ದಾರಿಯಲ್ಲಿ ಉಳಿದಿಹ
ಒಂಟಿ ಹೂವ ಮೇಲಿನ
ಇಬ್ಬನಿಗೆ ನಾಚಿದ
ಗುಬ್ಬಿ ಮರೆತು ಕೂತಿದೆ
ತನ್ನ ಗೂಡನು...
***************************
ಸೋತರು ಜೀವ ನಿನ್ನ
ಎದೆಯಲಿ ಉಳಿದಿಹ
ಮೋಹಕೆ ಬಲೆಯ
ಬೀಸಿ ಕಾದೆ.
ದಾರಿ ಬದಿಯಲಿ
ಹೂ ಮಾರುವ ಹುಡುಗನ
ಕೈಗೆ ಹತ್ತಿದ
ಪರಿಮಳ ಸೋಕಲು
ಮನಕೆ ಮತ್ತೆ ನಿನ್ನದೇ
ಸ್ಪರ್ಶದ ನೆನೆಪು...
*************************
ಭಾವಕೆ ನಿಲುಕಿ
ಪದಗಳಿಗೆ ಸಿಗದ ಅನನ್ಯೇ
ಕಾಮನಬಿಲ್ಲ ಮೋಹಿಸಿ
ಸೋತರು ಉಳಿದಿಹ
ಛಾಯೆಗೆ ನೂರು ಬಣ್ಣ....
***************************
1 comment:
ಉಳಿದಿಹ ಛಾಯೆಯ ಪರಿಮಳವನ್ನು ಅತ್ಯುತ್ತಮವಾಗಿ ಮೂದಿಸಿದ್ದೀರಿ. ಕವನದ ಭಾವ ತೀವ್ರತೆ ಮತ್ತು ಗುಬ್ಬಿ ಪ್ರತಿಮೆ ನನಗೆ ಮೆಚ್ಚಿಗೆಯಾಯಿತು.
ನನ್ನ ಬ್ಲಾಗಿಗೂ ಬನ್ನಿ ಸಾರ್.
Post a Comment