Wednesday, November 25, 2009

ಪ್ರತಿಬಾರಿಯೂ ನಾವೇಕೆ ಸೋಲುತ್ತೇವೆ?

ಆಡಳಿತದಲ್ಲಿ ಲೋಪಗಳ ತಡೆಯಲು, ಅಧಿಕಾರದ ವಿಕೇಂದ್ರಿಕರಣದ ಮುಖೇನ ಉತ್ತಮ ಆಡಳಿತ, ಮನೆಯಮುಂದಕ್ಕೆ ಆಡಳಿತ ಎಂಬ ಧೈಯದೊಂದಿಗೆ, ಪ್ರಜಾಪ್ರಭುತ್ವದ ಆಡಳಿತಾಧಿಕಾರವನು ಹಂತ
ಹಂತವಾಗಿ ವಿಂಗಡಿಸಿ ಆಡಳಿತ ಯಂತ್ರವನು ಚುರುಕುಗೊಳಿಸಿ ಬೇಗ ಬೇಗ ಜನರ ಕಷ್ಟಗಳಿಗೆಸ್ಪಂಧಿಸುವ ಧೈಯ ನಮ್ಮ ಸರ್ಕಾರಗಳದ್ದು.
ಜನರ ಕುಂದು-ಕೊರತೆಗಳ ನಿವಾರಿಸುವ, ಅವರ ಕಷ್ಟ-ನಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಸರ್ಕಾರ ತನ್ನ ಪುಟ್ಟ ಪುಟ್ಟ ಘಟಕಗಳಂತೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್,ತಾಲ್ಲೂಕು ಕಛೇರಿ, ಜಿಲ್ಲಾ ಕಛೇರಿಗಳನ್ನ ಸ್ಥಾಪಿಸಿದೆ. ಘಟಕಗಳ ಮೂಲಕ ಜನರ ಕೆಲಸ ನಿರ್ವಹಿಸುತ್ತಿರುವ ಸರ್ಕಾರವಿಂದು ನಿಜಕ್ಕೂ ತಮ್ಮ ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ, ಜನರ ಹಿತವನ್ನು ಕಾಯುವ ಕೆಲಸ ,ಮಾಡುತ್ತಿವೆಯ? ನಮ್ಮ ದೇಶದಲಿಂದು ಅಧಿಕಾರದ ವಿಕೇಂದ್ರಿಕರಣದ ಸಣ್ಣ ಸಣ್ಣ ಘಟಕಗಳು ಜನರ ಕೆಲಸಗಳನು ಮಾಡುತ್ತಿವೆಯ?ಅವುಗಳಿಗೆಲ್ಲ ಅಂತ ಅಧಿಕಾರ ಇದೆಯಾ? ಇಲ್ಲವ? ಯಾವ ಯಾವ ಸಮಯದಲಿ ಯಾವ ಯಾವ ಘಟಕಗಳುಹೇಗೆ ಕೆಲಸ ಕಾರ್ಯಗಳನು ಹಮ್ಮಿಕೊಳ್ಳಬೇಕು, ಏನೇನೂ ಕ್ರಮಗಳನ್ನು ಅನುಸರಿಸಬೇಕುಎಂಬುದು ನಿರ್ದ್ರಿಷ್ಟವಾಗಿ ಇದೆಯಾ? ಇದ್ದರೆ ಅವಗಡಗಳನ್ನು ನಿಭಾಯಿಸುವಲ್ಲಿ ಪ್ರತಿಭಾರಿಯೂ ನಾವೇಕೆ ಸೋಲುತ್ತೇವೆ. ನೋವಿನಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲಲು ನಮ್ಮ ಸರ್ಕಾರಗಳಿಗೆಕೆ ಸಾಧ್ಯವಾಗುವುದಿಲ್ಲ? ಅದು ಅಷ್ಟೆಲ್ಲ ಸರ್ಕಾರದ ಘಟಕಗಳಿದ್ದುಎಂಬುದೇ ನನ್ನ ಪ್ರಶ್ನೆ.

