Monday, August 24, 2009

ಕವಿತಾ ಗುಚ್ಛ...


ಕವಿತೆಗಳ ಓದಲು ನನಗೆ ಇನ್ನಿಲ್ಲದ ಬಯಕೆ ,ಅದರ ನವಿರುತನ, ಲಾಲಿತ್ಯ ನನ್ನನ್ನೇ ಮರೆಯುವಂತೆ ಮಾಡುತ್ತವೆ.ಕವಿತೆಯ ಕೆಲವೇ ಪದಗಳು, ಸಾಲುಗಳು ಹಿಡಿದಿಡುವ ಭಾವನೆಗಳು ಅಪಾರ.ಎರಡೇ ಸಾಲಿನ ಕವನ ಜೀವನದ ಶ್ರೇಷ್ಟತೆಯನ್ನೋ, ನಶ್ವರತೆಯನ್ನೋ, ಪ್ರೀತಿಯ ಆಗಧಾತೆಯನ್ನೋ, ಮೋಹಕವನ್ನೋ, ವಿರಹದ ಬೇಗೆಯನ್ನೂ, ಏಕಾಂಗಿಯ ಬೇಸರವನ್ನೂ, ಇನ್ನಾವುದೋ ಸಂಸಾರದ ಸಾರವನ್ನೋ ಮನವನು ತಟ್ಟುವಂತೆ ಹೇಳಿಬಿಡುತ್ತವೆ. ಅಂತಹ ಯಾವುದೇ ಕವಿಯ ಸೃಜನತೆಯ ಬಗೆಗೆ ನನಗಿನ್ನೂ ಕೌತುಕತೆ ಇದೆ.ಇಂದಿಗೂ ಯಾವುದೇ ಹಿರಿಯ-ಕಿರಿಯ ಕವಿಯ ಅಚ್ಚರಿಯ ಕವನದ ಸಾಲುಗಳನು ಓದಿದಾಗಲೂ ನನ್ನಲ್ಲಿ ಹುಟ್ಟುವ ಪ್ರಶ್ನೆ ಎಂದರೆ 'ಅಬ್ಬಾ!ಈ ಸಾಲುಗಳು ಆ ಕವಿಮನಸಿಗೆ ಹೇಗೆ ಒಲಿದವು ಎಂದು'.ಕವಿಯ ತಪಕ್ಕೆ ಒಲಿವ ವರದಾನ ಕವನ, ಮಗ್ನತೆ ಇದ್ದಾಗ ಮಾತ್ರ ಭಾವದಲೆಗಳು ಸೊಗಸಾಗಿ ಮೂಡುವವು.ಸುಮ್ಮ ಸುಮ್ಮನೆ ಜಾಳು ಜಾಳಗಿ ಬರೆದರೆ ಕವನವಾಗುವುದಿಲ್ಲ ಎಂಬುದು ನನ್ನ ನಂಬಿಕೆ. "ಕಪ್ಪೆ ಚಿಪ್ಪಿನಲ್ಲಿ ಅವಿತು ಮುತ್ತಾಗುವ ಹಾಗೇ ಸ್ವಾತಿಯ ಮಳೆ ಹನಿ...ಬಳ್ಳಿಯಲಿ ಮೊಗ್ಗಾಗಿ ತಾನಾಗಿ ಅರಳುವ ಹೂವಿನಂತೆ, ಸುಂದರವಾದ ಮನದ ಪದ ಗುಚ್ಛವು ಕವಿತೆಯು".
ನನ್ನ ಕೆಲವು ಕವಿತಾ ಗುಚ್ಛಗಳನು ನಿಮ್ಮ ಓದಿಗೆ,ಪ್ರತಿಕ್ರಿಯೆಗೆ ಹಾಕಿದ್ದೇನೆ, ಓದಿ ಆನಂದಿಸಿ ಹಾಗೇ ನಿಮ್ಮ ಮಾತುಗಳು ನನ್ನ ಎಚ್ಚರಿಸಲಿ ಸ್ನೇಹಿತರೆ..ಓದಲು ಅಣಿಯಾಗಿ..

ಕವಿತಾ ಗುಚ್ಛ.

ಅರಿಯದೆ ಆದ ಪ್ರಮಾದಕೆ ಮನ
ಬಿರಿಯುವ ಮೌನವೇಕೆ?ತೊರೆದು ಹೋಗಿಬಿಡು
ಅಳಿಸಿಹಾಕಿ ಮನದ ಹೂ ಹಾಸಿನ ಮೇಲಿನ
ನೆನಪಿನ ಮಧುವ,ಇಲ್ಲವೇ ಒಮ್ಮೆ ಮರೆತುಬಿಡು
ಆದ ಪ್ರಮಾದವ ಉಳಿಸಿಬಿಡುವೆ ಜೀವಮಾನ
ನಿನ್ನ ಹಸಿ ಹಸಿ ಆರದ ಪ್ರೀತಿಯಲಿ....ಗೆಳತಿ.

