ಲಂಕೇಶರ ನೀಲುವಿನ ಸರಳ ಸುಂದರ ಕವನಗಳು ಓದಿದಾಗೆಲ್ಲ ಮನವ ತಣಿಸುವವು...ಅವಳ ಆಕರ್ಷಕ ಯೌವ್ವನ
ತಾಯಿಯಲ್ಲಿ ಆತಂಕ
ಅಜ್ಜಿಯಲ್ಲಿ ನಿಟ್ಟುಸಿರು
ಮತ್ತು ಇಡೀ ಕೇರಿಯಲ್ಲಿ
ಉಲ್ಲಾಸ ಮೂಡಿಸಿತು
```````````````````````````````
ನನ್ನ ಚೆಲುವನೊಂದಿಗೆ
ನೋಡಿದ ತಾವರೆಕೆರೆ
ಈಗ ಒಬ್ಬಳೇ ನೋಡುವಾಗ
ನೀರು ತುಂಬಿದ ಕಣ್ಣಿನಂತೆ
ಕಾಣುವುದು.
~~~~~~~~~~~~~~~~~~~
ಗಂಡಿನ ಖಡ್ಗ, ಬಂದೂಕು
ಬಾಂಬ್ ಗಳೆಲ್ಲ
ನನ್ನೆದುರು ತಣ್ಣಗಾಗಿ
ಹಬ್ಬ ಆಚರಿಸುವುವು.
``````````````````````````````
ಚೆನ್ನಮಲ್ಲಿಕಾರ್ಜುನನನ್ನು
ಕುರಿತು ಹಾಡಿದ ಅಕ್ಕನ
ಹಾಡಿನ ಮುಂದೆ
ನನ್ನ ಕವನಗಳೆಲ್ಲ
ಮಿಣುಕು ಹುಳುಗಳು ಮಾತ್ರ.
ಈಶ,
ReplyDeleteನೀಲುವೆಂಬ ಬೆಚ್ಚನೆಯ ವಿಸ್ಮಯವನ್ನು ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದ.ಲಂಕೇಶರ ಶಿಷ್ಯಕೋಟಿ(ಕೋತಿ)ಯಲ್ಲಿ ನಾನೂ ಒಬ್ಬಳು. ನನ್ನ ಕಾಲೇಜು ದಿನಗಳಲ್ಲಿ ಲಂಕೇಶ್ ಹೇಗೆ ಆವರಿಸಿಕೊಂಡಿದ್ದರು ಎಂಬುದು ನೆನೆದರೆ ರೋಮಾಂಚನವಾಗುತ್ತೆ.ಹಳೆಯದನ್ನು ಗೆಳೆಯರೊಬ್ಬರಿಗೆ ಕೊಟ್ಟಿದ್ದರಿಂದ ಈ ದಿನವಷ್ಟೆ ಅವರ 'ಹುಳಿಮಾವಿನಮರ'ವನ್ನು ಮತ್ತೊಮ್ಮೆ ಕೊಂಡುತಂದೆ. ಯಾಕೋ ಎಷ್ಟೇ ಪ್ರಯತ್ನಪಟ್ಟರೂ ಲಂಕೇಶರ ಬಗ್ಗೆ ಅಸಡ್ಡೆಪಡುವುದು ಮಾತ್ರ ಸಾಧ್ಯವಾಗಲೇ ಇಲ್ಲ!!
ಬಹುಷಃ ಎಲ್ಲರಿಗೂ ಆಗಿರುವಂತೆ, ನನ್ನ ಭಾವಕೋಶದ ವಿಸ್ಮಯದ ಭಾಗ ಈ ಲಂಕೇಶ್ - ಈ ನೀಲು.
ನೀಲುವನ್ನು ನೆನಪಿಸಿ ಒಳ್ಳೆಯ ಗೆಳೆಯರಾಗಿದ್ದಕ್ಕೆ ಧನ್ಯವಾದ !.. :-)
tumbaa chennagide
ReplyDeletenenapisiddakke thanks
nice\
ReplyDeletesitaram
chendavaada kavite.
ReplyDeletemattashtu neelu padya hanchikolli....plzzzzzzzzzzzz
ReplyDelete