ಇಂದು ಗ್ರಾಮ ಮಟ್ಟದಿಂದ ಹಿಡಿದು ಶಾಸಕರವರೆಗೆ ಜನರ ಪ್ರತಿನಿಧಿಸುವ ಜನಪ್ರತಿನಿಧಿಗಳು,ಗ್ರಾಮಲೆಕ್ಕಿಗರು,ದಂಡಾಧಿಕಾರಿಗಳು,ಜಿಲ್ಲಾಧಿಕಾರಿಗಳು,ಸಚಿವರು ಹೀಗೆ ಆಯಾ ಹಂತವನ್ನು ಪ್ರತಿನಿಧಿಸುವ ನಾಯಕರು ಸರ್ಕಾರಿ ಅಧಿಕಾರಿಗಳು, ನೌಕರರು ಇರುವ ಸುಸಜ್ಜಿತವಾದ ವ್ಯವಸ್ಥೆ ಮಾಡುವುದಾದರೂ ಏನನ್ನ. ಅಧಿಕಾರದ ದುರ್ಬಳಕೆ ಆಗದಿರಲಿ,ಒಂದೇ ಕಡೆ ಕೇಂದ್ರಿತವಾಗದಿರಲಿ ಎಂದು ವಿಘಟನೆ ಗೊಳಿಸಿದ ಆಡಳಿತ ಯಂತ್ರ ಸರಿಯಾಗಿಸಮಯೋಚಿತ ಕಾರ್ಯಗಳನು ನಿರ್ವಹಿಸದೆ ಇದ್ದಲ್ಲಿ ಅವುಗಳಿದ್ದು ಲಾಭವೇನು?
ರೈತರು, ಬಡ ಕೂಲಿಕಾರರು, ಸಣ್ಣ ಸಣ್ಣ ಹಿಡುವಳಿದಾರರೆ ಹೆಚ್ಚಾಗಿರುವ ಕೃಷಿಯನೆ ನಂಬಿಬದುಕುವ ಉತ್ತರದ ಕರ್ನಾಟಕದ ಹಳ್ಳಿಗಲೆಲ್ಲ ನೆರೆ ಹಾವಳಿಗೆ ಸಿಲುಕಿ ಅವರ ' ಬದುಕುಮೂರಾಬಟ್ಟೆಯಾದಸಮಯದಲಿ'ಸರ್ಕಾರದ ಘಟಕಗಳು ಸಂತ್ರಸ್ತರ ನೆರವಿಗೆ ಪರಿಣಾಮಕಾರಿಯಾಗಿ ಸ್ಪಂಧಿಸದೆ ದಿನದೂಡುತ್ತ, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದುಭರವಸೆಗಳನ್ನ ನೀಡುತ್ತ, ಇಂದು ಬೀದಿ ಪಾಲಾದ ಜನರಿಗೆ ಪರಿಹಾರಗಳನ್ನು ಒದಗಿಸದೆ ಸಭೆನಡೆಸಿ, ಸಮೀಕ್ಷೆ ನಡೆಸಿ, ತಿರ್ಮಾನ ಕೈಗೊಂಡು ವರುಷಗಳು ಕಳೆದ ನಂತರ ಸಂತ್ರಸ್ತತರು ಕಳೆದುಕೊಂಡ ಆಸ್ತಿಯ ನಾಲ್ಕನೇ ಒಂದು ಭಾಗದಷ್ಟೋ ಅಥವಾ ಅವರಿಗೆ ತೋಚಿದಷ್ಟು ಪರಿಹಾರನೀಡಿದರೆ ಅದರಿಂದಾಗುವ ಒಳಿತಾದರು ಏನು?
