Sunday, November 1, 2009

ಕನ್ನಡ ಉಳಿಸಬೇಕೋ? ಬೆಳೆಸಬೇಕೋ?




ಸರ್ವಜನಾಂಗದ
ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ,...
...............................................
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ! ಕುವೆಂಪು
.

ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಕಲೆತು ' ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಬಾರಿಸು ಕನ್ನಡ ಡಿಂಡಿಮವ..' ಎನುವ ರಾಷ್ಟ್ರಕವಿ ಕುವೆಂಪು ರಚಿತ ಗೀತೆಯನ್ನು ಪ್ರಾಥಮಿಕ ಶಾಲಾ ದಿನಗಳಲ್ಲಿ ಹಾಡುತ್ತಿದ್ದರೆ, ಆಗುತ್ತಿದ್ದ ರೋಮಾಂಚನ ಹೇಳತೀರದು. ಅದೇಕೋ ತಿಳಿಯದು, ನಮ್ಮ ನಾಡಿನ ಜನರನ್ನು ನಾಡಿಗಾಗಿ,ನುಡಿಗಾಗಿ, ನಾಡಿನ ಜನರಿಗಾಗಿ ದುಡಿಯಿರೆಂದು ಭಾವನಾತ್ಮಕವಾಗಿ ಬಡಿದೆಬ್ಬಿಸುವ ಧಾಟಿಯ ಕವಿಯ ಗೀತೆಯ ಬಗ್ಗೆ ಚಿಕ್ಕವನಾದ ನನಗೆ ಆಗಲೇ ಏನೋ ವಿಶೇಷ ಆಸಕ್ತಿ. ನಾವೆಲ್ಲ ದೊಡ್ಡವರಾಗಿ ಕನ್ನಡಕ್ಕೆ, ನಾಡಿಗೆ ಏನಾದರೂ ನಮ್ಮ ಕೈಲಾದ ಕೆಲಸವನ್ನ ಮಾಡಬೇಕೆಂಬ ವಾಂಛೆ ಮನದಲಿ ಮೊಳೆತ ಮುಗ್ಧ ಸಮಯವದು. ಆಗ ಏನು ಮಾಡಬೇಕು, ಹೇಗೆ ಮಾಡಬೇಕು ಕನ್ನಡದ ಕೆಲಸ ಎಂಬುದರ ಅರಿವಿಲ್ಲ. ಕನ್ನಡದ ಬಗ್ಗೆ ಅದೇನೋ ಮೋಹ, "ಕನ್ನಡವೆಂದರೆ ನಾನು, ಕನ್ನಡ ನನ್ನ ಹೆಗ್ಗುರುತು" ಅನ್ನಿಸುತಿತ್ತು ಆಗಲೇ. ರಾಷ್ಟ್ರಕ್ಕೆ, ನಾಡಿಗೆ ಸಲ್ಲಿಸುವಷ್ಟೇ ಗೌರವವನ್ನು ನನ್ನ ಭಾಷೆಗೆ ಸಲ್ಲಿಸಬೇಕು ಎಂಬ ಹುಮ್ಮಸ್ಸು ಬೆಳೆದ ಕಾಲವೆಂದರೆ ನನ್ನ ಪ್ರಾಥಮಿಕ ಶಾಲಾ ದಿನಗಳು. ಅಂದು ನಾ ಕಂಡು ಕೊಂಡ ದಾರಿಯಲೇ, ನಾ ಸಾಗುತ ಹೊಸ ಹೊಸ ರೂಪಗಳನು, ಅನುಭವಗಳನು ಹರಸುತ್ತ, ಅನುಭವಿಸುತ್ತ ಬಂದಿದ್ದೇನೆ ಎಂಬುದು ಇಂದಿಗೂ ನನ್ನದೇ ಸತ್ಯ.

