Sunday, July 8, 2012

ಕವಿದ ಕಾರ್ಮೋಡ!




ಮುಸ್ಸಂಜೆಯ ಸಮಯ ಮಳೆ
ಬರುವ ಹಾಗೇ ಕಾರ್ಮೋಡ
ಯಾಕೋ ನಿನ್ನ ನೆನಪಾಗಿ 
ಬರೆಯುತ ಕೂತೆ.
ಎರಡೇ ಸಾಲು; ಧೋ ಎನ್ನುವ 
ಮಳೆಯ ಹನಿ 
ನೋಡುತ 'ನೆನೆದ' ಮನದ
ತುಂಬೆಲ್ಲ ನಿನ್ನದೇ ರೂಪ.

ಕಾಯುತ ಕೂತ ನಗೆ
ಮೊಗದ ಚೆಲುವೆಗೆ ಮುನಿಸು 
ಬರುವುದು ಚೆಲುವನ ಮೇಲಲ್ಲ 
'ಸಂಧ್ಯಾ'ಸಮಯಕೆ ಸರಿದಾರಿಯಲಿ 
ಕಾರ್ಮೋಡ, ಮಬ್ಬು.
ಹೊತ್ತು ತರುವನು ಇನಿಯ 
ಹನಿ ಹನಿಯಲು 
ಮೋಹ ತುಂಬಿದ ಒಲವ 
ಕಾಯುತ 'ನೆನೆದ' ಮನದ 
ತುಂಬೆಲ್ಲ ಪ್ರೀತಿಯದೇ ಕುರುಹು.

ಕಣ್ಣಂಚಿನ ಕಾತುರಕು ಮೆರಗು
ಕವಿದ ಕಾರ್ಮೋಡವ ಸೀಳಿ 
ಮಿರುಗುವ ಮಿಂಚಿನಲಿ ಹೊಳೆವ 
ಅವಳ ಹಸಿಮೊಗದ ಹುಸಿನಗೆ.
ಕಂಡು ಕಾಣದ ಪ್ರೇಮದ ಲಹರಿಗೆ 
ಸೋತು ನಲಿವ 'ನೆನೆದ' ಮನದ
ತುಂಬೆಲ್ಲ ಜೀವದ ಬಯಕೆ.

ಕವಿದ ಕಾರ್ಮೋಡ...
...............ಮಬ್ಬು...
ಸಂಜೆಮಳೆ ಬರುವ 
ಹಾಗೇ...


2 comments:

Badarinath Palavalli said...

ಒಲುಮೆ ನಗು ಮತ್ತು ಕಾರ್ಮೋಡದ ಸಂಗಮ ಚೆನ್ನಾಗಿದೆ.

ನನ್ನ ಬ್ಲಾಗಿಗೂ ಸ್ವಾಗತ.

Unknown said...

ಎಷ್ಟೊಂದು ಭಾವತೀವ್ರತೆ..!! ನೆನಪುಗಳ ಕರ್ಮೋಡ ಕರಗಿ ಸುರಿದಾಗ .. ನೆನೆವುದು ಮನ ಹಿತವಾಗಿ.Mina.