ಹುಡುಕುತ ನಿಂತೆ
ಎದೆಯಾಳದಲಿ ಹುದುಗಿರುವ
ನೆನಪಿಗೆ ಬಣ್ಣವ
ಕುಂಚ ಮೂಡಿಸಿದ
ವಯ್ಯಾರ ಚಿತ್ರಗಳ
ಹರಾಜಿನಲ್ಲಿಟ್ಟು
ಬೆಲೆ ಕಟ್ಟುತಿರುವರು
ಸುತ್ತಲು ಭಾವದ ಬಣ್ಣಕ್ಕೆ!
ಬಗೆ ಬಗೆಯ ಬಣ್ಣಗಳ
ಚಿತ್ರ ರಾಶಿ
ಸಂಜೆ ಗೋಧೂಳಿಯಲಿ
ಆವರಿಸಿದ ಮಬ್ಬನು
ಕಾಯುವ ಕುರಿಗಳಿಗೆ
ತಿಳಿಸಿ ಹೆಜ್ಜೆ ಕೂಡಿಸಿದ
ಹಳ್ಳಿ ಹೈದನ ಬಿರುಸಿಗೆ
ಹೊಂಬಣ್ಣ ಬಳಿದ
ಪಡುವಣದ ಸೂರ್ಯ.
ಚಿತ್ರಕಾರನ ನೋಟಕೆ ನಾಚಿ
ಬಿರಿದ ಮಾಸಲೊಪ್ಪದ ತುಂಟನಗೆ
ಬಿಗುವಾದ ಅವಳೆದೆಯಲಿ
ಅರಳಿದ ಕಾಮನೆಗಳಿಗೆ
ಬಣ್ಣ ರಾಶಿ ಹಾಕಿ
ಚಿತ್ರ ಸಂತೆಯಲಿ ಹುಡುಕುತಲಿರುವನು
ಕೂತು ಕಾಮನಬಿಲ್ಲ
ಕನಸುಗಾರ!
7 comments:
ಸುಂದರ ಕವನ.ಇಷ್ಟವಾಯ್ತು.
ವಾರೇವ್ಹಾ, ಎಂಥ ಕಲಾವಿದ ಮನಸು ನಿಮ್ಮದು!
nimma chitra santeya padagalemba bannada raashiya munde mookavayitu nanna anisike. It's very nice.
ಸುಂದರವಾದ ಕವಿತೆ ಈಶ ಕುಮಾರ್ ರವರೆ..:))) ಚಿತ್ರಸಂತೆಯಲ್ಲಿ ಕಲಾವಿದ ವಿವಿಧ ಬಣ್ಣಗಳನ್ನು ತನ್ನ ಕುಂಚದಲ್ಲದ್ದಿ ಮನಸ್ಸಿನಲ್ಲಿ ಮೂಡಿ ನಿಲ್ಲುವ ಭಾವನೆಗಳನ್ನು ತನ್ನ ಚಿತ್ರಪಟಗಳ ಕ್ಯಾನ್ ವಾಸ್ ಮೇಲೆ ಮೂಡಿಸುವ ಆತನ ಜಾಣ್ಮೆಯನ್ನು ಸುಂದರ ಪದಗಳ ಸಹಾಯದಿಂದ ಹಿಡಿದಿದ್ದೀರಿ.. ಕವಿತೆಯಲ್ಲಿ ಬಣ್ಣಗಳ ಚಿತ್ತಾರ ರಮ್ಯ ಮನೋಹರವೆನಿಸುತ್ತದೆ.. ನಿಮ್ಮ ಉಪಮೆಗಳೂ ನವ್ಯವೆನಿಸುತ್ತವೆ.. ತುಂಬಾ ಮೆಚ್ಚುಗೆಯಾಯಿತು..:))) ಇನ್ನಷ್ಟು ಬರೆಯಿರಿ, ನಿಮಗೆ ಶುಭವಾಗಲಿ..:)))
ಈಶ,
ಚಿತ್ರಗಳು ಈಗಲೂ ಸಾಹಿತ್ಯಕ್ಕೆ ಪೂರಕವಾದ
'illustration'(ಸಾಂದರ್ಭಿಕ ಚಿತ್ರ)ಗಳಾಗಿಯೇ ಜನಕ್ಕೆ ಪರಿಚಿತವಾಗಿರುವುದನ್ನು ಕಾಣುತ್ತೇವೆ.ಹೀಗಿದ್ದಾಗ, ಚಿತ್ರಗಳಿಂದ ಸ್ಫೂರ್ತಿ ಪಡೆದು ರಚನೆಗೊಂಡ ಇಂಥ ಕಾವ್ಯ-ಸಾಹಿತ್ಯ ಕಂಡಾಗ ಖುಶಿಯಾಗುತ್ತೆ!
ಪದಗಳು ಚಿತ್ರಗಳಾಗಿ, ಚಿತ್ರಗಳು ಪದಗಳಾಗಿ ರೂಪಾಂತರಗೊಳ್ಳುವ ಇಂಥ ಸುಂದರ ಕೊಡುಕೊಳ್ಳುವಿಕೆ ಹೀಗೇ ನಿರಂತರವಾಗಿರಲಿ. :-)
- ಚರಿತಾ
eesha kumar thumba chennagide e kavana... ninna berella kavagaligintha bhinnavaagide e vasthu vishaya nirupane ella ... Niveditha
eesha kumar thumba chennagide e kavana... ninna berella kavagaligintha bhinnavaagide e vasthu vishaya nirupane ella ... Niveditha
Post a Comment