'ಏನೆಲ್ಲಾ ಸಿಕ್ಕಿಲ್ಲ ಎನುವುದಕ್ಕಿಂತ, ಏನೆಲ್ಲ ಸಿಕ್ಕಿದೆ! ಭಾಷೆಯಿಂದ ನಮಗೆ.. ಭಾಷೆಯೇ ಇಲ್ಲದ ನಮ್ಮ ಜೀವನವನೊಮ್ಮೆ ಊಹಿಸಿಕೊಳ್ಳಿ?..ಉತ್ತರ ದೊರೆವುದು ನಮಗೆ. ಇಂದು ನಾವುಗಳು ಏನಾಗಿದ್ದೇವೋ,ಮುಂದೆ ಏನಾಗುತ್ತೆವೋ, ಅದಕ್ಕೆಲ್ಲ ಭಾಷೆ ನೀಡಿರುವ, ನೀಡುವ ಸಹಕಾರ ಅಪಾರವಾದುದು. ನಮ್ಮೆಲ್ಲರ ಇಂದಿನ ಸ್ಥಾನ-ಮಾನ, ಸಂಗತಿ, ಸಂತೋಷಗಳು ದೊರೆವುದು ಭಾಷೆಯಿಂದಲೇ. ಭಾಷೆ ಇಲ್ಲದೇ ನಾವುಗಳು ಏನು ಅಲ್ಲ. ನಮ್ಮೆಲ್ಲರ ಅಸ್ಥಿತ್ವದ ಮೂಲಾಧಾರಗಳಲ್ಲಿ ಭಾಷೆಯು ನಮ್ಮ ಉಸಿರಿನಷ್ಟೇ ಅವಶ್ಯಕ. ಪ್ರಕೃತಿಯ ಜೀವಿಯಾಗಿ 'ಗಾಳಿ ಎಷ್ಟು ಅವಶ್ಯವೋ, ಸಾಮಾಜಿಕ ಜೀವಿಗೆ 'ಭಾಷೆಯು' ಅಷ್ಟೆ ಅತ್ಯವಶ್ಯ'.
ಭಾಷೆ ನಮಗೇನು ಕೊಟ್ಟಿದೆಯೋ, ನಾವು ಭಾಷೆಗೇನು ಕಾಣಿಕೆ ನೀಡಿದ್ದೆವೋ ಎಂಬುದನ್ನೆಲ್ಲ ಚರ್ಚಿಸುವ ಕನ್ನಡ ಹಬ್ಬದ ಈ ಸಂಧರ್ಭದಲ್ಲಿ ನನ್ನ ಮನದಲಿ ಎದ್ದ ಯೋಚನೆಯನಿಲ್ಲಿ ಹೇಳಬೇಕು ಎನಿಸಿತು. ನಮ್ಮ ಸುತ್ತ-ಮುತ್ತಲಿನ ಸಂಘಗಳ, ಪ್ರಗತಿಪರರ, ಚಿಂತಕರ ಭಾಷಣಗಳಲಿ, ಹೋರಾಟಗಳಲಿ ವ್ಯಕ್ತವಾಗುವ 'ನಮ್ಮ ಭಾಷೆಯ ಉಳಿವಿಗಾಗಿ ನಾವೆಲ್ಲರೂ ಶ್ರಮಿಸಬೇಕು ಎನುವ' ಹೋರಾಟಗಾರರ ಕರೆಯೊಂದು ಆಗಾಗ ನಮ್ಮ ಪಂಚೇಂದ್ರಿಯಗಳನ್ನು ಜಾಗೃತ ಗೊಳಿಸುತ್ತಿರುತ್ತದೆ.
ಭಾಷೆಯ ಉಳಿವಿನ ಬಗೆಗಿನ ವಿಷಯಕ್ಕೆ ಸಂಭಂದಿಸಿದಂತೆ ಮೂಲಭೂತವಾಗಿ ನನ್ನಲ್ಲಿ ಹುಟ್ಟುವ ಪ್ರಶ್ನೆ ಎಂದರೆ "ಮುಖ್ಯವಾಗಿ ಭಾಷೆಯನ್ನ ಉಳಿಸುವ ಕೆಲಸ ಕನ್ನಡಿಗರಿಂದ ಆಗಬೇಕ? ಅಥವಾ ಭಾಷೆಯನು ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕ? ನಾವೆಲ್ಲರೂ ಭಾಷೆಯ ಉಳಿವಿಗಾಗಿಯೇ ಹೋರಾಟ ಮಾಡುವುದಾದರೆ, ಬೆಳೆಸುವವರು ಯಾರು? ಭಾಷೆಯನ್ನೂ ಬೆಳೆಸುವಲ್ಲಿ ನಾವು ನಿರತರಾದರೆ, ಭಾಷೆಯನು ಉಳಿಸುವ ಪ್ರತ್ಯೇಕ ಹೋರಾಟ ಅನಿವಾರ್ಯವೇ?"
ನನ್ನಲ್ಲಿ ಹುಟ್ಟಿದ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟು, ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗಾಗಿ ಕಾಯುವೆ ಅವುಗಳೊಂದಿಗೆ ಭಾಷೆಯ ವಿಚಾರವನು ಮತ್ತೆ ಪರಾಮರ್ಶಿಸಿ...ಉತ್ತರ ಸಿಕ್ಕರೆ ತಿಳಿಯಲು ನಿಮ್ಮಿಂದ.

