ನಿನ್ನ ಕಾಲ ಬೆರಳ ಸೋಕಿ
ತೆರಳುತಿಹ ಅಲೆಯ ಪುಳಕ
ಕಂಡ ಪ್ರತಿ ಅಲೆಯು
ನಿನ್ನತ್ತ ತೆವಳಲು
ನೀ ನಿಂತ ನೆಲೆ, ನದಿಯ ಸೆಳೆತಕೆ
ಸಿಗದ ದಡದ ಬಿಂದು
ಅಲ್ಲಿ ನೀನಿತ್ತ ಸ್ಪರ್ಶದಲೇ ಉಳಿದಿಹ
ಭೂಮಿ ತೂಕದ ಎದೆಯ ಭಾರ!
ನಿಸರ್ಗದ ಮೃದು ನಿನ್ನ ತನ
ಮೆಲ್ಲಗೆ ಮಂಜು ಹೂವಿನ ಎಳೆಯ ಮೇಲೆ
ಮೂಡಿಸಿದ್ದು ಮಾತ್ರ ಹನಿಯ ಚಿತ್ತಾರ.
ಬಸುವಿನ ಹುಳು ತನ್ನ ದಾರಿಯಲಿ
ಗೆರೆ ಎಳೆದು ಬಿಡಿಸಿದ್ದು ಮಾತ್ರ
ಸರಳಾತಿಸರಳ ರೇಖೆ.
ಆವರಿಸಿಹ ಮೌನದ ನಡುವೆ
ಮಾತನಾಡಿದ್ದು ಮಾತ್ರ ಸ್ಪರ್ಶ!
ಇದೆಲ್ಲದರ ನಡುವೆ ನಿನ್ನಲ್ಲಿ
ಉಳಿದಿಹುದು ಮಾತ್ರ
ಜೀವಕೆ ಭಾವ!
ಭಾವಕೆ ಜೀವ!
ಎಚ್.ಎನ್. ಈಶಕುಮಾರ್
4 comments:
ಜೀವಕ್ಕೆ ಭಾವ,ಭಾವಕ್ಕೆ ಜೀವ..ತುಂಬ ಚೆನ್ನಾಗಿದೆ ಈ ಸಾಲು...
Dear Friend,
Nice poem. The last two line really enrich the poem. "Jeevakke Bhava; Bhavakke Jeeva" keloke tumba madhuravagide. We have to realise the concept JEEVA & BHAVA". May be bhavanegaliddavaru maatra Arta madkotare Alva. Carry on....
ಈಶ್ ಇಂಥಾ ಭಾವುಕ ಕವನಗಳನ್ನು ಬರೆಯುತ್ತ ನೈಜತೆಯನ್ನು ಮರೆವಂತ ಮೋಡಿ ಮಾಡುತ್ತಿರುವಿರಿ!? ನನಗೆ ದು:ಖ ಸಂತೋಷಗಳೆರಡೂ ಆಗುತ್ತಿವೆ
sundara kavithe eesha kumar... naviru yaanada maathanaaduttha bhoomi thookada bhaara eke? arthavaagalilla... vishada ve
? niveditha
Post a Comment