ತಮ್ಮ ಮನೆ ಮಠ, ಆಸ್ತಿ, ಬೆಳೆ,ದಾಸ್ತಾನು ಎಲ್ಲವು ನೀರು ಪಾಲಾಗಿ ಬದುಕು ಕಳೆದು ಕೊಂಡಜನರ ಬದುಕು ಕಟ್ಟಿಕೊಡುವ ಹೊಣೆಯಾದರು ಯಾರದ್ದು? ಅವರವರ ನೋವಿಗೆ ಅವರವರೆ ಪಾಲುದಾರರು.ಯಾವುದೇ ಪಕ್ಷದ ಸರ್ಕಾರವಿರಲಿ, ಯಾವುದೇ ಸರ್ಕಾರ ಬರಲಿ, ಹೋಗಲಿ ಶ್ರೀ ಸಾಮಾನ್ಯನಬವಣೆ, ಜಂಜಾಟ, ನೋವುಗಳಿಗೆಎಂದಿಗೂ ಪರಿಹಾರ ಅಸಾಧ್ಯ. ಜನ ನಾವುಗಳು ಶಕ್ತರಾಗದಹೊರತು ಯಾರಿಂದಲೂ ಬದಲಾವಣೆ ಎಂಬುದು ಸಾಧ್ಯವಿಲ್ಲ ನಮ್ಮ ನಾಡಿನಲ್ಲಿ ಎಂಬುದುಸರ್ವಕಾಲಿಕ ಸತ್ಯ ಎಂಬುದು ಮತ್ತೆ ಮತ್ತೆ ಸಾಬೀತಾದ ಅಂಶ.
ಜನರ ನೋವಿಗೆ ಸ್ಪಂಧಿಸುವುದೇ ನನ್ನ ಮೊದಲ ಆಶಯ, ಗುರಿ ಎಂದು ಬಡಾಯಿ ಬಾರಿಸುವ ನಾಯಕರೆಲ್ಲ ಅವರಿವರ ಮೇಲೆ ಗೂಬೆ ಕೂರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ. ಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ವರಿಸಿದರೆ, ಸಚಿವರುಗಳುಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದರೆ, ಅಧಿಕಾರಿಗಳು ಸರ್ಕಾರದಿಂದ ಸಮರ್ಪಕವಾದ ನೆರವು ಬಂದಿಲ್ಲ ಎಂದು ಆರೋಪಿಸಿ ಒಬ್ಬರನ್ನು ಇನ್ನೊಬ್ಬರು ತೆಗಳುವವರೆ.ಯಾರ ಮಾತು ಸತ್ಯ ಯಾರ ಮಾತು ಸುಳ್ಳು ಎಂಬುದ ತಿಳಿಯದ ಸಾಮಾನ್ಯ ಮಾತ್ರ ಪ್ರತಿಬಾರಿಯೂ ತಾ ಮಾಡಿದ ಮತದಾನವನ್ನೇ ಶಪಿಸುತ್ತ ಸುಮ್ಮನಾಗುತ್ತಲೇ ಇದ್ದಾನೆ. ಇದು
ಅಧಿಕಾರದ ದುರ್ಬಳಕೆಯೋ,
ಕರ್ತವ್ಯದ ಲೋಪವೋ , ಎಂಬ ಗೊಂದಲದಲ್ಲಿ ನಾ ಇದ್ದೇನೆ.