10 comments:

ಜಲನಯನ said...

ಈಶ್, ನನ್ನ ಪ್ರಕಾರ ಕನ್ನಡಕ್ಕೆ ಕನ್ನಡಿಗರಿಂದಲೇ ದ್ರೋಹ ಆಗುತ್ತಿದೆ...ನಾವು ಸಾರ್ವ ಜನಿಕ ಸ್ಥಾನಗಳಲ್ಲಿ ನಮ್ಮಮಧ್ಯೆ ಕನ್ನಡದಲ್ಲಲ್ಲದೇ ಬೇರೆ ಭಾಷೆಯಲ್ಲಿ ವ್ಯವಹರಿಸುವುದ ಬಿಡಬೇಕು...ಹೆಚ್ಚು ಹೆಚ್ಚು ಕನ್ನಡ ಕಿವಿಗೆ ಬಿದ್ದರೆ..ಬೇರೆ ಭಾಷಿಗರು ನಮ್ಮ ನಾದಲ್ಲಿ ಕನ್ನಡ ಕಲಿಯಲು ಪ್ರಯತ್ನಿಸುತ್ತಾರೆ...ಯಾಕೆ..ಇದೇ ಅನುಭವ ನಮಗಾಗುವುದಿಲ್ಲವೇ..ನಾವು ತಮಿಳುನಾಡು ಇಲ್ಲ ಕೇರಳ ಅಥವಾ ಆಂಧ್ರಕ್ಕೆ ಹೋದಾಗ...

ಅರಕಲಗೂಡುಜಯಕುಮಾರ್ said...

ಮಿತ್ರ ಈಶಕುಮಾರ್,
ನಿಮ್ಮ ಪ್ರಶ್ನೆಗೆ ನಿಮ್ಮ ಜಿಜ್ಞಾಸೆಯಲ್ಲೇ ಉತ್ತರವಿದೆ, ಕನ್ನಡ ಭಾಷೆಯನ್ನು ಉಳಿಸುವ ಕೆಲಸ ಎಂದರೆ ಅದು ಕನ್ನಡ ಬೆಳೆಸುವ ವಿಚಾರಕ್ಕೆ ಪೂರಕವಾಗಿರುವಂತಹದು. ಕನ್ನಡಕ್ಕಾಗಿ ಕನ್ನಡಿಗರು ಹೋರಾಡಬೇಕೆ ವಿನಹ ಅನ್ಯರು ಬಂದು ಕನ್ನಡ ರಕ್ಷಣೆ ಮಾಡಲಾರರು. ಕನ್ನಡದ ಬಗ್ಗೆ ಕನ್ನಡಿಗರ ದ್ವಿಮುಖ ಮನೋಭಾವ ತೊಲಗಿಸುವ ಪ್ರಯತ್ನವಾದಾಗ ಮಾತ್ರ ಕನ್ನಡ ಸಂಸ್ಕೃತಿಯ, ಭಾಷೆಯ ಉದ್ದಾರ ಸಾಧ್ಯ.

