ಮರೆತು ಎಲ್ಲವನು...
ಸಾಲು ಸಾವಿರ ಮರದ
ತಂಗಾಳಿ ತಂಪಾಗಿ ನಿನ್ನ ಸಾಲು ಸಾವಿರ ಮರದ
ನಲಿದಾಡಿವೆ ಶರತ್ಕಾಲಕೆ
ಹಸಿರಾಗಿ ಮೈದುಂಬಿಹ
ರಾಶಿ ರಾಶಿ ಎಲೆಗಳು.
ಎಲ್ಲವನು ಮರೆತ ಹಾಗೆ
ಕ್ಷಣದಲಿ ಎಲ್ಲವು ಬದಲಾಗಿ
ಮೈದುಂಬಿಹ ಹೊಳೆಯ ರಭಸಕೆ
ಸಿಕ್ಕ ಎಲ್ಲೊ ಉದುರಿದ ಎಲೆಯೂ
ಮೇಲೇರುವ ಪ್ರತಿ ಅಲೆಯಲು
ಪುಳಕಗೊಂಡು ತನ್ನಿರುವ ಮರೆಯಲು
ಚಲನೆಯೊಂದೆ ಜೀವಂತ ತಾನಿರುವಲ್ಲೇ!
ತಡಕಾಡುತ ಹುಡುಕಾಡುವ ಬದುಕು
ನಿಟ್ಟುಸಿರಿಡುವ ಹೊತ್ತಿಗೆ
ಅರಿವಿರದೆ ಕೂಡುವ ನಂಟಿಗೆ
ಯಾವ ಬಂಧದ ಹೆಸರೋ
ಎಲ್ಲದಕು ಕಾರಣವ ತಿಳಿದು ತಿಳಿದು
ನಿರುತ್ತರವಾಗಿಹ ಜೀವಗಳೇ ಇಲ್ಲಿ
ಉಸಿರಾಡುತಿವೆ ಮರೆತು ಎಲ್ಲವನು...