ಲೇಖನ: ಸೃಜನ

7 comments:

ಜಲನಯನ said...

ಈಶ್ ನಿಮ್ಮ ಕಾಳಜಿ ಅರ್ಥವಾಗುತ್ತೆ...ಇಲ್ಲಿ ಅಧಿಕಾರದ ದುರ್ಬಳಕೆ ಕೆಲವೆಡೆ ಆದ್ರೆ, ಕೆಲವೆಡೆ ಉದಾಸೀನತೆ..ಮಾಡಿದ್ರೆ ಆಗುತ್ತೆ ಎನ್ನುವ ಭಾವ...ಅದರ ಜೊತೆಗೆ ಪ್ರಾಮಾಣಿಕತೆಯ ಮತ್ತು ಪೀಡಿತರ ಬಗ್ಗೆ ನಿಜ ಕಾಳಜಿಯ ಲೋಪ....ಚನ್ನಾಗಿ ವಿವರಿಸಿದ್ದೀರಿ....

ಸೀತಾರಾಮ. ಕೆ. / SITARAM.K said...

ಅಧಿಕಾರ ವಿಕೆ೦ದ್ರಿಕರಣವೆ೦ದು ಮಾಡಿದ ಎಲ್ಲಾ ಮ೦ಡಳ ಪ೦ಚಾಯತ, ಜಿಲ್ಲಾ ಪ೦ಚಾಯತ,ಇನ್ನು ಹಲವಾರು ಗೊ೦ದಲದ ಗೂಡುಗಳು ಯಾವ ನಿರ್ಧಿಷ್ಠ ಅಧಿಕಾರವಿಲ್ಲದ ಜವಾಬ್ದಾರಿ ಹಾಗೂ ನಿರ್ವಹಿಸುವ ಅಧಿಕಾರ ಕೆ೦ದ್ರಗಳಾಗಿ ಒಡೆದಿವೆ. ಇನ್ನೂ ಜನಸಾಮನ್ಯರ ಯಾವದೇ ಕೆಲಸ ಆಗಬೇಕಿದ್ದರೆ ಹಿ೦ದೆ ದೂರವಾದರೂ ಸಹಿತ (ತಾಲೂಕು ಅಥವಾ ಜಿಲ್ಲಾ ಕಛೇರಿ) ಒ೦ದೇ ಕಡೆ ಕೆಲಸ ಆಗುತ್ತಿತ್ತು. ಅದರೆ ಈಗ ವಿಕೇ೦ದ್ರಿಕರಣದ ಹೆಸರಲ್ಲಿ ಆಗಿರುವ ಮನೆಯಿ೦ದ ಹಿಡಿದು ರಾಜ್ಯ ಕೆ೦ದ್ರದ ವರೆಗಿನ ಹತ್ತು ಹಲವು ಆಫ಼ೀಸ್ ತಿರುಗಬೇಕು. ಒ೦ದು ಆಫ಼ೀಸ್ ಹೆಸರಲ್ಲಿ ಇನ್ನೊಬ್ಬರು, ಇನ್ನೊಬ್ಬರ ಆಫ಼ೀಸ ಹೆಸರಲ್ಲಿ ಮತ್ತೊಬ್ಬರು ಜನಸಾಮಾನ್ಯರನ್ನು ತಿರುಗಿಸಿ, ಮಜಾ ನೋಡುತ್ತಾ ಅನೀತಿಯ ಹೊಟ್ಟೆ ಹೆರೆದುಕೊಳ್ಳುತ್ತಾರೆ. ಹೀಗಾಗಿ ಒ೦ದು ಕೆಲಸ ಆಗಬೇಕಾದರೆ ಹಲವು ಕಛೇರಿ ತಿರುಗಬೇಕು, ಹಲವರನ್ನು ಸಲುಹಬೇಕು- ಇದರಿ೦ದ ತಿರುಗಾಟ ಹೆಚ್ಚು, ಖರ್ಚು ಹೆಚ್ಚು, ಸಮಯ ವ್ಯರ್ಥ, ಹೆಚ್ಚು ಜನರ ಮರ್ಜಿ ಕಾಯಬೇಕು. ಇಷ್ಟಾದರೂ ಕೆಲಸ ಅಗುತ್ತೆ ಅನ್ನೋ ಭರವಸೆ ಇಲ್ಲಾ. ಇದು ನಮ್ಮ ಅಧಿಕಾರ ವಿಕೇ೦ದ್ರಿಕರಣದ ವಿಡ೦ಬಣೆ.
ಇಶಕುಮಾರ-ರವರೇ ಈ ಸ೦ಧರ್ಹದಲ್ಲಿ ತಮ್ಮ ಲೇಖನ ಪ್ರಸ್ತುತ.

Shashi jois said...

ನಾನು ರಾಜಕೀಯ -ರಾಜಕಾರಣ ಅಂದ್ರೆ ೧ ಮೈಲಿ ದೂರ ಇರ್ತೇನೆ..ಆದರು ನಿಮ್ಮ ಲೇಖನ ಓದಿದೆ.ಎಲ್ಲರೂ ನುಣುಚಿಕೊಳ್ಳುವವರೇ.ನಿಮ್ಮ ಕಾಳಜಿ ಅರ್ಥವಾಯಿತು..ಆದರೆ ಎಲ್ಲರೂ ಒಟ್ಟು ಗೂಡಿದರೆ ಮಾತ್ರ ಸಾಧ್ಯಇದು ಅಧಿಕಾರದ (ಅಧಿಕಾರಿಯ)ಮತ್ತು ಕರ್ತವ್ಯ ಲೋಪವು ಹೌದು ಅನ್ನುದು ನನ್ನ ಅನಿಸಿಕೆ.

Anonymous said...

