ಬದುಕು;
ಬೇಕು-ಬೇಡದ
ನೆನಪುಗಳು ಹೊಳೆಯ
ಸಾಲು ದಂಡೆಗೆ ಬಂದು
ಅಪ್ಪಳಿಸಿದಂತೆ.
ಎಲ್ಲವನು ನೋಡುತ
ತುಸು ದೂರದಲೆ
ನಿಂತ ಕಲ್ಲು ಬಂಡೆ.
ಎಂದು ಬರುವುದೋ
ಬರಲಿ ಆ ಅಲೆಯು
ಕೊಚ್ಚಿ ಹೋಗಲು
ಸಿದ್ದ ಬಂಡೆಯು!
ಆದರೂ ಸದ್ದಿಲದೆ
ಬರಲಿ ತಂಗಾಳಿಯಂತೆ
ಅಲೆಯು,
ಮುಗಿದು ಹೋಗಲಿ
ಎಲ್ಲವು ತಿಳಿಯುವಷ್ಟರಲ್ಲೇ
ಬದುಕು , ಬೇಕು-ಬೇಡದ
ನೆನಪುಗಳ ಅಗ್ನಿಕುಂಡ!