ಕತ್ತಲ ಕೂಪವೇ ಮೈದಾಳಿ ನಿಂತ
ಗುಡಿಸಲು ಒಳಗೆ ಮಿಸುಕಾಡುವ
ಬುಡ್ಡಿ ದೀಪದ ಸಾವಿನಂಚಿನ ಬೆಳಕು;
ಹಸಿದು ಹಾಲಿಗಾಗಿ ಅಳುತ ಚೀರಾಡಿ
ಸೋತು ಮಲಗಿದ ಕಂದನ ದಿಟ್ಟಿಸುವ
ತಾಯಿಯೋಡಲು ಎಣ್ಣೆ ಬರಿದಾದ
ಹಣತೆಯ ಹಾಗೆ, ಕರುಳ ಬಳ್ಳಿಯ
ಕಳ್ಳು ತುಂಬಿಸದ ಜೋತುಬಿದ್ದ
ತಾಯ ಮೊಲೆಗಳು ತನ್ನ ಕುಡಿಯ
ದಾರುಣ ಬದುಕಿನ ಕರಾಳ
ಮುನ್ನುಡಿಯ ಸಂಕೇತಗಳು.ಜೋಪಡಿಯ ಅಂಗುಲಂಗುಲ ಆವರಿಸಿದ
ಕತ್ತಲು ಕಂಗಳಲಿ ಶಾಶ್ವತವಾಗಿ
ಸಮಾಧಿಯಾಗಲು ದಾರಿದ್ರ್ಯದ ಬೇಗೆಯಲಿ
ಬಳಲಿದ ಜೀವಗಳ ಹಸಿವ ನೀಗದ
ಬಡತನದ ಕಾರ್ಮೊಡವ ಸೀಳಿ
ಬಾಳಿಗೆ ಬೆಳಕಾಗದ ಬೆಳಕು ನಮಗಾಗಿ
ಈ ಜಗದೀ ಹರಿಯದೇ ದೂರಾದರೇ
ಪ್ರತಿದಿನದ ಬೈಗೂ ಅಣಕಿಸಿ ಅಸಹ್ಯವಾಗಿಹ
ಜೀತದ ಜೀಕಾಟದಿಂದ ತುಸುವಾದರೂ
ಬಿಡುವು.ಭರವಸೆ ಮೂಡದ ಬಾಡಿದ ಕಂಗಳ
ಎದುರಿನ ಜಾಲಿಮರದ ತುಂಬೆಲ್ಲ
ಹರಡಿದ ಸಾವಿರ ಸಾವಿರ ಮುಳ್ಳುಗಳ
ವಾಸ್ತವ ಬೆತ್ತಲೆ ದರುಶನದ ನಡುವೆ
ಚಿಗುರೊಡೆಯುತಿಹ ಎರಡು ಹಸಿರೆಲೆ,
ಹಸಿದು ನಿದ್ದೆಯಲಿ ಜಗವ ಮರೆತ
ಕಂದನ ಮೊಗದಲಿ ಬಿಮ್ಮಗೆ
ಅರಳಿದ ಮಂದಹಾಸ, ನಿದ್ದೆಗೆ
ಜಾರುತಿಹ ತಾಯ ಕಂಗಳಲು
ಮಿರುಗುತಿಹ ಕನಸಿನ ನಕ್ಷತ್ರ ಲೋಕ.ಎಚ್.ಎನ್.ಈಶಕುಮಾರ್.
Wednesday, April 7, 2010
ಜಾಲಿಯ ಮುಳ್ಳಿನ ನಡುವೆ...
Subscribe to:
Post Comments (Atom)
8 comments:
tumba chennagide sir :)
nice kavana
chennagide ri...........
tumba super
title ge takkante kavana
There is no better issue to speak other than love affairs between boy and girl.Likewise there is no better issue to write on poverty between our people and country...
ಕೊನೆಯ ಎರಡು ಚರಣಗಳು ಎಲ್ಲಾ ವಾಸ್ತವಿಕತೆಯನ್ನೂ ಹೇಳಿಬಿಡುವಂತಿದೆ.....ಇಷ್ಟವಾಯಿತು...... ಈ ದಿನದ ಬದುಕು ಹೇಗಾದರೂ....ಭರವಸೆಯ ಮಂದಹಾಸ, ನಕ್ಷತ್ರ ಲೋಕದ ಕನಸು, ನಾಳೆಯನ್ನು ಹೊಸ ಆಸೆಯಿಂದ ಬರಮಾಡಿಕೊಳ್ಳಲು ಕಾಯುತ್ತಿದೆ....
ಒಳ್ಳೆಯಾ ಸಾಲುಗಳು.. Keep going..
ರೀ ಎಚ್.ಎನ್. ಈಶಕುಮಾರ್ ..,
ಸೊಗಸಾಗಿದೆ..
Post a Comment