ಇಂದಿನ ಪ್ರಜಪ್ರಬುತ್ವದ ಬಗ್ಗೆ ಹೇಳುತ್ತೆ ಈ ಲೇಖನ, ಪ್ರಜೆಗಳಿಂದ ಆರಿಸ್ಲ್ಪತ್ತವರು ಪ್ರಜೆಗಳಿಗೆ ಎಷ್ಟರ ಮಟ್ಟಿಗೆ ಒಳ್ಳೆಯದು ಮಾಡುತ್ತಾರೆ ಮತ್ತು ಅವರ ಕಷ್ಟಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಅಂತ ಹೇಳುತ್ತದೆ. ಇಲ್ಲಿ ನೆರೆಹಾವಲಿಯಲ್ಲಿ ಜನ ತಮ್ಮ, ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡು, ನೊಂದಿದ್ದರೆ ನಮ್ಮನ್ನಾಳುವ ದೊರೆಗಳು ಅಂದ್ರೆ ನಾವೇ ಆರಿಸಿ ತಂದ ಪ್ರಭುಗಳ, ತಮ್ಮ ಖಾಸಗಿ ಬದುಕಿನಬಗ್ಗೆ ಹೈದರಾಬಾದ್ನಲ್ಲಿ ಹೋಟೆಲ್ ರಾಜಕಾರಣ ಮಾಡಿಕೊಂಡು ಕಳೆದರು, ಇವರಿಗೆ ನೆರೆ ಸಂತ್ರಸ್ಥ ಜನರ ನೋವು ತಿಳಿಯಲೇ ಇಲ್ಲ, ಇನ್ನಾದರು ಈ ಜನರು ಮತದಾನವನ್ನು ಬಹಿಷ್ಕರಿಸಬೇಕು ಅಂತ ನನ್ನ ಅನಿಸಿಕೆ. ಯಾಕೆಂದರೆ, ನಾವೇ ನಮ್ಮ ಮತದಾನದ ಹಕ್ಕನ್ನು ಚಲಾಯಿಸಿ ತಂದ ಧಣಿಗಳು ಹೇಗಿರುತ್ತಾರೆ ಅಂತ ಶ್ರೀಸಾಮಾನ್ಯರಿಗೆ ತಿಲಿದಿರೋಲ್ಲ, ಇದರಿಂದ ಬರಿ ನಷ್ಟವೇ ವಿನಃ ಒಳಿತಂತು ಇಲ್ಲ. ನನ್ನ ಅನಿಸಿಕೆ ಏನಂದ್ರೆ ನಮ್ಮ ದೇಶದಲ್ಲಿ ಈ ಮತದಾನವನ್ನು ಬಹಿಷ್ಕರಿಸಬೇಕು. ಇಲ್ಲಿ ಪ್ರಜೆಗಳೇ ಸರ್ವ ಅಧಿಕಾರಿಗಲಾಗಬೇಕು. ಪ್ರಜೆಗಳ ಸೇವೆಯೇ ನಮ್ಮ ಸೇವೆ ಎಂದು ಪುಟಗಳಷ್ಟು ಬಾಶನಬಿಗಿಯೋರ್ಗೆ ಪ್ರಜೆಗಳು ಮನೆಹಾಕಬಾರದು, ಅವರು ತೋರಿಸುವ ಆಮಿಷಗಳಿಗೆ ಬಲಿಯಾಗಬಾರದು. ಇಲ್ಲಿ ಎಷ್ಟು ಜನರಿಗೆ ನೆರೆ ಸಂತ್ರಸ್ಥರ ಪರಿಹಾರ ಸಿಕ್ಕಿದೆ ಗೊತ್ತಿಲ್ಲ? ಎಷ್ಟು ಜನ ಅಧಿಕಾರಿಗಳು ಪ್ರಾಮಾಣಿಕವಾಗಿ ಅವರಿಗೆ ಸೇರಬೇಕಿದ್ದ ಪರಿಹಾರ ಕೊಡಿಸಿದ್ದಾರೆ ಅಲ್ವ? ಅದು ಸಪಾಥ್ರರಿಗೆ ಸೇರಿದೆಯೇ ಅದರಲ್ಲೂ ಮೋಸ ನಡೆದಿದೆ. ಇಂದಿನ ಪ್ರಜಾಪ್ರಭುತ್ವದ ಸ್ಥಿತಿ ಗತಿ ನೋಡಿದ್ರೆ ಮತದಾನ ಮಾಡಬೇಡಿ ಅಂತ ಹೇಳೋಣ ಅನ್ನಿಸುತ್ತೆ.

Anonymous said...
This comment has been removed by the author.
udaya said...

ಇದು ಪ್ರಜಾಪ್ರಭುತ್ವದ ಸೋಲು.. ಮೊದಲು ನಾವು ಸರಿ ಆಗಬೇಕು.. ನಾವು ಸರಿ ಆಗದೆ ವ್ಯವಸ್ಥೆನ ಸರಿ ಮಾಡಲು ಆಗುವುದಿಲ್ಲ..
ಒಳ್ಳೆಯ ಕಾಳಜಿಯುಕ್ತ ಬರಹ..

shivu.k said...

ನಿಮ್ಮ ಕಾಳಜಿ ನಮ್ಮ ರಾಜಕಾರಣಿಗಳಿಗಿರುವುದಿಲ್ಲವಾದ್ದರಿಂದ. ಇಷ್ಟೆಲ್ಲಾ ಲೋಪಗಳು ಉಂಟಾಗುತ್ತವೆ. ನನಗೆ ರಾಜಕೀಯವೆಂದರೆ ದೂರ. ಆದ್ರೂ ನಿಮ್ಮ ಬರಹವನ್ನು ಇಷ್ಟಪಡುತ್ತೇನೆ.