ಹಂತವಾಗಿ ವಿಂಗಡಿಸಿ ಆಡಳಿತ ಯಂತ್ರವನು ಚುರುಕುಗೊಳಿಸಿ ಬೇಗ ಬೇಗ ಜನರ ಕಷ್ಟಗಳಿಗೆಸ್ಪಂಧಿಸುವ ಧೈಯ ನಮ್ಮ ಸರ್ಕಾರಗಳದ್ದು.
ಜನರ ಕುಂದು-ಕೊರತೆಗಳ ನಿವಾರಿಸುವ, ಅವರ ಕಷ್ಟ-ನಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಸರ್ಕಾರ ತನ್ನ ಪುಟ್ಟ ಪುಟ್ಟ ಘಟಕಗಳಂತೆ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತ್,ತಾಲ್ಲೂಕು ಕಛೇರಿ, ಜಿಲ್ಲಾ ಕಛೇರಿಗಳನ್ನ ಸ್ಥಾಪಿಸಿದೆ. ಈ ಘಟಕಗಳ ಮೂಲಕ ಜನರ ಕೆಲಸ ನಿರ್ವಹಿಸುತ್ತಿರುವ ಸರ್ಕಾರವಿಂದು ನಿಜಕ್ಕೂ ತಮ್ಮ ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ, ಜನರ ಹಿತವನ್ನು ಕಾಯುವ ಕೆಲಸ ,ಮಾಡುತ್ತಿವೆಯ? ನಮ್ಮ ದೇಶದಲಿಂದು ಅಧಿಕಾರದ ವಿಕೇಂದ್ರಿಕರಣದ ಸಣ್ಣ ಸಣ್ಣ ಘಟಕಗಳು ಜನರ ಕೆಲಸಗಳನು ಮಾಡುತ್ತಿವೆಯ?ಅವುಗಳಿಗೆಲ್ಲ ಅಂತ ಅಧಿಕಾರ ಇದೆಯಾ? ಇಲ್ಲವ? ಯಾವ ಯಾವ ಸಮಯದಲಿ ಯಾವ ಯಾವ ಘಟಕಗಳುಹೇಗೆ ಕೆಲಸ ಕಾರ್ಯಗಳನು ಹಮ್ಮಿಕೊಳ್ಳಬೇಕು, ಏನೇನೂ ಕ್ರಮಗಳನ್ನು ಅನುಸರಿಸಬೇಕುಎಂಬುದು ನಿರ್ದ್ರಿಷ್ಟವಾಗಿ ಇದೆಯಾ? ಇದ್ದರೆ ಅವಗಡಗಳನ್ನು ನಿಭಾಯಿಸುವಲ್ಲಿ ಪ್ರತಿಭಾರಿಯೂ ನಾವೇಕೆ ಸೋಲುತ್ತೇವೆ. ನೋವಿನಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲಲು ನಮ್ಮ ಸರ್ಕಾರಗಳಿಗೆಕೆ ಸಾಧ್ಯವಾಗುವುದಿಲ್ಲ? ಅದು ಅಷ್ಟೆಲ್ಲ ಸರ್ಕಾರದ ಘಟಕಗಳಿದ್ದುಎಂಬುದೇ ನನ್ನ ಪ್ರಶ್ನೆ.
ಇಂದು ಗ್ರಾಮ ಮಟ್ಟದಿಂದ ಹಿಡಿದು ಶಾಸಕರವರೆಗೆ ಜನರ ಪ್ರತಿನಿಧಿಸುವ ಜನಪ್ರತಿನಿಧಿಗಳು,ಗ್ರಾಮಲೆಕ್ಕಿಗರು,ದಂಡಾಧಿಕಾರಿಗಳು,ಜಿಲ್ಲಾಧಿಕಾರಿಗಳು,ಸಚಿವರು ಹೀಗೆ ಆಯಾ ಹಂತವನ್ನು ಪ್ರತಿನಿಧಿಸುವ ನಾಯಕರು ಸರ್ಕಾರಿ ಅಧಿಕಾರಿಗಳು, ನೌಕರರು ಇರುವ ಸುಸಜ್ಜಿತವಾದ ವ್ಯವಸ್ಥೆ ಮಾಡುವುದಾದರೂ ಏನನ್ನ. ಅಧಿಕಾರದ ದುರ್ಬಳಕೆ ಆಗದಿರಲಿ,ಒಂದೇ ಕಡೆ ಕೇಂದ್ರಿತವಾಗದಿರಲಿ ಎಂದು ವಿಘಟನೆ ಗೊಳಿಸಿದ ಆಡಳಿತ ಯಂತ್ರ ಸರಿಯಾಗಿಸಮಯೋಚಿತ ಕಾರ್ಯಗಳನು ನಿರ್ವಹಿಸದೆ ಇದ್ದಲ್ಲಿ ಅವುಗಳಿದ್ದು ಲಾಭವೇನು?
