Sunday, October 2, 2011

ಶಿಖರವನೇರುತ...

ಶಿಖರವನೇರುತ...

ತುಂಗ ಉತ್ತುಂಗವ ಆವರಿಸಿ
ಮುಗಿಲ ಮುತ್ತಿಕ್ಕುವ ತವಕದ
ವನಸಿರಿಯ ಹಬ್ಬಿತಬ್ಬಿಹ
ಮುತ್ತ ಹನಿಯ ಚಿರ ಜಳಕದಲಿ
ತೊನೆಯುತ ಹಸಿರ ಚಿಮ್ಮುವ
ಮಬ್ಬು ಕಾನನದ ನೀರವದಲಿ

ಅಲೆಮಾರಿಯ ಅಸ್ಪಸ್ಟ
ಹೆಜ್ಜೆಗುರುತುಗಳು
ಮೆದು ನೆಲದಮೇಲೆ
ಅಸಂಬದ್ದ ಚಿತ್ರವ
ಮೂಡಿಸುತ
ಕವಿದ ಮೋಡದೊಳಗಣ
ಹಾದಿಯ ಹರಸುತ
ಶಿಖರದೆತ್ತರವ ಏರುತ ಏರುತ
ಮನ ನಿರಾಳ,ನಿರ್ಮಲ
ಹಗುರತೆಯ ಧನ್ಯ ಭಾವವ
ಸ್ಪುರಿಸಲು, ನಿಸರ್ಗದೊಡಲ
ಅನಪೇಕ್ಷಿತ ಮಮಕಾರವು
ಎನ್ನ ಸ್ಮೃತಿಯ ಕಾನನವ
ಆವರಿಸಲು;ಜೀವವು
ಗರಿಕೆಯ ಕುಡಿಯಂತೆ ತೃಣವು.


ತನುಮನ ತನ್ಮಯವು
ಪ್ರಕೃತಿ ಸೊಬಗ ರಸಜೇನ
ಸವಿಯಲು;ನನ್ನ ಕಣಕಣವು
ಲೀನವು ಪ್ರಕೃತಿ ಪರಬ್ರಮ್ಹನ
ಸಮಷ್ಟಿಯೋಳು.


ದಿಗಂತ ಮೀರಿದ ಭುವಿಯೊಡಲ
ಹರವನೇರಿ, ನೆಲಮುಗಿಲ
ಸಮಾಸಮದ ಅನನ್ಯ
ವಿಸ್ಮಯದೊಳಗಿನ ಬಿಂದು
ಭವಬಂಧನದೀ ಜೀವವು .
ಎಚ್ .ಎನ್. ಈಶಕುಮಾರ್

4 comments:

Badarinath Palavalli said...

ಶಿಖರ ಏರುತ ಏರುತ, ನಮ್ಮ ಅಹಂನ ಸ್ವವಿಗ್ರಹ ಕರಗಲು ಆರಂಭಿಸುತ್ತದೆ. ಪ್ರಕೃತಿಯ ರುಧ್ರ ರಮಣೀಯತೆ ಮುಂದೆ ನಾವೆಷ್ಟು ಕುಬ್ಜರೂ ಎಂಬ ಆರಿವಾಗುತ್ತದೆ.

ಉತ್ತಮ ಕವನ ಮತ್ತು ಸುಲಲಿತ ಭಾಷೆ. ಭೇಷ್!...

ನನ್ನ ಬ್ಲಾಗುಗಳಿಗೆ ಬನ್ನಿರಿ:
www.badari-poems.blogspot.com
www.badari-notes.blogspot.com

ಚರಿತಾ said...

ಈಶ,
ನಿಸರ್ಗದ ಒಡಲು ಯಾವತ್ತಿಗೂ ಮಮತಾಮಯಿ.
ಅದರ ಒಡನಾಟ ನಿಮಗೆ ಒದಗಿಸಿದ ವಿಸ್ಮಯ,ಧನ್ಯತೆ ಮತ್ತು ಆಧ್ಯಾತ್ಮ..ಇಲ್ಲಿ ಪದಗಳಾಗಿ ಒಡಮೂಡಿವೆ.
ನಿಮ್ಮ ಕಾವ್ಯ, ಭಾಷೆ ಪಕ್ವಗೊಳ್ಳುತ್ತಿರುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ.
ಕವನಕ್ಕಾಗಿ ಧನ್ಯವಾದ ಮತ್ತು ಅಭಿನಂದನೆಗಳು.

ಸೀತಾರಾಮ. ಕೆ. / SITARAM.K said...

ಅಲೆಮಾರಿಯ ಮಹಾಪ್ರಸ್ಥಾನ ಅದ್ಭುತವಾಗಿದೆ...

ALL IN THE GAME said...

Esh poem wins as individual stanzas and fails as whole. It seems u have joined few small poems written at different times probably