
ಬರೆದ ಅಕ್ಷರಗಳೆಲ್ಲ
ಬದುಕ ಕಾವ್ಯವಾಗಲೆಂಬ
ಭ್ರಮೆ, ಜೀವಂತವಾಗಿರಿಸಿದೆ
ಅಕ್ಷರಗಳ ಮೇಲಿನ
ನನ್ನ ಪ್ರೀತಿಯ.
**************************
ನಾ ಸೆಳೆದು ಬಿಡುವ
ಸಿಗರೇಟಿನ ಧೂಮದಂತೆ
ದೂರಾದೆ ನನ್ನ ಅಗಲಿ
ಕಾಡುತ್ತಿರುವೆ ಶ್ವಾಸದಲಿ
ಅಳಿದುಳಿದು ಕ್ಯಾನ್ಸರ್ ನಂತೆ
ಮಾಸದ ನೆನಪಾಗಿ...
*****************************
ಆ ನಿನ್ನ ಹುಸಿ ನಗೆ
ನೋಟ,ಮಾತು,ಮೌನ

ಕೊಂಕು ಕಾರಣಗಳಿಗಾದರೂ
ನಾ ಬದುಕಬೇಕು
ಉಸಿರ ಬಿಗಿ ಹಿಡಿದು
ನೂರುಕಾಲ
ಪ್ರೀತಿಯ ನೆಪವಾಗಿ!
*********************************
5 comments:
ಬರೆದ ಅಕ್ಷರಗಳೆಲ್ಲ
ಬದುಕ ಕಾವ್ಯವಾಗಲೆಂಬ
ಭ್ರಮೆ, ಜೀವಂತವಾಗಿರಿಸಿದೆ
ಅಕ್ಷರಗಳ ಮೇಲಿನ
ನನ್ನ ಪ್ರೀತಿಯ. ಇಷ್ಟವಾದ ಕವಿತೆ. ಮೈಸೂರಿನವರು ಎಂದು ತಿಳಿದು ಸಂತಸವಾಯಿತು[ ನಾನು ಕೂಡ ಮೈಸೂರಿನಿಂದ ಬರೆಯುತ್ತಿದ್ದೇನೆ.].ಬನ್ನಿ ನನ್ನ ಬ್ಲಾಗಿಗೆ http:// nimmolagobba.blogspot.com, [ ನಿಮ್ಮೊಳಗೊಬ್ಬ ಬಾಲು] ಹಾಗೂ http://shwethadri.blogspot.com [ಕಾವೇರಿ ರಂಗ ] ಈ ಪುಟಗಳಿಗೆ ಭೇಟಿ ಕೊಟ್ಟು ನಿಮ್ಮ ಅನಿಸಿಕೆ ತಿಳಿಸಿ. ವಂದನೆಗಳು.
--
ಪ್ರೀತಿಯಿಂದ ನಿಮ್ಮವ ಬಾಲು.
ಅದ್ಭುತವಾಗಿದೆ ಮತ್ತೇನಾದರೂ ಹೇಳಹೋದರೆ ಅಪಾರ್ಥವಾಗುವುದು.
ತುಂಬಾ ಚೆನ್ನಾಗಿ ಕವನ ಬರೆದಿದ್ದೀರಿ.
nimma kavana bahala chennaagide.abhinandanegalu.
nice esha
-sitaram
Post a Comment