Tuesday, November 10, 2009

ಕವನ ಮಾಲೆ






ಜೀವನದಲ್ಲಿನ ವೈರುಧ್ಯಗಳು ಅಪಾರ, ನಮ್ಮ ಮನ ಬಯಸುವುದೊಂದು ವಾಸ್ತವದಲಿ ನಡೆಯುವುದೇ ಇನ್ನೊಂದು. ಆದರೂ ಅಂತಹ ಭ್ರಮೆಗಳಲೆ,ಕನಸುಗಳ ಸರಮಾಲೆಯ ಜೊತೆಯೇ ವೈರುಧ್ಯಗಳ ಜೀವನದ ಬಂಡಿ ಸಾಗಿದೆ ಎಡಬಿಡದೆ,ಅಲ್ಲವೇ...ನನ್ನ ಕವನಗಳಲು...




ಒರೆ ನೋಟವ ಬೀರಿ ಹಾಗೆ ನಡೆದೆ
ಹಿಂತಿರುಗಿ ನನ್ನ ದಾರಿಯೆಡೆಗೊಮ್ಮೆ
ನೋಡದೆ ನಡೆದೆ, ಆ ತಿರುವಿನಲಿ
ನೀ ಕಾಣದೆ ಮರೆಯಾದುದಷ್ಟೆ
ದುರಂತವಲ್ಲ ನನ್ನ ಜೀವನದೀ,
ನಾ ಸಾಗಿದ ಹಾದಿಯಲಿ ನನಗೆ
ನನ್ನದೇ ಹೆಜ್ಜೆಯ ಗುರುತು ಸಿಗುತ್ತಿಲ್ಲ..
*************************************

ಅವನ ಕೈ ಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ
ಪ್ರೇಮ ಪಕ್ಷಿಯ ಮುಕ್ತವಾಗಿಸುವ
ಹುಂಬ ತವಕದಲಿ ಹಾರಿಬಿಟ್ಟ ಹಕ್ಕಿಯ
ಸ್ವಚ್ಚಂದ ಹಾರಟವನು ಆನಂದಿಸಲಾಗದೆ
ವಿರಹದ ಬೇಗೆಯಲಿ ಬಳಲಿದನಂತೆ
ಅಮರ ಪ್ರೇಮ ತ್ಯಾಗಿ....
***************************************

ನಿನಗಾಗಿ ಕಾಯುವ ಆ ಸರಿ ಹೊತ್ತಲಿ
ಬದುಕು ಹಾಗೆ ಸ್ಥಂಭವಾಗಲಿ ಗೆಳತಿ
ನಿನಗಾಗಿನ ನಿರೀಕ್ಷೆ, ಕಾಯುವ ಕಾತರಿಕೆಗೆ
ಮುಪ್ಪಡರುವುದಿಲ್ಲ, ನನ್ನ ಭಾವಕು
ಚಿರ ಯೌವ್ವನ, ನಿನಗೋ ಸಂಧಿಸಲವಣಿಸುವ
ಚಿರಂತನ ಯಾನ.....
****************************************

12 comments:

ಜಲನಯನ said...

ಈಶ್, ಬಹಳ ಚನ್ನಾಗಿ ಮೂಡಿದೆ ಪದಗಳ ಜೋಡಣೆ,
ನಾ ಸಾಗಿದ ಹಾದಿಯಲಿ ನನಗೆ
ನನ್ನದೇ ಹೆಜ್ಜೆಯ ಗುರುತು ಸಿಗುತ್ತಿಲ್ಲ
ನಮ್ಮ ಹಳತಿನ ಕುರುಹು ಮರೆಯಾದರೆ ನಮ್ಮ ಬಗ್ಗೆ ನಮಗೇ ಅನುಮ್ಮನ ಬರುತ್ತೆ ನಿಜ..... ಅಭಿನಂದನೆ

Lakshmi said...

ನಾ ಸಾಗಿದ ಹಾದಿಯಲಿ ನನಗೆ
ನನ್ನದೇ ಹೆಜ್ಜೆಯ ಗುರುತು ಸಿಗುತ್ತಿಲ್ಲ..
ಈ ಸಾಲು ತುಂಬಾ ಚೆನ್ನಾಗಿ ಬರೆದಿದ್ದೀರಿ ಹೀಗೆಯೇ ಜೀವನದ ಪಯಣವು ಸಹ ಅನ್ನಿಸುವುದು,,ಹಿಂತಿರುಗಿ ನೋಡಿದಾಗ....... ನಾ ನೂರುವ ಹೆಜ್ಜೆಗಳೆಲ್ಲ ಮಾತಾಡುತ್ತಿವೆ, ---ಮುಉಡುತಿಲ್ಲ ಒಮೊಮ್ಮೆ ದಾರಿಯಿಡೀ ಮೌನ , ಮೌನ --- ಮೌನ

udaya said...

ನಾ ಸಾಗಿದ ಹಾದಿಯಲಿ ನನಗೆ
ನನ್ನದೇ ಹೆಜ್ಜೆಯ ಗುರುತು ಸಿಗುತ್ತಿಲ್ಲ..
ಯಾವ ಗುರುತು ಸಿಗದೇ ಮುಂದೆ ಸಾಗುತ್ತದೆ ಜೀವನ...
ಒಳ್ಳೆಯ ಕವನಗಳು..

