ವೇದನೆಯ ಆರದ ಗೊಳು ಆಲಿಸಲೋ
ಅಸಾಧ್ಯ ಹಿಂಸೆ, ಒಡಲಾಳದಲಿನ
ನಿನ್ನ ನೋವು ಬರಿದಾಗದೇ
ಉಮ್ಮಳಿಸುತಿಹ ನಿನ್ನ ರೋದನೆ.
ಮರುಗುವ ಜೀವಗಳಿಗೋ
ಜಗದ ನೋವಲ್ಲಿ ಮುಳುಗುತಲಿಹ
ಹೊಸ ಆಕ್ರಂದನ, ಆಲಿಸಿದಷ್ಟು
ಇಮ್ಮಡಿಸುವ ಬೇಸರ,
ಇನ್ನಾವುದೋ ನೆವದಲಿ ಪಲಾಯನಕೆ
ದಾರಿ ಹುಡುಕುವ ಮರುಕ ಮನ!
ನಿನಗಾದರೂ ಸಹ ಮತ್ತೇನೂ
ಅಸಹಾಯಕತೆಯ ವ್ಯಕ್ತವೊಂದೇ
ಉಳಿದಿಹುದು ಬದುಕಲಿ ಎನುವ
ಪರಿಯಲಿ ದನಿ ಸೋತು
ಕ್ಷೀಣಿಸಲು, ಬತ್ತಿರುವ ಹನಿಯ
ಕಣ್ಣಲೂ ಜಗಕೆ ಕಂಗೊಳಿಸುತಿಹ
ಶೂನ್ಯವು! ಕಾರಣವೇ ತಿಳಿಯದೆ
ನೊಂದ ಮನಕೆ ಆವರಿಸಿದ
ಛಾಯೆ ದುಗುಡ!
6 comments:
spoorthi yaru e kavithe bariyalu thumba chennagidhe pa
ಆವರಿಸಿದ ಛಾಯೆ ತುಂಬಾ ಒಳ್ಳೆಯ ಶೀರ್ಷಿಕೆ.
ತುಂಬಾ ನೋವನ್ನು ಅರದೆ ಬರೆದಿದ್ದೀರ ಎನಿಸಿತು. ಭಾಷೆಯ ಬಳಕೆ ಸರಳವಾಗಿದೆ ಮತ್ತು ಅರ್ಥವತ್ತಾಗಿದೆ.
ಆದರೂ ನೀವು ಮಾತ್ರ ಇಷ್ಟು ನೋವು ಪಡಬಾರದು ಸಾರ್. ಖುಷಿಯಾಗಿರಿ ಮತ್ತು ಭಗವಂತ ನಿಮಗೆ ನಗುವನ್ನೇ ಧಾರೆ ಎರೆಯಲಿ.
ನನ್ನ ಬ್ಲಾಗಿಗೂ ಬನ್ನಿ.
ಚೆಂದದ ಕವನ.ನನ್ನ ಬ್ಲಾಗಿಗೊಮ್ಮೆ ಬನ್ನಿ.ನಮಸ್ಕಾರ.
ಕಿತ್ತು ಸೆಳೆಯುವ ಪ್ರವಾಹದ ಮಧ್ಯದಲ್ಲೂ ಮರ ನಿಂತು ಮತ್ತೂ ಬದುಕಲು ಪ್ರಯತ್ನಿಸುತ್ತದೆ. ನೋವಿನ ಮಹಾಪೂರದ ನಡುವೆಯೂ ಕೊಚ್ಚಿಹೋಗದೇ ಹಾಗೇ ತಡೆದುನಿಂತು ಜಯಿಸಿ ಬದುಕಬೇಕಾದ ಅಗತ್ಯ ಇಂದಿನ ಜನಾಂಗಕ್ಕಿದೆ. ಬಹುಶಃ ಅದೇ ತಮ್ಮ ಕವನದ ಆಶಯಕೂಡ, ಶುಭಮಸ್ತು.
Hi Friend, ni ello kelida, noodida novina chayeyannu Ninna Avarisida chayeya pada-punjadalli chennagi moodisiruve gelaya
eede bhaya, dugudda, asahayakate nanna manadallu.... palaayanake haatoreyuva manasu.... nanage tumba hatiravada nimma saalugalu adbhuta..
Post a Comment