Monday, September 13, 2010

ಸಂಜೆಯ ಕೆಂಧೂಳಿಯಲಿ.

ಸಂಜೆಯ ಕೆಂಧೂಳಿಯಲಿ.

ನನ್ನ ನೀ ಕರೆದರೂ
ಕಾಯುವೆ ಇನ್ನಾರಿಗೋ
ಬೇಡಿ ಬಂದರೂ ನಿನ್ನ ಬಳಿ
ಹರಸುವೆ ಸಾಂಗತ್ಯದ ಸವಿ
ನಿನ್ನ ತನವಳಿದ ಅವಳ ಬದುಕಲಿ.
ಎಂದೋ ನನ್ನ-ನಿನ್ನ ಸೇರಿಸಿ
ಆಟವಾಡಿಸುತ್ತಿದೆ ವಿಧಿಯೂ
ಯಾರು-ಯಾರ ವಂಚಿಸಿ
ವಿರಮಿಸುವರು,
ದಾರಿ ಬದಿಯ ಹೆಜ್ಜೆಗುರುತು.
ಆಕಾರವಿಹ ನಶ್ವರ ಬದುಕು
ಎಂದೋ ಬಂದು,ಇಂದು ಸಾಗಿ
ಮುಂದೆ ಮರೆತು ಹೋಗುವ
ನಾವು-ನೀವು ಋಣಿಗಳು
ನಿಮ್ಮೆದೆಯಲಿ ನಮ್ಮೆಡೆಗೆ
ಪುಟಿವ ಬೆಚ್ಚಗಿನ ಪ್ರೀತಿಯ
ಅಮೂರ್ತ ಭಾವಕೆ...
ಭಾವ ಭಾವದೊಲುಮೆಯ
ಸವಿಯನೊಮ್ಮೆ ತಾ ಸವಿದು
ತನ್ನವರಿಗೆ ಹಂಚುತಿರಲು
ಒಲುಮೆ ಉಯ್ಯಾಲೆಯ
ಸಂಭ್ರಮದ ಜೀಕಾಟ ಬದುಕಲಿ,
ಎಲ್ಲರೆದೆಯಲು ರಂಗು ರಂಗಿನ
ರಂಗವಲ್ಲಿ ಸಂಜೆಯ ಕೆಂಧೂಳಿಯಲಿ.

6 comments:

Badarinath Palavalli said...

ನಿಮ್ಮ ಕವಿತೆ ಸರಳವಾಗಿ, ಅರ್ಥವಾಗುವಂತಿದೆ. ಶೈಲಿಯೂ ಸುಲಲಿತವಾಗಿದ್ದು ಲಯವಿದೆ. ಶಭಾಷ್!
ನನ್ನ ಬ್ಲಾಗಿಗೂ ಬನ್ನಿರಿ.

shivu.k said...

ಈಶಕುಮಾರ್,

ಕವನ ಸರಳವಾಗಿ ಅರ್ಥವಾಗುತ್ತದೆ. ಚೆನ್ನಾಗಿದೆ. ನನ್ನ ಬ್ಲಾಗಿನಲ್ಲಿ ಕೊರಿಯನ್ ನಾಟಕ ನೋಡಲು ಬನ್ನಿ.

ಸಾಗರದಾಚೆಯ ಇಂಚರ said...

ಸುಂದರ ಸುಲಲಿತ ಕವಿತೆ

Dr.D.T.krishna Murthy. said...

ಸುಂದರ ಕವಿತೆ.ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಚೆಂದದ ಕವಿತೆ.

prabhamani nagaraja said...

'ಎಂದೋ ಬಂದು,ಇಂದು ಸಾಗಿ
ಮುಂದೆ ಮರೆತು ಹೋಗುವ
ನಾವು-ನೀವು ಋಣಿಗಳು '
ನೆನಪಿನಲ್ಲಿ ಉಳಿಯುವ ಸಾಲುಗಳ ಉತ್ತಮ ಕವನ. ನನ್ನ ಬ್ಲಾಗ್ ಗೊಮ್ಮೆ ಭೇಟಿ ಕೊಡಿ.