ಮಳೆಯಲಿ ನೆನೆವ ಆ ರೋಮಾಂಚನದಲಿ
ಸಿಂಗಾರಗೊಂಡು ಮೆದುವಾಗಲು ಇಳೆ
ನಿನ್ನ ಕಾಲ ಹೂ ಸ್ಪರ್ಶಕೆ ಗಡಿಬಿಡಿಯ
ಚಿತ್ತಾರ ಮೂಡಲು ನನ್ನ ಮನದಲಿ
ಹುಚ್ಚೆದ್ದ ನವಿಲ ವಯ್ಯಾರವು.

ನಿನ್ನೆಡೆಗೆ ಸೆಳೆವ ಹುಚ್ಚು ಮೋಹವನು
ಮನದಲೆ ತಣಿಸಲೇ ಸೋತು, ಹರಿಯಲು
ಬಿಟ್ಟ ಹುಚ್ಚು ಹೊಳೆಯಲಿ ಕೊಚ್ಚಿ ಹೋದವಲ್ಲೇ
ನನ್ನ ಹರೆಯದ ದಿನಗಳು. ಈಗಲೂ ಕೆಟ್ಟ
ನೆನಪಲೆ ನನ್ನ ಜೀವ ಜೀಕಾಟ...ಒಲವು
ಸುಂಕ ಕಟ್ಟೆಯೇ ಅಲ್ಲವೇ?

ಅವನ ಕೈಸೆರೆಯಲಿ ಬೆಚ್ಚನೆ
ಪ್ರೀತಿಯ ಹವಣಿಸುತ ಬಂದ
ಪ್ರೇಮ ಪಕ್ಷಿಯ ಮುಕ್ತವಾಗಿಸುವ
ಹುಂಬ ತವಕದಲಿ ಹಾರಿಬಿಟ್ಟ
ಹಕ್ಕಿಯ ಸ್ವಚ್ಚಂದ ಹಾರಾಟವನು
ಆನಂದಿಸಲಾಗದೆ ವಿರಹದ ಬೇಗೆಯಲಿ
ಬಳಲಿದನಂತೆ ಅಮರ ಪ್ರೇಮ ತ್ಯಾಗಿ.

ಆ ಕಂಗಳಲಿ ನೀ ಸುರಿವ ಸುಧೆಯ
ಹರಸುತ ಎಷ್ಟು ವರುಷಗಳು ಸರಿದರು ಸರಿಯೇ
ಸರಿದು ಹೋಗಲಿ ಜೀವಮಾನವು ಕ್ಷಣಮಾತ್ರದಲಿ
ಗೆಳತಿ! ಸುಧೆಯ ಆ ಅಮಲಿನಲಿ ಮುಳುಗಿಸಿಬಿಡು
ನನ್ನ ಬೇಡುವೆನು, ದಯಪಾಲಿಸು
ನಿನ್ನ ಅಮಲಿನಲಿ ನನ್ನ ಸಾವನ್ನ!


16 comments:

udaya said...

ಕವಿಯ ತಪಕ್ಕೆ ಒಲಿವ ವರದಾನ ಕವನ.. ಆ ಸಾಲುಗಳು ಸಾಮಾನ್ಯರಿಗೆ ಹೊಳೆಯುವುದಿಲ್ಲ..
"ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ"
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ"

ಹೀಗೆ ಎಸ್ಟೋ ಸಾಲುಗಳು ನನ್ನ ತಲೆಯಲ್ಲಿ ಯಾವಾಗಲು ಸುಳಿಯುತ್ತಿರುತ್ತವೆ..

ಎಲ್ಲ ಕವನ ಚೆನ್ನಾಗಿ ಬಂದಿದೆ.. ಕೊನೆಯ ಎರಡು ತುಂಬ ಅದ್ಬುತವಾಗಿವೆ... ಹೀಗೆ ಕವನದ ಸಾಲುಗಳು ಒಲಿಯುತಲಿರಲಿ..

Reethi said...

Geleya! nimma bagge bareyodakke padagale siguttilla. Hudukaadi tadakaadi konege sikka padvonde "u r really great". Nimma keerthi pathake hege ellade haradali.

banavaseheltiddini said...

ಆ ಕಂಗಳಲಿ ನೀ ಸುರಿವ ಸುಧೆಯ
ಹರಸುತ ಎಷ್ಟು ವರುಷಗಳು ಸರಿದರು ಸರಿಯೇ
ಸರಿದು ಹೋಗಲಿ ಜೀವಮಾನವು ಕ್ಷಣಮಾತ್ರದಲಿ
ಗೆಳತಿ! ಸುಧೆಯ ಆ ಅಮಲಿನಲಿ ಮುಳುಗಿಸಿಬಿಡು
ನನ್ನ ಬೇಡುವೆನು, ದಯಪಾಲಿಸು
ನಿನ್ನ ಅಮಲಿನಲಿ ನನ್ನ ಸಾವನ್ನ!
superb....!

Roopa Satish said...