Dr.Deepak.B said...

ಅಮರ ಪ್ರೇಮ ತ್ಯಾಗಿ ಭ್ರಮೆಯ ಪೊರೆಯದೆ
ಪೊರೆಯಹರಿವುದು ಸೊಗಸಾಗಿದೆ

Anonymous said...

ಈಶಕುಮಾರ್,

ಕವನದಲ್ಲಿ ಪದಪ್ರಯೋಗ ತುಂಬಾ ಚೆನ್ನಾಗಿದೆ. ಒಳ್ಳೆಯ ಕವನಗಳನ್ನು ಬರೆದಿದ್ದೀರಿ.

Unknown said...

mooru muktakagaloo chennaagive. goodluck

Anonymous said...

ಈಶಕುಮಾರ್,

ಅರ್ಥಗರ್ಭಿತ ಕವನ. ಒಂದಕ್ಕಿಂತ ಒಂದು ಚೆನ್ನಾಗಿದೆ.

ಚಿತ್ರ

ಗೌತಮ್ ಹೆಗಡೆ said...

sir chennagide:)

ಸೀತಾರಾಮ. ಕೆ. / SITARAM.K said...

nice one dear Eshakumar

Anonymous said...

ಅವನ ಕೈ ಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ

ಈ ಕವಿತೆ ಏನು ಹೇಳುತ್ತೆ ಅಂದ್ರೆ ಸಮ್ಮಿಲನದ ಆ ಕ್ಷಣದಲ್ಲಿ ಏನೋ ಆತಂಕವಾಗಿ ಪ್ರೆಮಪಕ್ಷಿಯು ಹಾರಲು ಹೊರಟಾಗ ಅದರ ರೆಕ್ಕೆ ಪುಕ್ಕಗಳನ್ನು ಕತ್ತಿರಿಸಿದಂತೆ, ಅದೇ ನಿರೀಕ್ಷೆ ಕಣ್ಣಲಿ, ಸುಂದರವಾಗಿದೆ ಕವಿತೆ ಆದರೆ ಈಗಿನ ಸಂತತಿಯವರು ಸ್ವಚ್ಚಂದವಾದ, ನಿರ್ಮಲವಾದ ಪ್ರೇಮವನ್ನು ಒಂದು ವ್ಯವಹಾರವಾಗಿ ಮಾಡಿಕೊಂಡಿದ್ದಾರೆ. ಅವರಲ್ಲಿ ಪ್ರೀತಿ ಅಂದರೆ ಬೇರೆಯೇ ಅರ್ಥ, ನಿಮ್ಮ ಕವನವನ್ನು ಪ್ರೇಮ ತುಂಬಿದ ಕಂಗಳಿಂದ ಓದಿ ಅವರು ತಿಳಿಯಬೇಕು ಅದರಲ್ಲಿಯ ಭಾವ.

Anonymous said...

ನಿನಗಾಗಿ ಕಾಯುವ ಆ ಸರಿ ಹೊತ್ತಲಿ
ಬದುಕು ಹಾಗೆ ಸ್ಥಂಭವಾಗಲಿ ಗೆಳತಿ
ನಿನಗಾಗಿನ ನಿರೀಕ್ಷೆ, ಕಾಯುವ ಕಾತರಿಕೆಗೆ
ಮುಪ್ಪಡರುವುದಿಲ್ಲ, ನನ್ನ ಭಾವಕು
ಚಿರ ಯೌವ್ವನ, ನಿನಗೋ ಸಂಧಿಸಲವಣಿಸುವ
ಚಿರಂತನ ಯಾನ.....

ನಿನಗಾಗಿ ಕಾಯುವ ಹೊತ್ತು ಸ್ಥಮ್ಬವಾಗಲಿ, ಪದಗಳ ಜೋಡಣೆ ಬಹಳ ಚೆನ್ನಾಗಿದೆ, ಕಾಯುವ ಕಾಥರಿಕೆಗೆ ಮುಪ್ಪಾಗುವುದಿಲ್ಲ, ಅಂದರೆ ಕಾಯುವ ನಿರೀಕ್ಷೆಯನ್ನುವುದು ಎಷ್ಟು ಸಮಯವಾದರೂ ಅದಕ್ಕೆ ಬೇಸರಿಕೆ ಇಲ್ಲ, ಈ ಸಾಲು ಭಾವಪೂರ್ಣವಾಗಿದೆ, ಅವಳಿಗೆ ಸಂಧಿಸಲೆನಿಸುವ ಕಾತರ ಆದರೆ ಆ ಸಮಯ ಇಬ್ಬರಿಗೂ ಬರಲಿಲ್ಲ ನಿರೀಕ್ಷೆಯಲ್ಲೇ ಜೀವನ ಎಂದು ಹೇಳುತ್ತದೆ ಈ ಸಾಲುಗಳು, ಅವನ - ಅವಳ ನಿರೀಕ್ಷೆ ಹುಸಿಯಾಗಬಾರದು ಅದು ನನ್ನ ಹಾರೈಕೆ

kavya H S said...

kavanagalu thumba chennagive "avana kai sereyali" ista aytu.Matte aa chitra thumba chennagide