Wednesday, December 16, 2009

ಒಂದು-ನೂರರ....ಅಂತರ

ಒಂದು-ನೂರರ....ಅಂತರ


ಯಾಕೆಂಬುದೆ ತಿಳಿಯದ ಹಾಗೇ
ಎಚ್ಚರವೆಂಬುದು ನೆಪ ಮಾತ್ರ
ಮತ್ತೆ ಮತ್ತೆ ಮೈ ಮರೆವು
ಸಂಜೆ ಸೂರ್ಯನೊಡನೆ ಕಣ್ಣಾಮುಚ್ಚಾಲೆಯಾಡಲು
ಕಪ್ಪನೆ ಮೋಡ ಬುವಿಯಲೆಲ್ಲ
ಕೆಂಬಣ್ಣದ ತಂಪು,ಮನದಲೋ ಮಂಪರು.

ನೀ ಮೋಡದಂತೆ ಆವರಿಸಿ
ಮಳೆಯಂತೆ ಜಿನುಗಿ ಮರೆಯಾಗಿ
ಮರೆಯಲು, ನನ್ನ ಬದುಕು
ಒಂಟೆತ್ತಿನ ಗಾಡಿಯಾ ಹಾಗೇ
ಸಾಗುತ್ತಲೇ ಇದೆ ಅನವರತ.
ಅದೇನೋ ವಿಪರ್ಯಾಸ! ಅಣಕಿಸಿದೆ
ಹೊಟ್ಟೆಯ ಜೀತದ ಪ್ರತಿದಿನದ ಜೂಟಾಟಿಕೆ.
ಸೋಲು ಸಾವಲ್ಲ! ಜೀವನವೇರಿದ
ಘಟ್ಟವ ಸೂಚಿಸುವ ಮೈಲಿಗಲ್ಲು.

ನಾ ಮರೆಯಲೊಲ್ಲದ ಜೀವಮಾನದ
ಸೋಲು ನೀ, ಅಂದು ದಾರಿ ತಪ್ಪಿದವಗೆ
ಹಾದಿ ತೋರಿದ ಸೂಚನಫಲಕ.
ಸಂಬಂಧಗೂಡದ ಆ ಕಹಿ ಅನುಭವದ
ಶೂನ್ಯಭಾವಕೆ ಕಿಚ್ಚನ್ನ ಹಚ್ಚಿದಲ್ಲವೇ
ನಿನ್ನ ಅಗಲಿಕೆ.ಆ ವಿರಹದ
ಬೇಗೆಯಲಿ ಚಿಗುರೊಡೆದ ನನ್ನ
ಜೀವನ ಸೂಚ್ಯಂಕದ ಮೊದಲಂಕಿ ನೀನು.


ನೀ ಅಗಲಿ ದೂರಾದರೇನು?
ಬದುಕು ಎಲ್ಲಿಂದ ಪ್ರಾರಂಭವಾದರೇನು?
ನನ್ನ ನಿನ್ನ ನಡುವಿರುವುದು
ಒಂದು-ನೂರರ ನಡುವಿನ ಅಂತರ.

ಎಚ್.ಎನ್.ಈಶಕುಮಾರ್

9 comments:

Unknown said...

Hie Esha...

Kavite tumba chennagide...

AntharangadaMaathugalu said...

ನಮಸ್ಕಾರ ಈಶಕುಮಾರ್ ಸಾರ್....
ನಾ ನಿಮ್ಮ ಬ್ಲಾಗಿಗೆ ’ದಿಲೀಪ್ ಹೆಗಡೆ’ಯವರ ’ಹನಿಹನಿ’ ಮೂಲಕ ಬಂದೆ... ನಿಮ್ಮ ಕವನ ಇಷ್ಟವಾಯಿತು, ಚೆನ್ನಾಗಿದೆ.........ಅದರಲ್ಲೂ ಕೊನೆಯ ನಾಲಕ್ಕು ಸಾಲುಗಳು ಎಷ್ಟು ವಾಸ್ತವಿಕ ಅಲ್ವಾ?

udaya said...

ಸೋಲು ಸಾವಲ್ಲ! ಜೀವನವೇರಿದ
ಘಟ್ಟವ ಸೂಚಿಸುವ ಮೈಲಿಗಲ್ಲು.

ಒಳ್ಳೆಯ ಸಾಲುಗಳು... ಚೆನ್ನಾಗಿದೆ ಕವನ.

Anonymous said...

ನೀ ಅಗಲಿ ದೂರಾದರೇನು?
ಬದುಕು ಎಲ್ಲಿಂದ ಪ್ರಾರಂಭವಾದರೇನು?
ನನ್ನ ನಿನ್ನ ನಡುವಿರುವುದು
ಒಂದು-ನೂರರ ನಡುವಿನ ಅಂತರ.

Nee agali dooradarenu? baduku ellinda Arambavaadarenu? nanna ninna naduviruvudu 1 - 100ra anthara eshtu samanjasa ee saalugalu idannu odidare kanneeru barutte ashtu bhavapoorvakavaagide ee kavana oduvaaga naave adaralli leenavaada haage elligo karedoyyutte bahala chennagide

Unknown said...

bahalla olleya kavite.....nima pryatna sada hegye munduvareyalle haggu nama manasige hitavanu untu madalle.....

ಸೀತಾರಾಮ. ಕೆ. / SITARAM.K said...

nice

Shashi jois said...

ಕವನ ಚೆನ್ನಾಗಿತ್ತು.ಕೊನೆಯ ಸಾಲು ಎಷ್ಟು ಸರಿಯಾಗಿ ಬರೆದಿದ್ದೀರಿ.ಆದರೆ ಅಂತರ ಹೆಚ್ಚಾಯಿತೇನೋ ಆಲ್ವಾ??

Unknown said...

nimma kavana adbutavaagi moodi bandide sir...adbutavaada kavan kavana nodi tumba santoshavayitu...shabdagalu arth garbitavagive...prakrutiya naduve milana galu chennagide......
dhanyvavaada.... HEMANTH AVARA AKKARE MAATUGALU..

Unknown said...

Thumba arthapurna vaagidea.