Esha,
ellaa kavanagaLi hanigaLu tumbaa ishtavaadavu....
heege bareyuttiri :-)

prasadhebaati said...

ನಿಮ್ಮ ಶುದ್ದ ಕನ್ನಡ ತುಂಬಾ ಮನಸಿಗ್ಗೆ ನಾಟು ವಂತದು ಹಾಗು ನಿಮ್ಮ ಕವಿತೆ ಕೂಡ . ಹೀಗೆ ಬರಿತಾ ಇರಿ

kavya H S said...

Kavanagalu adbhutha.Nimma aa prashne nannannu kooda kaadide,mana muttuva kavana kaadambarigalanna odiddaga,aa prashneyanna pade pade kelikondiddene,

Anonymous said...

ಈಶಕುಮಾರ್ ರವರೇ,

ಕವನ ಸೂಪರ್ಬಾಗಿದೆ. ಇಷ್ಟೊಂದು ಚೆನ್ನಾಗಿ ನನಗಂತು ಬರೆಯೋಕೆ ಬರೋದಿಲ್ಲ. ಆ ಭಾವಚಿತ್ರದಲ್ಲಿ ಮರದ ಮೇಲೆ - ತುಂಬಾ ಹಿಡಿಸಿತು.

ಚಿತ್ರ

ತೇಜಸ್ವಿನಿ ಹೆಗಡೆ- said...

ಉತ್ತಮ ಪ್ರಯತ್ನ. ಮತ್ತಷ್ಟು ಗುಚ್ಚಗಳು ಹೊರಬರಲಿ. ಕೊನೆಯ ಹನಿಗವನ ಇನ್ನೂ ಇಷ್ಟವಾಯಿತು.

ಚರಿತಾ said...

ಈಶ, ನಿಮ್ಮ ನವಿರುಗವನಗಳು ಮನಸೆಳೆಯುತ್ತವೆ.
ಬೆಚ್ಚನೆಯ ಹೃದಯದ ಬೇಗೆಯನ್ನು ಅದೆಷ್ಟು ಚೆಂದ ಕವನವಾಗಿಸಿದ್ದೀರಿ..!!
ಅಭಿನಂದನೆಗಳು.

shishaba said...

ನೀವು ಭಗ್ನ ಪ್ರೇಮಿನಾ ?

Umesh Balikai said...

ಆಹಾ! ಮನಮೋಹಕ ಪ್ರೇಮಗವನಗಳು. ಇಷ್ಟವಾದವು. ಇನ್ನಷ್ಟು ಬರೆಯಿರಿ.

ನನ್ನ ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

- ಉಮೇಶ್

chitra said...

nice yaar.. am impressed by reading ur kavanas.. keep on writing..

ಅರಕಲಗೂಡುಜಯಕುಮಾರ್ said...

ಸರ್,
ನಿಮ್ಮ ಬ್ಲಾಗ್ ಲಿಂಕ್ ಅನ್ನು ನನ್ನ ಬ್ಲಾಗ್ ನಲ್ಲಿ ಹಾಕಿದ್ದೇನೆ, ನೀವು ಕೂಡ ನನ್ನ ಬ್ಲಾಗ್ ಲಿಂಕ್ ಅನ್ನು ನಿಮ್ಮ ಬ್ಲಾಗ್ ಲಿಸ್ಟ್ ನಲ್ಲಿ ಸೇರಿಸಬಹುದು.ಅವಕಾಶವಾದರೆ ಒಮ್ಮೆ ಸೇರೋಣ ಅಲ್ಲಿಯವರೆಗೂ ಬ್ಲಾಗ್ ಲೋಕದಲ್ಲಿ ನಮ್ಮ ಭೇಟಿ ನಿರಂತರವಾಗಿರಲಿ...
ಧನ್ಯವಾದಗಳು www.reporterjay.blogspot.com

ಶ್ರೀನಿವಾಸಗೌಡ said...

ಅಹಾ... ಎಂಥ ಕವಿತೆಗಳು...

ನಮಸ್ಕಾರ said...

ಆ ಕಂಗಳಲಿ ನೀ ಸುರಿವ ಸುಧೆಯ
ಹರಸುತ ಎಷ್ಟು ವರುಷಗಳು ಸರಿದರು ಸರಿಯೇ
ಸರಿದು ಹೋಗಲಿ ಜೀವಮಾನವು ಕ್ಷಣಮಾತ್ರದಲಿ
ಗೆಳತಿ! ಸುಧೆಯ ಆ ಅಮಲಿನಲಿ ಮುಳುಗಿಸಿಬಿಡು
ನನ್ನ ಬೇಡುವೆನು, ದಯಪಾಲಿಸು
ನಿನ್ನ ಅಮಲಿನಲಿ ನನ್ನ ಸಾವನ್ನ!


what a sentence!!!!!!! superb

Nagesh pai Kundapur said...

jivana mattu nisarga sathya vannu janara mundiduva sahasa karya mechhuvantaddu.ige munde bareyutta iri.
shubha haraisuva
Bhavya Bharathada nava nirmaana vedike.