Sunday, August 9, 2009

ಸತ್ಯ ಮಾರಾಟಕ್ಕಿದೆ ಕೊಂಡುಕೊಳ್ಳಿ..


ನಿನ್ನ ಗಂಡನೊಂದಿಗೆ ದಾಂಪತ್ಯದ ಸಖಿಗೀತವನು ಅನ್ಯೋನ್ಯವಾಗಿ ಮದುವೆಯಾದಾಗಿನಿಂದ ಹಾಡುತಲಿದ್ದರು, ಒಮ್ಮೆಯಾದರೂ ಪರಪುರುಷನ ಸಾಂಗತ್ಯದ ಸುಖವನು ನೀನು ಬಯಸಿಲ್ಲವೇ? ಅಯ್ಯೋ! ಶಿವನೆ ಇವನಿಗೆನಾಯಿತು ಎಂದು ಗಾಬರಿಯಾಗಬೇಡಿ,ಎದುರಿಗೆ ಕೂತವಳ ಕಣ್ಣಲ್ಲೆ ಕಣ್ಣಿಟ್ಟು ಪ್ರಶ್ನೆ ಕೇಳಿದವನಿಗೆ ಎದ್ದು ಒದೆಯಲಿಲ್ಲ ಅಷ್ಟೆ.ದಂಗುಬಡಿದಂತಾಗಿ ಏನು ಹೇಳಬೇಕೋ ತಿಳಿಯದೆ ಸುಮ್ಮನೆ ಮೌನಕೆ ಶರಣಾದಳು. ಇಂತಹ ಪ್ರಶ್ನೆಗಳ ಕಾರಣಕ್ಕಾಗಿಯೇ ಇತ್ತೀಚಿಗೆ ವಿವಾದಕ್ಕೆ ಈಡಾಗಿರುವ ಸ್ಟಾರ್ ವಾಹಿನಿಯು 'ಸಚ್ ಕಾ ಸಾಮ್ನ' ಕಾರ್ಯಕ್ರಮದಲಿ ಕೇಳುವ ಪ್ರಶ್ನೆಯ ಪರಿ ಇದು.

ಇಂತಹ ವಿಭಿನ್ನ ಕಾರ್ಯಕ್ರಮಗಳನು ರೂಪಿಸುತ ಆಧುನಿಕತೆಯ ಅರ್ಥಹೀನ ನಾವಿನ್ಯತೆಯನು ಮೆರೆಯುವ ಅಮೇರಿಕಾದ ಒಂದು ರಿಯಾಲಿಟಿ ಷೋನ ಹಿಂದಿ ಅವತರಣಿಕೆಯೇ 'ಸಚ್ ಕಾ ಸಾಮ್ನ'.ಸತ್ಯವೇ ಜೀವನ ದರ್ಶನ ಎಂದ ಭಾರತೀಯರ ಸತ್ಯಕ್ಕಿಂದು 'ಮಾರುಕಟ್ಟೆ ಸಿಕ್ಕಿದೆ'.ನಮ್ಮೊಳಗಿನ ಸತ್ಯವನು ಮಾರ್ಕೆಟಿಂಗ್ ಮಾಡಿ ಹಣ ಮಾಡುವ ಸಾವಕಾಶ ನಮ್ಮನ್ನರಸಿ ಬಂದಿದೆ. ನಮ್ಮಯ ಸತ್ಯ ಪರತೆಯು ಜಾಗತಿಕ ಮಾರುಕಟ್ಟೆಯಲಿ ಬಿಕರಿಗಿರುವ ವಸ್ತುವಾಗಿರುವುದು, ವಿಪರ್ಯಾಸವೋ? ವಿಚಿತ್ರವೋ? ಸಂತಸದ ಸಂಗತಿಯೋ ನನಗಂತು ತಿಳಿಯದಾಗಿದೆ.

