Thursday, January 21, 2010

ನಿಮಿತ್ತ...




ನಿಮಿತ್ತ...



ಬಿಡಿ
ಬಿಡಿ ಚಿತ್ರಗಳ ಹೂರಣ
ಕಾಣುವ ಕನಸುಗಳ ಹಿಂದೆ
ಅಸ್ಪಷ್ಟ ಹೆಜ್ಜೆಗಳನಿಡುತ ನೆರೆ ಹೊರಟ
ಭಾವಗಳ ಹರಿವು ವಯ್ಯಾರ...
ಕನಸು-ನನಸುಗಳ ನಡುವಿನ್ನು
ಸವೆಯದ ಸುಮಧುರ ಸಂಭಂದ ಮಾಲೆ

ಕಂಡರೂ ಕಾಣದು ಒಲವಿನ
ನಿಲುವುಗನ್ನಡಿಯಲಿ ನಿನ್ನ ರೂಪ
ಅರಿವಿಗೆ ಬಂದರು ಬಾರದು ಬದುಕಿನ
ನಾನಾ ರೂಪ ನನ್ನದೇ ಅನುಭವದ ನಿಲುವಲ್ಲಿ.
ಮೋಹನ ಮುರಳಿಯ ಕರೆಗೆ ಕಾದೆ
ಕಾದುದಷ್ಟೆ ಬದುಕು, ಅರಿವಾಗದು
ತೀರ-ತೀರಗಳ ನಡುವಿನ ದೂರದಯಾನ.

ಯಾತಕೋ ಚಿಂತಾಕ್ರಾಂತ, ಮತ್ತ್ಯಾಕೋ
ಮಮ್ಮಲ ಮರುಕ, ಅದೇಕೋ ಆತಂಕ
ಮತ್ತೊಮ್ಮೆ ನಿರಾಳ, ಅನುದಿನದ ಅನುಭವಗಳ
ನದಿಯ ಹರಿವಿಗೆ ಒಡಲೊಡ್ಡುವ
ಮಹಾಶರಧಿ ನೀನು, ನಿನ್ನೆಡೆಗಿನ ಮೋಹಕೆ
ಮರುಳಾಗಿ ನನ್ನ ಬದುಕನ್ನೇ ನೀಗಿಕೊಳ್ಳುವ
ನಿಮಿತ್ತ ಸಾಗಿಹ ಚರವೂ ನಾ....

10 comments:

Anonymous said...

ನಮ್ಮ ದಿನ ನಿತ್ಯದ ಜೀವನದಲ್ಲಿ ಬೇಸರವಾಗಿರುತ್ತದೆ, ಮತ್ತದೇ ಅವನ / ಅವಳ ನೆನಪು ಬಂದಾಗ ಏನೋ ಒಂದು ರೀತಿಯ ನೆಮ್ಮದಿ ಅನ್ನೋ ಭಾವ, ಮತ್ತೆ ಆ ದೂರದ ಅವಳ / ಅವನ ಮೇಲೆ ಏನೋ ತಿಳಿಯದ ಅನುಕಂಪ, ಮತ್ತದೇ ದಿನ ನಿತ್ಯದ ಜೀವನವಾಗಿ ಮಾರ್ಪಡುತ್ತದೆ. ಇದರ ಪ್ರಕಾರ ಬದುಕು ಬಂದಹಾಗೆ ಬರಲಿ, ಅವನ / ಅವಳ ನೆನಪು ಸದಾ ಮಾಸದೆ ಹಾಗೆ ಉಳಿಯಲಿ ಅನ್ನೋ ಭಾವ ನಮಮದಾಗುತ್ತೆ. ಅನುದಿನ ಹೊಸತರದ ಅನುಭವಗಳ ನದಿಯ ಹರಿವಿಗೆ, ನಿನ್ನ ಒದಳನ್ನೇ ಒಡ್ಡುತ್ತಿರುವ ಮಹಾ ಸಾಗರ ನೀ, ನಿನ್ನೆಡೆಗಿನ ಮೋಹಕ ಸೇಳತಕ್ಕೆ ಮರುಳಾಗಿ ನಾನು ನನ್ನ ಬದುಕನ್ನೇ ನಿನಗೆ ಸಮರ್ಪಿಸಿಕೊಂಡು ಸಾಗುವ ಸಾಮಾನ್ಯ / ಸಾಮಾನ್ಯಲು ನಾ, ಕವನ ತುಂಬ ಭಾವನಾತ್ಹ್ಮಕವಾಗಿದೆ.