ದೀಪಸ್ಮಿತಾ said...

ಇಲ್ಲಿ ಬದುಕಲು ಬರುವ ಕನ್ನಡೇತರರು, ಹಾಗೂ ನಮ್ಮ ಅನೇಕ ಕನ್ನಡಿಗ(?)ರಿಗೆ ಇಲ್ಲಿ ಜೀವನ ಮಾಡಲು ಕನ್ನಡ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಿಸಬೇಕು. ಇದು ಕೇವಲ ಹೋರಾಟ, ಹಾರಾಟ, ಚೀರಾಟ, ಅನ್ಯ ಭಾಷೆ ಫಲಕಗಳನ್ನು ಸುಡುವುದು, ಹೆದರಿಸುವುದು - ಇಂಥ ಕೃತ್ಯಗಳಂದ ಸಾಧ್ಯವಿಲ್ಲ. ಜಾಣ್ಮೆಯಿಂದ ಮಾಡಬೇಕಾದ ಕೆಲಸ ಇದು.

ಸೀತಾರಾಮ. ಕೆ. / SITARAM.K said...

ಬಾಷೆ ಬೆಳೆಯಬೇಕಾದ್ದು ದೀಪಸ್ಮಿತಾ ಹೇಳುವ ಹಾಗೇ ನಡೆದರೆ ಮಾತ್ರ. ಒಳ್ಳೇ ಲೇಖನ ಈಶಕುಮಾರ ಅವ್ರೆ

sethubandha said...

kannada ulisuvudu beda,
belesuvudoo beda,

ella kadeyali bhashe balasidare saku

balasutha hodanthe
bhashe belyutte, uliyutte alwaa

kannadavannu annada prashne madabeku

udaya said...

ಕನ್ನಡವನ್ನ ಎಲ್ಲ ಕನ್ನಡಿಗರು ಮಾತಾಡಿದರೆ ಸಾಕು... ಕನ್ನಡ ಬೆಳೆಯುತ್ತದೆ ಉಳಿಯುತ್ತದೆ. ಭಾಷೆಯನ್ನ ಮಾತಾಡುತ್ತಿದ್ದರೆ ಅದು ಉಳಿದ ಹಾಗೆ ಎಂದು ನನ್ನ ಅಭಿಪ್ರಾಯ...

shivu.k said...

ಈಶಕುಮಾರ್,

ಕನ್ನಡ ಭಾಷೆಯನ್ನು ಕನ್ನಡದವರು ಮಾತನಾಡಿದರೆ ಮಾತ್ರ ಸಾಲದು. ಬೇರೆಯವರು ಕಲಿಯಬೇಕು ಆಗ ನಮ್ಮ ಭಾಷೆ ವಿಸ್ತಾರವಾಗುವುದು.

Anonymous said...

eesha, nimma ee blog chennagide, kelavondu kanndapara sanghatanegalu bari maatinalli heluttare kannadavannu ulisi, belasi antha aadare yaaru adannu kriyege tarolla, illi kannadadalli maatanaadidare eno avamaana, avaru jaasti kalitavaralla antha tiliyuttare hegide nodi kannadanaadalli kannadadalli vyavaharisidare adu swayamkrutha aparaadha maadidanthe

Unknown said...

eesha, ee vishyadalli naanen helodandre, kannada kannada banni namma sangada yembityadi slogun helkond tirgodkintalu mukhyavaagi prtiyobbaru saha, etararu tammondige vyavaharisuvaga kannadavanne samvahanakke balasidre saku, evaru belasalagdidru vulisidare saaku. yenanti ... ? inti kaadunodi.

kavya H S said...

aliyuvantiddare alli ulisuvikeya prashne barutte, bhaashe jeeviya pramuka amshavaaddarinda avana belavanigeya jothe bhaasheya belavanige thumba mukyavaadudu, so bhaasheya ulivigaagi horaata endare arthavilladdu,adanna belasabeku.