ಮಾನವನ ಭಾಷ ಸಾಮರ್ಥ್ಯದ ನಿಲುಕುಗಳ ಬಗ್ಗೆಯೇ ಸೋಜಿಗವೆನಿಸುವುದು.ಇಂದಿನ ಪರಮ ಪಾಪಿಗಳ ಲೋಕದಲ್ಲಿ ನಿಷ್ಠಾವಂತ ಮುಕ್ತ ಮನಸಿನ ಸಾಧುವು ಸಹ ತನ್ನ ತೀರ ಖಾಸಗಿ ಎನಿಸುವ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನು ಜಗಕೆ ತಿಲಿಸಲಿಚ್ಚಿಸುವುದಿಲ್ಲ.ಪ್ರತಿಯೊಬ್ಬನು ತನ್ನಯ ಒಂದಾದರೂ ವ್ಯಕ್ತಿತ್ವವನು ಸಾರ್ವಜನಿಕ ದೃಷ್ಟಿಯಿಂದ ದೂರವಿರಿಸುತ್ತಾನೆ.ಮಾತಿನ ಚತುರತೆಯಲ್ಲೇ ಆ ದ್ವಂದ್ವತೆಯ ಸಂಕಿರ್ಣತೆಯನ್ನು ಜೀವನವಿಡಿ ನಿಭಾಯಿಸಿಕೊಂಡು ಕಾಪಾಡಿಕೊಳ್ಳಬಲ್ಲ ಚತುರನಿಗಿಂದು ಸತ್ಯವನು ಹೇಳುವುದೇ ಒಂದು ಸಾವಲು.

ಅರೇ ಸತ್ಯವನು ಹೇಳೋದು ಅಷ್ಟು ಕಷ್ಟವೇ,ಎಂತಹ ಹೀನಾಯ ಸ್ಥಿತಿಗೆ ತಲುಪಿದೆವು ನಾವೆಲ್ಲಾ ಅನ್ನೋ ಮರುಕ ಹುಟ್ಟುವ ಸಂಧಿಗ್ಧತೆಯಲಿದ್ದೇವೆ ನಾವೆಲ್ಲಾ. ತನ್ನ ಮನದ ಉಗ್ರಾಣದಲಿ ಅವಿತಿರುವ ಕಳ್ಳಸತ್ಯವನು ಸಾರ್ವಜನಿಕಗೊಳಿಸಲು ಇಂದು ಎದೆಯಲಿ ಕಲ್ಲಿನಂತ ಗುಂಡಿಗೆಯೇ ಇರಬೇಕು.ಪ್ರತಿ ಸತ್ಯಕು ಮಾರುಕಟ್ಟೆಯಲಿ ಮೌಲ್ಯವಿರುವುದರಿಂದ,ಸತ್ಯ, ವಸ್ತುನಿಷ್ಟವಾಗಿರಬೇಕು,ಜಗಕಲ್ಲ ಅಲ್ಲಿ ಕಾರ್ಯಕ್ರಮದಲಿ ಅಳವಡಿಸಿರುವ ತಂತ್ರಜ್ಞಾನಕೆ.ಏಕೆಂದರೆ ನಿಮ್ಮ ಉತ್ತರದಲ್ಲಿ ಅಡಗಿರುವ ಸತ್ಯ ಸುಳ್ಳುಗಳ ಪಾರಮರ್ಶೆ ಇಲ್ಲಿ ನಿಮ್ಮ ಅಂತರಾತ್ಮ,ದೇವರುಗಳ ಮೆಲೆ ಅವಲಂಬಿತವಾಗಿಲ್ಲ ಬದಲಿಗೆ ನಿಮಗೆ ಅಳವಡಿಸಿದ ತಂತ್ರತೆ ಮೇಲಿದೆ. ಯಂತ್ರ ಅನುಮೊದಿಸಿದರಷ್ಟೇ ನಿಮ್ಮ ಮಾತು ಸತ್ಯವಾಗುವುದು, ಇಲ್ಲವಾದಲ್ಲಿ ನೀವು ಹೇಳಿದ ಸತ್ಯವು ಸುಳ್ಳೇ. ಹಣ ಬೇಕಾದರೆ ಯಂತ್ರ ಸರಿ ಎನುವ ಸತ್ಯ ಹೇಳಬೇಕಾಗಿದೆ. ಕಾರಣ ಇದು;

"ಸತ್ಯ ಮೇವ ಜಯತೆಯ ಕಾಲವಲ್ಲ,
ಸತ್ಯ ಮಾರುವ ಜನತೆಯ ಕಾಲ".

ನಾನು ಸತ್ಯವನ್ನೇ ಹೇಳುತ್ತೇನೆ,ಸತ್ಯವನಲ್ಲದೆ ಬೇರೇನನ್ನು ಹೇಳುವುದಿಲ್ಲ .......ನಗು ಬಂದರೆ ನಕ್ಕು ಸುಮ್ಮನಾಗಿಬಿಡಿ.

