ಹಾಯ್ಕು !!!!
ಮಂಜು ಕವಿದ ಮುಸ್ಸಂಜೆ
ಚಳಿಯ ನಡುಕ
ದಾರಿ ತಪ್ಪಿಹ ಗುಬ್ಬಿಮರಿ.
********************
ಶರತ್ಕಾಲದ ಚಳಿಯೂ
ಕತ್ತಲಲೆ ಮುಳುಗಿಹ
ಮುಂಜಾವು.
*********************
ಸಾಗದ ದಾರಿ
ತಿರುವಿನಲ್ಲಿ ಫಲಕ
ಸೂಚನೆಗಳ ಗೋಜಲಿಗೆ
ನಿಲುಕದ ಬದುಕು.
*********************
ಕಾಮನಬಿಲ್ಲ ಮಾತಾಡಿಸಿ
ಬಂದ ಮೋಡಗಳು
ಬಣ್ಣದ ಮಾತಾಡುತ್ತಿವೆ.
1 comment:
ಮೋಡಗಳು ಬಣ್ಣದ ಮಾತನಾಡುತ್ತಿವೆ ಚಂದದ ಸಾಲುಗಳು
Post a Comment