
ನೀ ಹಾಗೇ ಸುಮ್ಮನೆ
ನಡೆದು ಹೋಗಬಹುದಿತ್ತು
ಮೌನವೇ ನನ್ನ ಉತ್ತರವ
ಹುಡುಕುತಿತ್ತು, ಆದರೇ ನನ್ನ
ಪ್ರೀತಿಯ ಅನುಮಾನಿಸಿ ನೀ
ಆಡಿದ ಮಾತುಗಳು ಉಳಿದಿವೆ
ಎದೆಯಲಿ ನಿನ್ನ ನೆನೆಸುತ ಮತ್ತೆ ಮತ್ತೆ..
ಬಾನಲಿ ಸಂಜೆಯ ಸೂರ್ಯ

ಕವನ ಬರೆವ ಹೊತ್ತಿಗೆ,
ನೀ ಬಂದು ಹಾಗೇ ಕುಳಿತೆ
ನನ್ನ ಮುಂದೆ...
ನಾ ಕೇಳುತ್ತಿರಲಿಲ್ಲ,
ನೀ ಕಾರಣ ಹೇಳಬೇಕಲ್ಲ
ಇವನಿಗೆ ಎಂಬ ಕುಂಟು
ನೆಪವ ನೀನೆ ಹುಡುಕಿ
ನೆನಪಿನಾಳಕೆ ಇಳಿದೆ
ನೀ ಬಯಸಿ ಬಯಸಿ ದೂರಾದೆ...
nice boss:)
ReplyDeleteಚೆನ್ನಾಗಿದೆ ಸರ್ :)
ReplyDeletechennagide sir
ReplyDeleteenidu anubhavada maate :)
nice
ReplyDeleteಸೊಗಸಾಗಿದೆ .
ReplyDeleteನೆನೆಯುತ ಮತ್ತೆ ಮತ್ತೆ ಮರೀಚಿಕೆಯಂತೆ
ReplyDeleteಗಾಢ ಮೌನ ನಿನ ಪ್ರೀತಿಯ ಹುಡುಕ್ತಿತ್ತು
ಅನುಮಾನಿಸಿ ಅವಮಾನಿಸಿದ ಮಾತುಹುದುಗಿದೆ ಜಠರಾಗ್ನಿಯಲಿ
ಅಗಲಿ ದೂರಾಗಲೇಕೆ ಕುಂಟುನೆಪ ಗೆಳತಿ (?)
'ಎಚ್.ಎನ್. ಈಶಕುಮಾರ್ ' ಅವ್ರೆ..,
ReplyDeleteಅಂದದ ಕವನ..
"ನೆನೆದು ನೆನೆದು ನೊಂದೆಯ....)
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
ಚೆಂದದ ಕವನ...
ReplyDeleteಇಲ್ಲಿ ಒಬ್ಬ ಪ್ರೇಮ ವಿರಾಗಿಯ ನಿವೇದನೆ ಇದೆ - ಅವಳು ಹಾಗೆ ಸುಮ್ಮನೆ ಹೋಗಬೇಕಿತ್ತು. ಮೌನವೇ ನನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರವ ಹುದುಕುತಿತ್ತು. ಆದರೆ ಮನಸ್ಸಿನಲ್ಲಿ ಬಂದ ಈ ಪ್ರೀತಿ ನನ್ನ ಅನುಮಾನಿಸಿ ಆಡಿದ ಆ ಮಾತುಗಳು ಇನ್ನು ನನ್ನ ಮನಸ್ಸಲ್ಲಿ ಉಳಿದಿದೆ ಸವಿಯಾದ ನೋವನ್ನ ಉಳಿಸಿ ಮತ್ತೆ ಅದ ನಾ ನೆನೆಯುತ್ತ.
ReplyDeleteಅವಳು ಅವನಲ್ಲಿ ಹುಟ್ಟಿಸಿದ ಪ್ರೀತಿ ನಂತರ ಕಾರಣ ಹೇಳದೆ ಅವಳು ಕುಂಟು ನೆಪವನ್ನು ಹೇಳಿ ದೂರಾಗಿ ಅವನ ನೆನಪಿನಾಳಕೆ ಇಳಿದು ಬಯಸಿ ದೂರಾದೆ ಈ ಎರಡು ಕವನಗಳು ಚನ್ನಾಗಿದೆ ಭಾವನಾತ್ಮಕವಾಗಿದೆ. ಈಶ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರುಷವು ಹೊಸತನ್ನು ತರಲಿ ಎಂದು ನನ್ನ ಹಾರೈಕೆ.
ಕುಂಟು ನೆಪ ಹುಡುಕುತ್ತ, ಬಯಸಿ ಬಯಸಿ ಮಾಡುವ ಸುಂದರ ತಪ್ಪುಗಳು ಈ ವರ್ಣರಂಜಿತ ಬದುಕಿನಲ್ಲಿ ಅರ್ಥವಾಗದೆ ಉಳಿದುಬಿಡುವ ಶುದ್ಧ ಅಮೂರ್ತತೆ ಮಾತ್ರ. ಹಾಗಾಗಿಯೇ ಆ ತಪ್ಪುಗಳನ್ನು ಹೆಚ್ಚು ಅನುಮಾನಿಸದೆ, ಪ್ರಶ್ನಿಸದೆ, ಇದ್ದ ಹಾಗೆಯೇ ಇಟ್ಟು ಸುಮ್ಮನೆ ನಡೆದುಬಿಡುವುದು ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಬಹುದು.
ReplyDeleteಇಂತಹ ಜೀವಂತ ಕವನಗಳು ಬಯಸಿ ಬಯಸಿ ದೂರಾಗುವುದನ್ನೆ ಬಯಸಿದಂತಿವೆ..
:-)
So meaningful - i used it in my Orkut...
ReplyDeletenice one sir........
ReplyDeleteReally nice & touchy....:)
ReplyDeletehmmm... matte..matte..meluku hakuvanthive..kavanada saalugaLu
ReplyDeletehi
ReplyDeletegood poem... simple ... keep it this way..
-Sreeja