Saturday, May 8, 2010

ತ್ರಿಶಂಕುವಾಗಿ..






ನನ್ನನ್ನೆ ಮರೆತು
ಉಸಿರಾಟದ ನೆಪದಲಿ
ಜೀವವ ಜೀಕುವ
ಪರಿ ನನ್ನದು.
ನಿನ್ನ ನೆನೆದು ನೆನೆದು
ನನ್ನ ವಿರಹವ
ಮರೆಯುವ ನೆಪದಲ್ಲೆ
ಲೋಕವನು ಸಹ
ಮರೆತು ನನ್ನಲ್ಲೂ
ನಿನ್ನಲ್ಲೂ ಇದ್ದು
ಇಲ್ಲದಾಗಿರುವೆ
ನಾ ಜೀವಿಸುತ
ತ್ರಿಶಂಕುವಾಗಿ...

6 comments:

ಸೀತಾರಾಮ. ಕೆ. / SITARAM.K said...

nice

AntharangadaMaathugalu said...

ಚೆನ್ನಾಗಿದೆ... ಏನು ಈಶ್... ವಿರಹ ಗೀತೆ ಆರಂಭಿಸಿಬಿಟ್ಟಿದ್ದೀರಿ...? :-)

shivu.k said...

ವಿರಹವನ್ನು ವ್ಯಕ್ತಪಡಿಸುವ ಪದ್ಯ ಇಷ್ಟವಾಯಿತು.

ALL IN THE GAME said...

yake isht kashta padtidira? :)enjoy...

Anonymous said...

(ಅವನು / ಅವಳು) ತನ್ನನ್ನೇ ಮರೆತು ಅವರು ಉಸಿರಾಡುವ ಗಾಳಿಯಲ್ಲೂ ಅವರನ್ನೇ ನೆನೆದು ಈ ಜೀವನವನ್ನು ಸಾಗುವ ರೀತಿ ಅವರದು. ಅವನನ್ನು / ಅವಳನ್ನು ನೆನೆದು ಏಕಾಂಗಿಯಾಗಿ ಈ ಲೋಕವನ್ನು ಸಹ ಮರೆತು ಅವನಲ್ಲೂ / ಅವಳಲ್ಲೂ ಇದ್ದೂ ಇಲ್ಲದಂತಾಗಿರುವೆ ಸ್ತಿತಪ್ರಜ್ಞ ನ ರೀತಿ ಅವನು / ಅವಳು ಬಾಳುತ. ಪ್ರೀತಿಯನ್ನು ಪಡೆದು, ಆ ಪ್ರೀತಿ ಇನ್ನೇನು ಸಿಕ್ಕೆ ಬಿಟ್ಟಿತು ಅನ್ನೋ ಕ್ಷಣದಲ್ಲಿ ಮತ್ತೆ ದೂರವಾದಂತೆ ಭಾಸವಾಗುವಂತೆ ಮನ ನೊಂದು ಒಬ್ಬ ಏಕಾಂಗಿಯು ತನ್ನ ವಿರಹವನ್ನ ನಿವೆದಿಸುತ್ತಿರುವಂತೆ ಅರ್ಥಪೂರ್ಣವಾಗಿದೆ. ಪ್ರೀತಿಯನ್ನು (ಅವಳು / ಅವನು ) ಪಡೆದು ನಂತರ ಅದರಿಂದ ಅನುಭವಿಸುವ ನೋವಿನ ಪರಿ ಇದರಲ್ಲಿದೆ.

ಚರಿತಾ said...

ಇಷ್ಟ ಆಯ್ತು.
ಪ್ರೀತಿ ಅನ್ನೋದೆ ಹಾಗೆ..ನಮ್ಮನ್ನೆ ನಾವು ಮರೆತು, ಭ್ರಮಿತರಾಗುವುದಕ್ಕೆ ನಾವಾಗಿಯೇ ಸಿದ್ಧರಾಗಿಬಿಡುವ ಅಮೋಘ ಮೌಢ್ಯ..!
ಇದನ್ನು ಜಾಣ ಕುರುಡು ಅನ್ನಬೇಕೋ,ನಾವಾಗಿಯೇ ಬರಮಾಡಿಕೊಳ್ಳುವ ಅಮೂಲ್ಯ ಯಾತನೆ ಅನ್ನಬೇಕೋ ನನಗೂ ತೋಚುತ್ತಿಲ್ಲ..!!