Monday, December 13, 2010

ಬರೆಯಲಾಗದ ಖಾಲಿ ಪುಟ..


ಭಾಷೆ ಅರಿವವರು
ನೂರಾರು ಮಂದಿ
ನನ್ನ ಭಾವವ ಅರಿವವಳು
ನೀ ಒಬ್ಬಳೇ
ಸಹೃದಯಿ...

ಬರೆದ ಸಾಲು ಸಾಲು
ಪುಟವು ಅನುಭವದ
ಸರಮಾಲೆ.

ನಾ ಬರೆಯಲಾಗದೆ
ಮನದಲಿ ಹಾಗೇ
ಉಳಿಸಿದ ತಿಳಿ
ಭಾವವು ನಿನ್ನ
ಪ್ರೇಮ ಅನುಭಾವದ
ನವಿರುತನ ಇದೆ
ಹಾಗೇ ಮಡಿಸಿಟ್ಟ
ಖಾಲಿ ಹಾಳೆಯಂತೆ.

5 comments:

Dr.D.T.Krishna Murthy. said...

ಸುಂದರ ಕವನ.ನನ್ನ ಬ್ಲಾಗಿಗೂ ಬನ್ನಿ.

AntharangadaMaathugalu said...

ಈಶ್..
ಪ್ರೇಮ ಅನುಭಾವದ ನವಿರುತನ... ಮಡಿಸಿಟ್ಟ ಖಾಲಿ ಹಾಳೆ... ತುಂಬಾ ಇಷ್ಟವಾಯಿತು. ಅನುಭಾವ ಪದ ಪ್ರಯೋಗ ತುಂಬಾ ಅಪರೂಪವಾಗಿ ಹೋಗಿದೆ..

ಶ್ಯಾಮಲ

shivu.k said...

ಸೊಗಸಾದ ಕವನವನ್ನು ಬರೆದಿದ್ದೀರಿ...ಮಡಿಸಿಟ್ಟ ಖಾಲಿಹಾಳೆ..ಪದ ಇಷ್ಟವಾಯಿತು.

Nandini (Priya) said...

thumba chennagide preethiya anubhava chennage ede

Anonymous said...

nice
-sitaram