Saturday, December 26, 2009

ಬಿಡಿ ಬಿಡಿ ಕವಿತೆಗಳು















ನನ್ನ ಪದಗಳಿಗೆ ಮಿಡಿವ
ನಿನ್ನ ಮನದ ಭಾವಗಳೇ
ನನ್ನ ಕವಿತೆಯ ಜೀವಾಳ
ಕವನದ ಸೆಲೆಯೇ ನೀ

ಆಗಿರುವಾಗ ನೀ ಇಲ್ಲದೆ

ಪದಗಳಿಗಾವ ಜೀವ ಗೆಳತಿ..
*********************************
ಅದೆಲ್ಲೋ ಬಾಳೇ ತೋಟದ
ಹಸಿರ ನಡುವೆ ಬಳಕುತ

ನಿಂತ ಚೆಲುವೆ ನೀ
ಕರೆಯಲು ಕಾಡುವ ಕಂಗಳ
ಸನ್ನೆಯಲೇ ಮರುಳಾದೆ
ನಾ ನಿಂತ ನಿಲುವಲೇ...

**************************************
ನಿನ್ನ ಮೌನ ಮಾತಾದಾಗ
ಮಲ್ಲಿಗೆ ಅರಳಿತು ಸಂಜೆಯಲಿ..

ನಿನ್ನ ಕನಸು ನನಸಾದಾಗ
ನನ್ನ ಬದುಕು ಹಿತವೆನಿಸಿತು
ಮುಸಂಜೆಯ ಮಬ್ಬಿನಲಿ.....

******************************************
ನಿ
ನ್ನೊಂದಿಗೆ ದಿನರಾತ್ರಿ ಕಳೆವ
ಕನಸು ನನಸಾದ ದಿನದ
ನೆನಪ ಭಾರ ಹೊತ್ತು ಹೊತ್ತು
ದಿನದೂಡುತ್ತಿರುವ ವಿರಹಿಯ
ಸವಿ ನೋವ ನಿವೆದಿಸುತಲೇ
ಹುಣ್ಣಿಮೆಯ ಚಂದಿರ ಒಮ್ಮೆಗೆ
ಮರೆಯಾದ ಮೋಡದ ಮರೆಯಲಿ..

7 comments:

ಜಲನಯನ said...

ಈಶ್, ಗೆಳತಿಯಬಗೆಗಿನ ನಿಮ್ಮ ಭಾವಮಂಥನದ ಈ ಸಾಲುಗಳು ಹಿಡಿಸಿದವು....
ನನ್ನ ಕವಿತೆಯ ಜೀವಾಳ
ಕವನದ ಸೆಲೆಯೇ ನೀ
ಆಗಿರುವಾಗ ನೀ ಇಲ್ಲದೆ
ಪದಗಳಿಗಾವ ಜೀವ ಗೆಳತಿ..
ಅಂದಹಾಗೆ...ಅಂತಹ ಗೆಲತಿ ಸಿಕ್ಕಳೇ..? ಪ್ರೈವೇಟಾಗೇ ಹೇಳಿ ನನ್ನ ಮೇಲಿಗೆ ಕಳಿಸಿ...ಹಹಹ

Shashi jois said...

ನಿಮ್ಮ ಪದಗಳಿಗೆ ಮಿಡಿವ
ನಿಮ್ಮ ಮನದ ಭಾವನೆಯೇ
ನಿಮ್ಮ ಕವಿತೆಯ ಜೀವಾಳ .
ಕವನದ ಸೆಲೆಯ,ಸೆಳೆತದ
ನಿಮ್ಮ ಜೀವದ ಗೆಳತಿ
"ಈಶ್ವರಿ "ನಿಮ್ಮ ಜೀವಾಳ
ಬೇಗ ಆಗಲಿ ಅಂತ ನನ್ನ
ಹಾರೈಕೆ....

shivu.k said...

ಈಶಕುಮಾರ್,

ನೀವು ನೀವು ಬರೆಯುವ ಪದ್ಯಗಳು ತುಂಬಾ ಚೆನ್ನಾಗಿರುತ್ತವೆ. ಈಗ ಬಿಡಿಬಿಡಿಯಾಗಿ ಬರೆದಿರುವುದು ಕೂಡ ಇಷ್ಟವಾಗುತ್ತೆ...ಮುಂದುವರಿಸಿ..

ಸೀತಾರಾಮ. ಕೆ. / SITARAM.K said...

ಬಿಡಿ ಬಿಡಿ ಶುಟುಕುಗಳು ಗಡದ್ದಾಗಿವೇ ಈಶಕುಮಾರ.

Unknown said...

I would like to thanks for uploading such heart touching short peoms .... really very meaningful...

ಚರಿತಾ said...

ನಮಸ್ತೆ,..

ನಿಮ್ಮ ಕವನಗಳು ನಿಜಕ್ಕೂ ಚೇತೋಹಾರಿ.
ಇವುಗಳಲ್ಲಿನ ಆರ್ದ್ರತೆ ಆ ನಿಮ್ಮ ಭಾವದ ಗೆಳತಿಯನ್ನು ಆದಷ್ಟು ಬೇಗ ತಲುಪಲಿ ಎಂಬುದೇ ನಮ್ಮೆಲ್ಲರ ಹಾರೈಕೆ..:-)

Anonymous said...

Nimma ee bidi bidi kavithegalu thumbaane bhaava poornavaagide eesha, idaralli preetiya bagegina kaathurathe kaanutte, aa nireekshe hege adarallu eno ondu bhava chennagide kavanagalu