ಮನದ ಯೋಚನ ಲಹರಿಯೇ ವಿಚಿತ್ರ. ಅಂತಹ ವಿಚಿತ್ರಕ್ಕೆ ಸಾಕ್ಷಿ ಈ ಚುಟುಕ. ಚುಟುಕವನ್ನ ಓದಿ, ಹೊಗಳಿಕೆ,ತೆಗಳಿಕೆಗಳನ್ನ ಕಾಮೆಂಟ್ ಮಾಡಿ ನೇರವಾಗಿ ನನ್ನನ್ನು ದೂಷಿಸಬೇಡಿ ಇದು ನನ್ನ ತಪ್ಪಲ್ಲ ನನ್ನ ಮನದ ತಪ್ಪು.
ಅಪಶಕುನ!!
ಎದುರು ಮನೆಯ
ಬೆಳ್ಳನೆಯ ಹುಡುಗಿ
ತೊನೆದಾಡುತ ಗೇಟಿನ
ಬಳಿ ಬರಲು
ಎದುರಿನ ಎಲೆಕ್ಟ್ರಿಕ್ ತಂತಿಯ
ಮೇಲಿದ್ದ ಕಾಗೆಗೆ
ಅಪಶಕುನದ ಭಾಸವಾಯ್ತು.
14 comments:
ಈಶ್, ಒಳ್ಳೆಯ ಪ್ರಯತ್ನ, ಕಾಗೆ ನಮಗೆ ಅಪಶಕುನ
ಅದಕೆ ನಾವೇ ಅಪಶಕುನ.....ನಿಜ..ನಾವೆಣಿಸಿದಂತೆ ಅವೂ ತಿಳಿಯಬೇಕೆಂದೇನಿಲ್ಲ...
ಈಶಕುಮಾರ್
ನಿಮ್ಮ ಮನದ ತಪ್ಪು ಅಂತ ನಿಮಗೆ ಅನ್ನಿಸಿದರೂ ಇದು ನಮಗೆ ಒಪ್ಪು..!
ಚೆನ್ನಾಗಿದೆ.. ಯೋಚನಾ ಲಹರಿ ಮುಂದುವರೆಯಲಿ... ಸಹ ಯಾತ್ರಿಗಳಾಗಿ ನಾವಿದೀವಿ.... :)
ಈಶುಕುಮಾರ್..
ಬೆಳ್ಳಗೆ
ತೆಳ್ಳಗೆ
ಬಳುಕುವ
ಹುಡುಗಿ ನೋಡುವಾಗ...
ಏನೇ ಕಂಡರೂ ಅಪಶಕುನದ
ಭಾವ ಸಹಜ...!
ಸುಂದರ ಸಾಲುಗಳಿಗೆ ಅಭಿನಂದನೆಗಳು...
:) sadhya kaage apashakuna parihaarake pikke haakalilla
ಪಾಪ ಕಾಗೆ, ತಲೆಗೆ ಸ್ನಾನ ಮಾಡ್ತೇನೊ ಅನ್ಸುತ್ತೆ.
ಬೆಳ್ಳನೆ ಹುಡುಗಿಯ ಬಣ್ಣ ನೋಡಿ ಕಾಗೆಗೆ ತನ್ನ ಬಣ್ಣದ ಅರಿವಾಗಿರಬೇಕು :)
ಪರವಾಗಿಲ್ಲ ಕಾಗೆ ಬಲು ಕಿಲಾಡಿನೇ
Ha ha ha :)
ಹುಡುಗಿಯ ಮೇಲೇಕೆ "ಕಾಕ" ದೃಷ್ಠಿ?
Tumba chenenagide sir
ತುಂಬ ಹಿಂದೆಯೇ ಓದಿದ ನೆನಪು....
ಹಾಯ್
ನಿಮ್ಮ ಚುಟುಕು
ಸಹಜ ಸುಂದರವಾಗಿದೆ
ಒಳ್ಳೆಯ ಚುಟುಕು ಈಶ್
ತುಂಬಾ ಚೆನ್ನಾಗಿದೆ ಸರ್
Post a Comment