ರೈತರು, ಬಡ ಕೂಲಿಕಾರರು, ಸಣ್ಣ ಸಣ್ಣ ಹಿಡುವಳಿದಾರರೆ ಹೆಚ್ಚಾಗಿರುವ ಕೃಷಿಯನೆ ನಂಬಿಬದುಕುವ ಉತ್ತರದ ಕರ್ನಾಟಕದ ಹಳ್ಳಿಗಲೆಲ್ಲ ನೆರೆ ಹಾವಳಿಗೆ ಸಿಲುಕಿ ಅವರ ' ಬದುಕುಮೂರಾಬಟ್ಟೆಯಾದಸಮಯದಲಿ'ಸರ್ಕಾರದ ಘಟಕಗಳು ಸಂತ್ರಸ್ತರ ನೆರವಿಗೆ ಪರಿಣಾಮಕಾರಿಯಾಗಿ ಸ್ಪಂಧಿಸದೆ ದಿನದೂಡುತ್ತ, ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದುಭರವಸೆಗಳನ್ನ ನೀಡುತ್ತ, ಇಂದು ಬೀದಿ ಪಾಲಾದ ಜನರಿಗೆ ಪರಿಹಾರಗಳನ್ನು ಒದಗಿಸದೆ ಸಭೆನಡೆಸಿ, ಸಮೀಕ್ಷೆ ನಡೆಸಿ, ತಿರ್ಮಾನ ಕೈಗೊಂಡು ವರುಷಗಳು ಕಳೆದ ನಂತರ ಸಂತ್ರಸ್ತತರು ಕಳೆದುಕೊಂಡ ಆಸ್ತಿಯ ನಾಲ್ಕನೇ ಒಂದು ಭಾಗದಷ್ಟೋ ಅಥವಾ ಅವರಿಗೆ ತೋಚಿದಷ್ಟು ಪರಿಹಾರನೀಡಿದರೆ ಅದರಿಂದಾಗುವ ಒಳಿತಾದರು ಏನು?
ತಮ್ಮ ಮನೆ ಮಠ, ಆಸ್ತಿ, ಬೆಳೆ,ದಾಸ್ತಾನು ಎಲ್ಲವು ನೀರು ಪಾಲಾಗಿ ಬದುಕು ಕಳೆದು ಕೊಂಡಜನರ ಬದುಕು ಕಟ್ಟಿಕೊಡುವ ಹೊಣೆಯಾದರು ಯಾರದ್ದು? ಅವರವರ ನೋವಿಗೆ ಅವರವರೆ ಪಾಲುದಾರರು.ಯಾವುದೇ ಪಕ್ಷದ ಸರ್ಕಾರವಿರಲಿ, ಯಾವುದೇ ಸರ್ಕಾರ ಬರಲಿ, ಹೋಗಲಿ ಶ್ರೀ ಸಾಮಾನ್ಯನಬವಣೆ, ಜಂಜಾಟ, ನೋವುಗಳಿಗೆಎಂದಿಗೂ ಪರಿಹಾರ ಅಸಾಧ್ಯ. ಜನ ನಾವುಗಳು ಶಕ್ತರಾಗದಹೊರತು ಯಾರಿಂದಲೂ ಬದಲಾವಣೆ ಎಂಬುದು ಸಾಧ್ಯವಿಲ್ಲ ನಮ್ಮ ನಾಡಿನಲ್ಲಿ ಎಂಬುದುಸರ್ವಕಾಲಿಕ ಸತ್ಯ ಎಂಬುದು ಮತ್ತೆ ಮತ್ತೆ ಸಾಬೀತಾದ ಅಂಶ.
ಜನರ ನೋವಿಗೆ ಸ್ಪಂಧಿಸುವುದೇ ನನ್ನ ಮೊದಲ ಆಶಯ, ಗುರಿ ಎಂದು ಬಡಾಯಿ ಬಾರಿಸುವ ನಾಯಕರೆಲ್ಲ ಅವರಿವರ ಮೇಲೆ ಗೂಬೆ ಕೂರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೇ. ಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಆರೋಪ ವರಿಸಿದರೆ, ಸಚಿವರುಗಳುಅಧಿಕಾರಿಗಳು ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂದರೆ, ಅಧಿಕಾರಿಗಳು ಸರ್ಕಾರದಿಂದ ಸಮರ್ಪಕವಾದ ನೆರವು ಬಂದಿಲ್ಲ ಎಂದು ಆರೋಪಿಸಿ ಒಬ್ಬರನ್ನು ಇನ್ನೊಬ್ಬರು ತೆಗಳುವವರೆ.ಯಾರ ಮಾತು ಸತ್ಯ ಯಾರ ಮಾತು ಸುಳ್ಳು ಎಂಬುದ ತಿಳಿಯದ ಸಾಮಾನ್ಯ ಮಾತ್ರ ಪ್ರತಿಬಾರಿಯೂ ತಾ ಮಾಡಿದ ಮತದಾನವನ್ನೇ ಶಪಿಸುತ್ತ ಸುಮ್ಮನಾಗುತ್ತಲೇ ಇದ್ದಾನೆ. ಇದು
ಅಧಿಕಾರದ ದುರ್ಬಳಕೆಯೋ,
ಕರ್ತವ್ಯದ ಲೋಪವೋ , ಎಂಬ ಗೊಂದಲದಲ್ಲಿ ನಾ ಇದ್ದೇನೆ.
ಲೇಖನ: ಸೃಜನ