ನೆನಪ ಯಾತ್ರೆಯಲಿ ನಡೆವ
ಪಕ್ಕದಲಿ ಕೂತು ತೂಕಡಿಸಿದೆ
ಮೌನ ಜಾರಿದೆ ಆ ಪರಿ
ನೀ ನಕ್ಕ ರೀತಿಗೆ
ಯಾತಕು ಖಾತರಿ ಇಲ್ಲ ನನ್ನೆದೆಯಲಿ!
ನಿನ್ನ ಹೊರತಾಗಿ
ಬದುಕುವ ಬದುಕಿಗೆ
ನೂರು ವರುಷ ಸರಿದರೂ
ವಸಂತದ ಒಂದು ಸಂತಸವಿಲ್ಲ!
ಕ್ಷಣ ಮಾತ್ರದ ಜಾತ್ರೆ ನಮ್ಮದಾಗಲಿ!
ಸೊಬಗ ಸುರಿವ ಹೂದೋಟದಲಿ
ನಲಿವ ಒಂದು ಹೂ ನಮ್ಮದಾಗಲಿ!
ದೇವರ ದಯೆ ಇರಲಿ ನೀ ನಿನ್ನವರ
ನೆನೆವಾಗ ಆ ನೆನಪ ರಸಸಾಗರದಲಿ
ನನ್ನದೊಂದು ಹೆಸರಿರಲಿ!
~~~~~~~~~~~~~~~~~~~ಪಕ್ಕದಲಿ ಕೂತು ತೂಕಡಿಸಿದೆ
ಮೌನ ಜಾರಿದೆ ಆ ಪರಿ
ನೀ ನಕ್ಕ ರೀತಿಗೆ
ಯಾತಕು ಖಾತರಿ ಇಲ್ಲ ನನ್ನೆದೆಯಲಿ!
ನಿನ್ನ ಹೊರತಾಗಿ
ಬದುಕುವ ಬದುಕಿಗೆ
ನೂರು ವರುಷ ಸರಿದರೂ
ವಸಂತದ ಒಂದು ಸಂತಸವಿಲ್ಲ!