Monday, July 12, 2010

ಕಣ್ಣ ಆಳದಲಿ...

ಕಣ್ಣ ಆಳದಲಿ...


ಬಾಯಾರಿದ ಬದುಕು!
ಬೊಗಸೆಯೊಡ್ಡಿ ಬೇಡಿ
ದಣಿವಾರಿಸುವ ನೀರಿಗೆ
ಸಾಕೇನು ಬೊಗಸೆಯ
ಆಳ-ವಿಶಾಲ.
ಸಾಕೇನಿಸದಿರಲು ಅದು 'ಪ್ರೀತಿಯೇ'
ದಣಿವಾರುವುದು ಕ್ಷಣದಲಿ
ಬೊಗಸೆಯಲಿ ಆನಿಸಿ
ಕುಡಿದ ನೀರಿಗೆ.
ಹೊಟ್ಟೆ ಹೊರೆಯುವ
ಜೀತದ ಪರಿ,ದಣಿವುದು
ದೇಹ ಅನುಗಾಲವು
ಹಿಡಿ ಅನ್ನಕ್ಕಾಗಿ.
ಆದರೂ ಆವರಿಸಿಹುದು
ನನ್ನನು-ನಿನ್ನನು ಬಿಡಿಸಲಾಗದ
ಮೋಹ.
ಮೋಹದೊಡಲ ಕಿಚ್ಚನು
ತಣಿಸಲೇ ಸೋತು ಸೋತು
ಬಟಾ ಬಯಲಿನ ದಾರಿ ಬದಿಯ
ನೆಳಲಲಿ ಕೂತು
ದಿಗಂತದೆಡೆಗೆ ದಿಟ್ಟಿ ಬೀರಲು
ಬರಿದೇ ಬದುಕಿನ ಬರ್ಬರತೆಯ
ರಾಡಿ ರಾಚಲು ಕಣ್ಣ ಆಳದಲಿ
ಮಿರುಗುವುದು 'ನಶ್ವರತೆಯ ಹೊನಲು'
ಜೀವನ ಶೂನ್ಯವು...

10 comments:

Unknown said...

ದಣಿವಾರಿದ ಬದುಕು ! ದಣಿವಾರಿದ ಈ ಬದುಕಿಗೆ ಸಾಕೆ ಒಂದು ಬೊಗಸೆಯ ನೀರು. ಅದರ ಆಳ - ವಿಶಾಲ ಆ ಕ್ಷಣಕ್ಕೆ ಮಾತ್ರ.
ಆ ದಣಿವನ್ನು ನೀಗಿಸುವಂತೆ. ಈ ದಣಿವಾರಿದ ಬದುಕಿನಲಿ ಸ್ವಲ್ಪ ನೀರು ದೊರೆತರೂ ಸಾಕೆನೆಸುವುದು. ಆದರೆ ಪ್ರೀತಿ ವಿಷಯದಲ್ಲಿ ಹಾಗಲ್ಲ ಅದರಲ್ಲಿ ಕೊಡುಗೈ ಇರುವ ಹಾಗೆ, ಎಷ್ಟು ಪಡೆದರೂ ಇನ್ನು ಬೇಕೆನಿಸುತ್ತದೆ. ಈ ಹಾಳು ಜೀವನ ಜೀತದಾಳಿನಂತೆ ದುಡಿದು ದಣಿವಾರಿದೆ ಪ್ರತಿ ಕ್ಷಣದಲ್ಲೂ ಹೊಟ್ಟೆ ಹೊರೆಯಲು, ಇಷ್ಟೆಲ್ಲಾ ಗೊಂದಲಗಳ ಸಂಕಷ್ಟದ ಬದುಕಿನಲ್ಲೂ ನನ್ನನ್ನು ನಿನ್ನನ್ನು ಬೇಡವೆಂದರೂ ಬಿಡದೀ ಮೋಹ. ಈ ಮೋಹದ ಕಿಚ್ಚನು ಆರಿಸಲು ಸೋತು ಸೋತು, ಬರಿದಾದ ದಾರಿಯ ನೆರಳಲಿ ಕೂತು ಆಗಸದೆಡೆಗೆ ನೋಡಲು ಏನು ಅಲ್ಲದ, ಇಲ್ಲದ ಬದುಕಿನ ಸಂಕಷ್ಟಗಳು ಆವರಿಸಿರಲು ನನ್ನ ಕಣ್ಣ ಆಳದಲ್ಲಿ ಹೊಮ್ಮುವುದು ಏನು ಇಲ್ಲದ, ನನ್ನಲ್ಲದ ಶೂನ್ಯದ ಜೀವನ.
ಕವನ ಭಾವನಾತೀತವಾಗಿದೆ. ನಮ್ಮ ಇಡೀ ಬದುಕಿನ ಚಿತ್ರಣ ಇದರಲ್ಲಿ ಚನ್ನಾಗಿ ಬಿಂಬಿತವಾಗಿದೆ.

ಸಾಗರದಾಚೆಯ ಇಂಚರ said...

ಭಾವ ಪೂರ್ಣ ಕವನ
ಪ್ರತಿ ಸಾಲುಗಳಿಗೂ ಒಂದು ತೂಕವಿದೆ

V.R.BHAT said...

Good!

AntharangadaMaathugalu said...

ತುಂಬಾ ಚೆನ್ನಾಗಿದೆ ಈಶ್.....

Dileep Hegde said...

tumbaa chennagide..

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿ ಬಂದಿದೆ ಕವನ. ಬಾಯಾರಿದ ಬದುಕು, ಮೋಹದೊಡಲು, ನಶ್ವರತೆಯ ಹೊನಲು, ಅದ್ಭುತ ಸಾಂಕೇತಿಕಗಳೊಂದಿಗೆ ವೈರುದ್ಧ್ಯ ಬದುಕ ಸಾರ ಹಿಡಿದಿಟ್ಟಿದ್ದಿರಾ...

ಚರಿತಾ said...

ಗಾಢ ಮೌನದ ಆಳದಲ್ಲಿ ತನ್ನಷ್ಟಕ್ಕೆ ತಾನು ಉಸಿರಾಡಿಕೊಳ್ಳುವ ಜೀವ ಈ ಕವನ.

ಶೂನ್ಯ ಎಂಬುದು ಇಂತಹ ಗಾಢ ಸಂವೇದನೆಯ ಕವನ ಹುಟ್ಟಿಸುತ್ತಲ್ಲಾ ಅನ್ನೋದೇ ಸಂತೋಷ.. :-)

ALL IN THE GAME said...

?????????????

kavya HS said...

"Danivaarisuva neerige sskenu bogaseya aala vishaala..." chandada saalugalu....

KalavathiMadhusudan said...

ಈಶಕುಮಾರ್ ರವರೆ ನಿಮ್ಮ ಕವನಗಳು ತುಂಬಾ ಚೆನ್ನಾಗಿದೆ.ಹಾಗೆ ನಿಮ್ಮ ಬ್ಲಾಗ್ ಕೂಡ ತುಂಬಾ ಚೆನ್ನಾಗಿದೆ.ನೀವು ಕೂಡ ಹಾಸನ ದವರೆ ಎಂದು ಕೇಳಿ ಸಂತೋಷ ಆಯಿತು.ನಿಮ್ಮಿಂದ ಇನ್ನಷ್ಟು ಒಳ್ಳೆಯ ಲೇಖನಗಳು ಬರುತ್ತಿರಲಿ ..........