
ಹಳೆಯ ಕ್ಯಾಲೆಂಡರ್ ಬದಲಿಸಿದಂತೆ,
ನನ್ನ ಹಳೆಯ ಕಹಿ ನೆನಪುಗಳೆಲ್ಲ
ನನ್ನಿಂದ ದೂರಾಗಿ, ಬದುಕಿನ
ಕಷ್ಟಗಳೆಲ್ಲ ಒಮ್ಮೆಗೆ ಮರೆಯಾಗಿ,
ನೋವಿನ ಬವಣೆಗಳೆಲ್ಲ ಅಂದಿನ
ದಿನಕೆ ಕೊನೆಯಾಗಿ,
ಜೀವನದ ಜಂಜಡ ಜಡತೆಗಳೆಲ್ಲ
ಆ ವರುಷದ ಹೊಳೆಯಲಿ
ಕೊಚ್ಚಿ ಹೋಗಿ, ನನ್ನೆಲ್ಲ ಗತ
ಸೋಲುಗಳು ಹೊಸ ಕನಸುಗಳ
ಹುರುಪಿನಲಿ ಸಮಾಧಿಯಾಗಿ
ಹೊಸ ವರುಷದ ದಿನ ರವಿತೇಜ
ನನ್ನ ಬಾಳಲ್ಲಿ ಹಳೆಯ
ದುಗುಡವನೆಲ್ಲ ದೂಡಿ
ಹೊಸ ಕ್ಯಾಲೆಂಡರ್ ನಂತೆ
ನವ್ಯತೆಯ ಅರುಹಿದರಷ್ಟೇ

ಹೊಸವರುಷಕೆ ಸ್ವಾಗತವು,ಸಂಭ್ರಮವು
ಈ ಜೀವಮಾನದಲಿ..ಎಂದಿಗೂ ಎಂದೆಂದಿಗೂ.
ಆದರೂ ಸಹಯಾತ್ರಿಗಳೇ ನಿಮಗೆಲ್ಲ ಹೊಸ ವರುಷ ಸಂತಸ, ಸಂಭ್ರಮ,ನಲುಮೆಯ ತುಂಬಿ ತರಲಿ ವರುಷವೆಲ್ಲ.
ಎಚ್.ಎನ್.ಈಶಕುಮಾರ್.
nice poem for welcoming new year & nice sankalpa for new year Esha.
ReplyDeleteಈಶಕುಮಾರ್,
ReplyDeleteಕವನದಲ್ಲಿ ನೀವು ಬರೆದಂತೆ ಹಳೆಯದೆಲ್ಲಾ ಮರೆತು ಹೊಸತು ಬರಮಾಡಿಕೊಳ್ಳಿ.
ಹೊಸ ವರ್ಷದ ಶುಭಾಶಯಗಳು.
ಬದುಕಿನ ಬಗೆಗಿನ ನಿಮ್ಮ ಬರವಸೆಗೆ, ನಿಮ್ಮ ಜೀವನೋತ್ಸಾಹಕ್ಕೆ ಹೊಸ ವರುಷ ಮತ್ತಷ್ಟು ಹರುಷವ ತರಲಿ ಸ್ಪೂರ್ತಿದಾಯಕವಾಗಿರಲಿ ಎಂದು ಹಾರೈಸುತ್ತಾ .....ನಿಮ್ಮ ಕವನಗಳು ಹೀಗೆ ಮೂಡಿಬರಲಿ
ReplyDeleteಹೊಸ ವರುಷ ಹರುಷ ತರಲಿ......
ReplyDeletenice poem...
ಹೊಸ ವರ್ಷದ ಶುಭಾಶಯಗಳು.
ReplyDeleteಕವನಗಳು ಹೀಗೆ ಮೂಡಿಬರಲಿ.
ನಿಮಗೆ ಶುಭವಾಗಲಿ. ಹೊಸ ವರ್ಷದ ಶುಭಾಷಯಗಳು.
ReplyDeleteWish you a very Happy and Prosperous new Year 2010.
ReplyDeleteಹೊಸ ಕ್ರಿಸ್ತ ವರ್ಷದ ಶುಭಾಶಯಗಳು. ಹೀಗೆ ಮುಂದುವರೆಯಲಿ ನಿಮ್ಮ ಕವನಗಳ ಸಾಲುಗಳು.
ReplyDeleteಈಶ ಕುಮಾರ್ ಅವರೆ...
ReplyDeleteಹೊಸ ವರುಷ ನಿಮ್ಮ ಎಲ್ಲಾ ಹಳೆಯ ಕಹಿ ನೆನಪುಗಳನ್ನೂ ಅಳಿಸಿ... ಸಿಹಿ ಸಿಹಿ ಅನುಭವಗಳನ್ನು ಹಂಚಿ ಕೊಡಲೆಂದು ಹಾರೈಸುವೆ........
ಶ್ಯಾಮಲ
ಸುಧೀರ್. ಎ., ಹುಣಸೂರು
ReplyDeleteಕಳೆದು ಹೋದ ವರುಷದಲ್ಲಿ,
ಕಹಿಯನ್ನು ಮರೆತು ಬಿಡಿ,
ಬರುವ ಹೊಸ ಮಾಸದಲ್ಲಿ,
ಸಿಹಿಯನ್ನೇ ಸವಿಯುತ್ತಾ ಇರಿ ಎಂದಿಗೂ ಎಂದೆಂದಿಗೂ...........