Wednesday, August 31, 2011

ಸ್ಪರ್ಶ..ಮೌನ!


ಕಾಯುವ ಹಪಾ ಹಪಿಯಲ್ಲೇ

ದಿನ ದೂಡುವ ಬದುಕಿಗೆ

ಇನ್ನಾವ ಹೊಸ ಅರ್ಥವನ್ನು

ನೀಡುವ ಹುಚ್ಚುತನ ನನ್ನಲ್ಲಿ ಉಳಿದಿಲ್ಲ!
~~~~~~~~~~~~~~~~~~

ನನ್ನವರ ಕಂಡಾಗ

ಅವರ ಮುಖದಲಿ

ಹೊಳೆವ ಸ್ವಚ್ಛಂದ ನಗುವಿನ

ಚೈತನ್ಯ ನನ್ನ ಸ್ವಾತಂತ್ರ.
~~~~~~~~~~~~~~~~~

ನದಿಯ ದಡದಲಿ ನಿಂತ

ಏಕಾಂತದಲಿ ನನ್ನ ಕೂಡಿದ

ಹಕ್ಕಿ ನುಡಿಯಿತು;

ನಿನ್ನ ಹಾಗೇ ನನಗೂ

ಇದುವೇ ಜೀವನ, ಇದರಲ್ಲೇ ಬದುಕು!
~~~~~~~~~~~~~~~~~
ಆವರಿಸಿದ್ದ ಮೌನದ ನಡುವೆ

ಮಾತನಾಡಿದ್ದು ಮಾತ್ರ

ಸ್ಪರ್ಶ!



6 comments:

Badarinath Palavalli said...

ಒಳ್ಳೆಯ ಕವನಕ್ಕೆ ಅರ್ಥಗರ್ಭಿತ ಚಿತ್ರ.

ನೂರು ವೀಣೆಗಳ ಮೀಟು ರಾಗದಂತಹ ಭಾವನೆಗಳ ಪುಂಜ ಈ ನಿಮ್ಮ ಕವನ.

ಭೇಷ್!....

ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ.
www.badari-poems.blogspot.com
www.badari-notes.blogspot.com
www.badaripoems.wordpress.com

savitha said...

dear friend,
kaayuvude badukaagiruvavara chitrana tumba chennagide. Write more and more good poems. GOOD LUCK.

Anonymous said...

ಈಶ,
ನಿನ್ನ ಕವನ ತುಂಬಾ ಚೆನ್ನಾಗಿದೆ. ಹೀಗೆಯೇ ಬರೆಯುತ್ತಿರು. PRS.

ALL IN THE GAME said...

ಕಳೆವುದು ಜೀವ
ಕಾಯುವುದು ನಮ್ಮ ಕಲ್ಪನೆ
ಹುಚ್ಚುತನ?
ಇಲ್ಲದಾರ್ಥಗಳ
ನೀಡಹೋದಾಗಲ್ಲವೆ ಅಪಾರ್ಥ ಪಾರ್ಥ
ಹಕ್ಕಿಜೊತೆಯಲಿರಲು ನೀ ನಲ್ಲ
ಏಕಾಂಗಿ
ಆದುದರಿಂದಲೇ ಉಲಿ(ಳಿ)ದಿಹುದು ಸ್ಪರ್ಶ

ಚರಿತಾ said...

ಈಶ,
ಸರಳ, ಸ್ವಚ್ಛಂದ ಕವನಗಳು..
ಕಮ್ಮಿ ಶಬ್ದಗಳಲ್ಲಿ ವಿಸ್ತೃತ ಅರ್ಥ ಹಿಡಿದಿದ್ದೀರಿ. ಓದಿ, ಖುಶಿಯಾಯ್ತು.

ರವಿ ಮೂರ್ನಾಡು said...

ಚೆಂದದ ಕವಿತೆ ಮತ್ತು ಭಾವ ಪಕ್ವತೆಯಿಂದ ಕೂಡಿದೆ ಅಂತ ಸಂತಸ ಪಡುತ್ತೇವೆ. ಅಭಿನಂದನೆಗಳು