ಸೀತಾರಾಮ. ಕೆ. / SITARAM.K said...

chennagi bandide kavana. koneya saalugaLu tu0baa ishtavaayitu.

Unknown said...

Hie eshu... very meaning ful poem... may I know that did you addressed anybody in this peom.. I mean to ur gf...? -:)

ಸಾಗರದಾಚೆಯ ಇಂಚರ said...

ಸೊಗಸಾದ ಕವಿತೆ
ಅದರಲ್ಲೂ ಕೆಳಗಿನ
ಮೋಹನ ಮುರಳಿಯ ಕರೆಗೆ ಕಾದೆಕಾದುದಷ್ಟೆ ಬದುಕು, ಅರಿವಾಗದು
ತೀರ-ತೀರಗಳ ನಡುವಿನ ದೂರದಯಾನ

ಸಾಲುಗಳು ತುಂಬಾ ಹಿಡಿಸಿದವು

Shashi jois said...

ಚೆನ್ನಾಗಿದೆ ಕವನ ಎರಡನೆಯ ಪ್ಯಾರ ಚೆನ್ನಾಗಿದೆ.

ಅರಕಲಗೂಡುಜಯಕುಮಾರ್ said...

ಭಾವದ ಅಲೆಗೆ ಜೋಡಿಸಿದ ಮುತ್ತಿನಂತಹ ಸಾಲುಗಳು/ಮನಕ್ಕೆ ತಾಕುವ ಮುನ್ನ ಸ್ಪರ್ಶಿಸದ ಮುಂಜಾವಿನ ಕಿರಣದಂತೆ ನಿಮ್ಮ ಕವನದಿಂದ ನನ್ನಲ್ಲಿ ಹೊಸ ಅನುಭೂತಿ ಉಂಟಾಗಿದೆ ಮಾರಾಯ್ರೆ... ಈಶಕುಮಾರ್ Keep it up:)

ಜಲನಯನ said...

ಕಂಡರೂ ಕಾಣದು ಒಲವಿನ
ನಿಲುವುಗನ್ನಡಿಯಲಿ ನಿನ್ನ ರೂಪ
ಅರಿವಿಗೆ ಬಂದರು ಬಾರದು ಬದುಕಿನ
ನಾನಾ ರೂಪ ನನ್ನದೇ ಅನುಭವದ ನಿಲುವಲ್ಲಿ.
ಈಶ್ ಚನ್ನಾಗಿ ಮೂಡಿಸಿದ್ದೀರಿ ಭಾವನೆಗಳ ಛಾಯೆ...ಅದರಲ್ಲೂ ನನಗೆ ಕೆಳಗಿನ ಸಾಲುಗಳು ಬಹಳ ಹಿಡಿದಿಸಿದವು

AntharangadaMaathugalu said...

ತುಂಬಾ ಚೆನ್ನಾಗಿದೆ....

ಶ್ಯಾಮಲ

Manju M Doddamani said...

ಸುಂದರವಾದ ಕವಿತೆ
"ನದಿಯ ಹರಿವಿಗೆ ಒಡಲೊಡ್ಡುವ ಮಹಾಶರಧಿ ನೀನು" ಮನಮುಟ್ಟುವ ಸಾಲು !

udaya said...

Nice Lines....