ತೀರ್ಪು
ಕರ್ಫ್ಯೂ ವಿಧಿಸಿದ ಬೀದಿ ಬೀದಿಯಲಿ
ಆತಂಕದ ನಡುವೆ
ರಾಮನ ಜಪತಪ
ಪುರಾಣ ಪುಣ್ಯಕತೆಗಳ
ಕೆದಕಿ ಮತ್ತೆ ಮುಂದಿಟ್ಟ
ತ್ರೇತಾ ಯುಗದ
ನಂಬುಕೆಯ ಕಗ್ಗಂಟು.
ಬಿಡಿಸಲಾಗದ ಮಹಾಪುರುಷರದಷ್ಟೇ
ವಾದ ಅಪ್ಪ ಹೇಳಿದ ಕಥೆಯಲಿ
ರಾಮನುಟ್ಟಿದ 'ಅಯೋಧ್ಯೆಯಲಿ'.
ತಂದೆಗೆ ತಕ್ಕ ಮಗ 'ರಾಮ'
ಬಿಟ್ಟು ನಡೆದ ಕಾಡಿಗೆ 'ರಾಜ್ಯವ'
ಮರ್ಯಾದ ಪುರುಷೋತ್ತಮ 'ಶ್ರೀರಾಮ'
ಅಟ್ಟಿದ ಕಾಡಿಗೆ ಮಡದಿಯ
ಒಡ್ಡಿದ ಅಗ್ನಿಗೆ ತನ್ನೊಡತಿಯ
'ನಿಷ್ಕರುಣಿ' ರಾಮ.
ಸೀತೆಯುಂಡ ನೋವಲಿ ಅವನಾದ
ಏಕಪತ್ನಿವ್ರತನು ರಾರಾಜಿಸುತಿಹ
ಇಂದಿಗೂ ಪ್ರತಿ ಪತ್ನಿಯರೆದೆಯಲಿ
ಪತಿಯ ಮೇಲಿಹ ದೈವತ್ವದ
'ಸರ್ವನಾಮ'ವಾಗಿ
ಸರ್ವಾಂತರ್ಯಾಮಿಯಾಗಿಹ ರಾಮನನು
ಪವಿತ್ರ ಜನ್ಮಸ್ಥಳವೆಂಬ
ಕುರುಡು ನಂಬಿಕೆಯಲಿ
ಅಯೋಧ್ಯೆಯ ಗರ್ಭಗುಡಿಯ
ಕತ್ತಲಲಿ ಕೂಡಿಹುದು ದುರ್ದೈವ
'ಭರತಭೂಮಿಯ' ರಾಮನ.
6 comments:
Rama is an ICONIC symbol through which etiquettes are preached in our society.We have to catch the extract of story , the purpose of same and should not go by materialistic words. Fortunately people of India didn't bother about the issue but maintained the integrity while verdict was out in court. None wants issue of Rama or babri except those who have profit, the priest classes and politicians. Yourself writing this poem at this point of time is very much relevant to current events. We need such relevant writings. I congratulate you heartily.
ಸರ್,
ರಾಮನೂ ಒಂದೇ, ರಹೀಮನು ಒಂದೇ, ಎಲ್ಲರ ಧ್ಯೇಯ ಶಾಂತಿ
ಆದರೆ ಕೆಲವು ರಾಜಕೀಯ ಶಕ್ತಿ ಗಳ ಕುತಂತ್ರದಿಂದ ಅಯೋಧ್ಯೆ ಹೀಗಾಯಿತು
ಮುಂದಾದರೂ ಅರ್ಥ ಮಾಡಿ ನಡೆದರೆ ಒಳಿತು
ಈಶಕುಮಾರ್ ರವರೆ ಕವನದಲ್ಲಿ ಪ್ರಸ್ತುತ ಪರಿಸ್ತಿತಿಯನ್ನ ಅರ್ಥರ್ಪೂರ್ಣವಾಗಿ ಬಿಂಬಿಸಿದ್ದೀರ.ಕವನಚೆನ್ನಾಗಿದೆ.ಅಭಿನಂದನೆಗಳು.
ಮಾನವೀಯತೆಯನ್ನು ಮರೆತಿರುವ ಮನುಷ್ಯರಿಗೆ ಅರ್ಥವಾಗುವಂಥಹ ಸರಳ ಸಾಲುಗಳ ಕವನ ತುಂಬ ಚೆನ್ನೆಗಿ ಮೂಡಿಬಂದಿದೆ ನಿಮ್ಮ ಅಂತರಾಳದಿಂದ ಧನ್ಯವಾದಗಳು... ಪ್ರಿಯಾಗೌಡ
ಮಾನವೀಯತೆಯನ್ನು ಮರೆತಿರುವ ಮನುಷ್ಯರಿಗೆ ಅರ್ಥವಾಗುವಂಥಹ ಸರಳ ಸಾಲುಗಳ ಕವನ ತುಂಬ ಚೆನ್ನೆಗಿ ಮೂಡಿಬಂದಿದೆ ನಿಮ್ಮ ಅಂತರಾಳದಿಂದ ಧನ್ಯವಾದಗಳು... ಪ್ರಿಯಾಗೌಡ
ತುಂಬ ಅರ್ಥಗರ್ಭಿತ ಕವನ. ಚೆನ್ನಾಗಿದೆ
Post a Comment