ನನ್ನ-ನಿನ್ನ ನಡುವಿನ(ಅರ್ಧ)ಸತ್ಯ

ದಿಟ್ಟಿಸುವ ಕಣ್ಣಿನಲ್ಲಿನ ಸೂಜಿಮನೆಯ
ಹರಿತಕೆ ಮನದಲೇನೋ ದಡಗುಡಿಸಿ
ಮುಚ್ಚಿದ ಕಣ್ಣರೆಪ್ಪೆಗೆ ಅರಿವಾಗಿ ಪ್ರಶ್ನೆಯ
ಮೊನಚು ಮರೆಮಾಚಿಸಲೊಮ್ಮೆ
ಸುತ್ತಲಿನ 'ಬೆಳಕ'
ಒಳಗಿನ ಅಳುಕು, ಕಣ್ಣ ಭಾಷೆಯಲು
ಹರಿಯದಿರಲಿ ರೆಪ್ಪೆಯ ಎಲ್ಲೇ ಮೀರಿ
ಎಂಬ ಮತಿಯ ಲೆಕ್ಕಚಾರವನು
ಗುಣಿಸುವಲಿ ಸೋತು ಕಂಗಳಲಿ
ಹೊಮ್ಮುವ ತೆರೆ
'ಅರ್ಧಸತ್ಯ'.


ಇದು ರಾಮ,ಕೃಷ್ಣರ ಧರ್ಮ ಸೆರೆಯಲ್ಲ
ಹರಿಶ್ಚಂದ್ರನ ಸತ್ಯ ಪರಿಪಾಲನ ಪ್ರಜ್ಞಾವಿಧಿಯಲ್ಲ
ಗಾಂಧೀ,ಪರಮಹಂಸರ ಸತ್ಯಾನ್ವೇಷಣೆಯ
ಪರಿಯೂ ಅಲ್ಲ, ಸತ್ಯವೇ ನಮ್ಮ ತಂದೆ-ತಾಯಿ
ಎಂದ ಪುಣ್ಯಕೋಟಿಯ ನೀವೆದನೆಯಲ್ಲ,
ಇದು ನನ್ನ-ನಿನ್ನ, ಆತ್ಮ-ಪರಮಾತ್ಮನ ನಡುವಿನ
ಬಿಂದುವಿನಂತರ
"ಸತ್ಯವೇ".
ಎಚ್.ಎನ್.ಈಶಕುಮಾರ್.

8 comments:

sunil kumar said...

ನವರಂಗಿ ಆಟವಾಡುವ ಈ ಹೈ ಟೆಕ್ ಜನರಿಗೆ "ಪುಣ್ಯಕೋಟಿ" ಎಂಬ ವ್ಯಾಕರಣವನ್ನು ತಮ್ಮ ಇಡಿ ಜೀವನದಲ್ಲೇ ಕೇಳಿದಾರೋ ಇಲ್ಲವೋ . ಆದಿರಲಿ ಸತ್ಯ ಮೇವ ಜಯತೆ ಎಂದು ಬೋದಿಸುವ ನಮ್ಮ ನ್ಯಾಯವಾದಿಗಳ ಮಾತೆ ಇಂದು ಸತ್ಯಕ್ಕೆ ಬಹಳ ದೂರವಾಗಿದೆ. ಇದು ನಮ್ಮ ದೇಶದ ವಾಸ್ತವಿಕ ಸ್ಥಿತಿ.

udaya said...

ಸತ್ಯಕಿಂಥ ಸಿಹಿಯಾದ ಸುಳ್ಳೇ ಹಿಥವಾದದ್ದು... ಮಾಡ್ರನ್ ಕಾಲದಲ್ಲಿ ಸತ್ಯ ಹೇಳಿ ದುಡ್ಡು ಮಾಡಬಹುದು.. ಹೈ-ಟೆಕ್ ಸಿಟಿ ಹೈ-ಟೆಕ್ ಸಂಸ್ಕೃತಿ... ಸತ್ಯ ಹೇಳಿ ದುಡ್ಡು ಮಾಡಬೇಕಾದ್ದೇ ಸರಿ..

bilimugilu said...

nimma maatu tumbaa nija esha, i was watching the program yesterday and remembered every bit of your words. maaraatakkitta sathya.... 11 prashnegalige spardhi heLutiruvudu sathyavendu teerpu kotta yantra, 12ne prashnege sullendu heLitu. Duddu kaLedukonda spardhi - 11 prashnegaLalli tanna jeevanada guttannu prapanchada munde heLikondidda!!! vichitra, viparyaasa ....

