Wednesday, March 10, 2010

ನೆನೆಯುತ ಮತ್ತೆ ಮತ್ತೆ...


ನೀ ಹಾಗೇ ಸುಮ್ಮನೆ
ನಡೆದು ಹೋಗಬಹುದಿತ್ತು
ಮೌನವೇ ನನ್ನ ಉತ್ತರವ
ಹುಡುಕುತಿತ್ತು, ಆದರೇ ನನ್ನ
ಪ್ರೀತಿಯ ಅನುಮಾನಿಸಿ ನೀ
ಆಡಿದ ಮಾತುಗಳು ಉಳಿದಿವೆ

ಎದೆಯಲಿ ನಿನ್ನ ನೆನೆಸುತ ಮತ್ತೆ ಮತ್ತೆ..

ಬಾನಲಿ ಸಂಜೆಯ ಸೂರ್ಯ

ಕವನ ಬರೆವ ಹೊತ್ತಿಗೆ,
ನೀ ಬಂದು ಹಾಗೇ ಕುಳಿತೆ

ನನ್ನ ಮುಂದೆ...


ನಾ ಕೇಳುತ್ತಿರಲಿಲ್ಲ,
ನೀ ಕಾರಣ ಹೇಳಬೇಕಲ್ಲ
ಇವನಿಗೆ ಎಂಬ ಕುಂಟು
ನೆಪವ ನೀನೆ ಹುಡುಕಿ
ನೆನಪಿನಾಳಕೆ ಇಳಿದೆ
ನೀ ಬಯಸಿ ಬಯಸಿ ದೂರಾದೆ...

15 comments:

ಗೌತಮ್ ಹೆಗಡೆ said...

nice boss:)

Unknown said...

ಚೆನ್ನಾಗಿದೆ ಸರ್ :)

ಸಾಗರದಾಚೆಯ ಇಂಚರ said...

chennagide sir
enidu anubhavada maate :)

ಸೀತಾರಾಮ. ಕೆ. / SITARAM.K said...

nice

Shashi jois said...

ಸೊಗಸಾಗಿದೆ .

ALL IN THE GAME said...

ನೆನೆಯುತ ಮತ್ತೆ ಮತ್ತೆ ಮರೀಚಿಕೆಯಂತೆ
ಗಾಢ ಮೌನ ನಿನ ಪ್ರೀತಿಯ ಹುಡುಕ್ತಿತ್ತು
ಅನುಮಾನಿಸಿ ಅವಮಾನಿಸಿದ ಮಾತುಹುದುಗಿದೆ ಜಠರಾಗ್ನಿಯಲಿ
ಅಗಲಿ ದೂರಾಗಲೇಕೆ ಕುಂಟುನೆಪ ಗೆಳತಿ (?)

ಮನಸಿನಮನೆಯವನು said...

'ಎಚ್.ಎನ್. ಈಶಕುಮಾರ್ ' ಅವ್ರೆ..,

ಅಂದದ ಕವನ..
"ನೆನೆದು ನೆನೆದು ನೊಂದೆಯ....)

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

ಸವಿಗನಸು said...

ಚೆಂದದ ಕವನ...

Anonymous said...

ಇಲ್ಲಿ ಒಬ್ಬ ಪ್ರೇಮ ವಿರಾಗಿಯ ನಿವೇದನೆ ಇದೆ - ಅವಳು ಹಾಗೆ ಸುಮ್ಮನೆ ಹೋಗಬೇಕಿತ್ತು. ಮೌನವೇ ನನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರವ ಹುದುಕುತಿತ್ತು. ಆದರೆ ಮನಸ್ಸಿನಲ್ಲಿ ಬಂದ ಈ ಪ್ರೀತಿ ನನ್ನ ಅನುಮಾನಿಸಿ ಆಡಿದ ಆ ಮಾತುಗಳು ಇನ್ನು ನನ್ನ ಮನಸ್ಸಲ್ಲಿ ಉಳಿದಿದೆ ಸವಿಯಾದ ನೋವನ್ನ ಉಳಿಸಿ ಮತ್ತೆ ಅದ ನಾ ನೆನೆಯುತ್ತ.

ಅವಳು ಅವನಲ್ಲಿ ಹುಟ್ಟಿಸಿದ ಪ್ರೀತಿ ನಂತರ ಕಾರಣ ಹೇಳದೆ ಅವಳು ಕುಂಟು ನೆಪವನ್ನು ಹೇಳಿ ದೂರಾಗಿ ಅವನ ನೆನಪಿನಾಳಕೆ ಇಳಿದು ಬಯಸಿ ದೂರಾದೆ ಈ ಎರಡು ಕವನಗಳು ಚನ್ನಾಗಿದೆ ಭಾವನಾತ್ಮಕವಾಗಿದೆ. ಈಶ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರುಷವು ಹೊಸತನ್ನು ತರಲಿ ಎಂದು ನನ್ನ ಹಾರೈಕೆ.

ಚರಿತಾ said...

ಕುಂಟು ನೆಪ ಹುಡುಕುತ್ತ, ಬಯಸಿ ಬಯಸಿ ಮಾಡುವ ಸುಂದರ ತಪ್ಪುಗಳು ಈ ವರ್ಣರಂಜಿತ ಬದುಕಿನಲ್ಲಿ ಅರ್ಥವಾಗದೆ ಉಳಿದುಬಿಡುವ ಶುದ್ಧ ಅಮೂರ್ತತೆ ಮಾತ್ರ. ಹಾಗಾಗಿಯೇ ಆ ತಪ್ಪುಗಳನ್ನು ಹೆಚ್ಚು ಅನುಮಾನಿಸದೆ, ಪ್ರಶ್ನಿಸದೆ, ಇದ್ದ ಹಾಗೆಯೇ ಇಟ್ಟು ಸುಮ್ಮನೆ ನಡೆದುಬಿಡುವುದು ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಬಹುದು.
ಇಂತಹ ಜೀವಂತ ಕವನಗಳು ಬಯಸಿ ಬಯಸಿ ದೂರಾಗುವುದನ್ನೆ ಬಯಸಿದಂತಿವೆ..
:-)

Pailoor said...

So meaningful - i used it in my Orkut...

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

nice one sir........

Unknown said...

Really nice & touchy....:)

Unknown said...

hmmm... matte..matte..meluku hakuvanthive..kavanada saalugaLu

Anonymous said...

hi
good poem... simple ... keep it this way..

-Sreeja