ನದಿಯ ಹರಿವು
ಆ ದಡ ಈ ದಡಗಳ
ನಡುವೆ ಜೀವಂತ
ಬದುಕು ಹರಿವ ಪ್ರೀತಿಯಲಿ
ನಿನ್ನೊಡಲಾಳದ ಎಳೆಯ
ಸೆಳೆತದಲಿ ಬೆಸೆದ ಮೋಹಕೆ
ತವಕ ಕೂಡಲು.
ಕೂಡುವ ಬಯಕೆಯ ನಡುವೆ'
'ಚಂದಿರ'ನ ಬಿಂಬ
ಅಲೆಯಲಿ ಇರುಳೆಲ್ಲ ಹುಣ್ಣಿಮೆ.
ಹಾಯುವ ತಂಗಾಳಿಯ ಮಾತು
ಆಲಿಸುವ ದಡದ ಹೆಬ್ಬಂಡೆಗೆ
ಮುನಿಸು ನಿಂತ ನಿಲುವಲ್ಲೆ
ತಾಕಿ ಹೋಗುವ ಅಲೆಯ ಸಪ್ಪಳಕೆ
ಕಾಯುವ ದಂಡೆಯ ಹೆಮ್ಮರ
ಮಣ್ಣು ಜಾರಿದ ಬೇರಿನ ನಂಟು
ಅರಸಿ ಬಂದ ಎಲೆ ಸೋಲುತಿಹುದು
ಹರಿವ ಮೋಹಕೆ
ನದಿಯ ಸೆಳೆತಕೆ....
6 comments:
ee kavanadalli jeevantike ide ಅಲೆಯಲಿ ಇರುಳೆಲ್ಲ ಹುಣ್ಣಿಮೆ.nice line all the best eesha avare
ಅಲೆಯಲಿ ಇರುಳೆಲ್ಲ ಹುಣ್ಣಿಮೆ.
ಮುನಿಸು ನಿಂತ ನಿಲುವಲ್ಲೆ
ತಾಕಿ ಹೋಗುವ ಅಲೆಯ ಸಪ್ಪಳಕೆ
ee saalugalu manamohaka
ಮನೋಹರವಾದ ಕವನ ಸಾರ್.
ಆಹಾ!! ಏನ್ ಸೂಪರ್ ಆಗಿ ಬರೀತೀರ ಈಶ.. ಶುಭವಾಗಲಿ ನಿಮಗೆ..
ಕಿವಿಗೊಟ್ಟು ಕೇಳಬಹುದು ಅಲೆಯಲ್ಲಿ ತೇಲಿಹೋಗುವ ತೆರದಿ!
ಸೆಳೆತ ಚೆನ್ನಾಗಿದೆ.
ಮಧುರವಾದ ಅಭಿವ್ಯಕ್ತಿ.. ಎರಡು ಭಾವಗಳು ಅಲೆಗಳಲ್ಲಿ ತೇಲಿದಂತೆ ಸಿಕ್ಕವು.. ಪ್ರೀತಿ ಮತ್ತು ಪ್ರಕೃತಿಯ ಹದವಾದ ಸಮೀಕರಣ ಮತ್ತು ಪ್ರೀತಿ ಎಡತಾಕಿ ಬಂದರೂ ಗುರಿ ಮುಟ್ಟಲಾಗದ ಅಸಹಾಯಕತೆ.. ಪದಗಳ ಕೈಚಳಕದಲ್ಲಿ ಕವಿತೆ ಓದಿಸುತ್ತೀರಿ.. ಹಿಡಿಸಿತು..
Post a Comment