ಸೀತಾರಾಮ. ಕೆ. / SITARAM.K said...

ನೈಜ್ಯ ಪ್ರದರ್ಶನ "ಸಚ್ ಕಾ ಸಾಮ್ನ" ದ ಒಳತೋಟಿಯನ್ನು ತು೦ಬಾ ನವಿರಾಗಿ ನಿರೂಪಿಸಿರುವಿರಿ. ಸತ್ಯಾಸತ್ಯತೆಗಳ ತರ್ಕ ತು೦ಬಾ ಪುರಾತನವಾದುದು. ಮನವೆ೦ಬ ಮರ್ಕಟ ತೊನೆದಾಡುವ ರೆ೦ಬೆಕೊ೦ಬೆಗಳನ್ನು ಸತ್ಯಾಸತ್ಯತೆಗಳ ಮೂಸೆಯಲ್ಲಿ ಮರ್ದಿಸುವಾಗ ಹಾಲು ಬರಬಹುದು ಹಾಲಾಹಲವು ಬರಬಹುದು. ಯಾವುದು ಬ೦ದರು ಸ್ವೀಕರಿಸಿ ಹಣ ದೊಚುವ ಎದೆಗಾರಿಕೆ ಇದ್ದರೆ ಸಾಕು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು. ಸಾರ್ವತ್ರಿಕ ಸತ್ಯ ಜಗದಲ್ಲಿ ಇಲ್ಲ. ಸತ್ಯದ ಪರಿಧಿ - ಸಾ೦ಧರ್ಭಿಕ, ಸಮಯ, ವ್ಯಕ್ತಿ ಮತ್ತು ಸ್ಥಳಕ್ಕನ್ನುನುಗುಣವಾಗಿ ನಿರ್ದೇಶಿಸಲ್ಪಡುತ್ತದೆ. ಅ೦ದರೆ ಒಬ್ಬ ವ್ಯಕ್ತಿಯ ಸತ್ಯ ಇನ್ನೊಬರ ಮಿತ್ಯ. ಈಗಿನ ಸತ್ಯ ಸ್ವಲ್ಪ ಸಮಯದ ನ೦ತರ ಮಿತ್ಯ. ಈ ಸ್ತಳದ ಸತ್ಯ ಇನ್ನೊ೦ದೆಡೆ ಮಿತ್ಯ. ಹೀಗೆ ಸತ್ಯದ ಪರಿಮಿತಿ ಬದಲಾಗುತ್ತ ಹೋಗುವದರಿ೦ದ ಸಾರ್ವತ್ರಿಕ ಸತ್ಯ ಕೈಗೆಟುಕುವದಿಲ್ಲ.

ಶ್ರೀನಿವಾಸಗೌಡ said...

olle subect tagondiddiya... barabarutaa ninna barhagalu prabhuddavaagta ive.. keep writing. wat next..?

kavya H S said...

Naanu aa program nodilla adare baraha nodi adara bagge tilitu matte baraha chennagi moodi bandide.Nanna prakara tanna tanavannu maarikolluvava manukuladinda aache iruttanendu artha.A programenalli bhaagavahisuvavara manassu adegiruttado I cant imagine. All the best for next writing.

Anonymous said...

nimma abhiprayagalu nannataha halavaru janara manadaalada maataagide
"saavira sullu heli maduva maadu" emba gaadeye ide allave??..!!!..
kelavu sala bhaandavyagalalli supta vishayagalannu agocharavaagi iduvude olitaagirutade..
aadare intaha "reality show"nalli kaanchaanakagi polygraphy test mulaka tamma satya-asatyagalannu jagattige saadhisuvudu eshtu samanjasa..??illi namma antaraalada pisumatige,manasaakshige yava mahatvave illa allave..??
Bhandarante (kaanchanakkagi) dooradarshanadalli tamma satya-sandhategalannu pradarshisuvudu "mukha mele maadi ugulikondante" aaguvude horatu mattinnenalla!!
-
PRAJGNAMALA

Unknown said...

hi naanu ninge e vishayada bagge blog alli yake baribardu anta helana anta idde ashtralli satya maratakkide anta title na mail bantu. nijavagalu olle topic, a program naanu nodidini, tumba himse agutte. satyada mulaka jivanavanne maraatakke itta haage kansutte. haage ninna ardha satyada kaviteya modalane part nange tumba ishta aytu. good esha go ahead.
Maanasa